Samartha Bharata is organising Second Phase of  STATE LEVEL ONE CRORE SAPLING PLANTATION DRIVE from June 5 to August 15, 2018.

Samartha Bharata is organising Second Phase of  STATE LEVEL ONE CRORE SAPLING PLANTATION DRIVE from June 5 to August 15, 2018.

World Environment Day RVTC June 5 2018 (15)

Phase-2 of Statewide Sapling Plantation Drive June 5 to August 15-2018, Inaugural Ceremony at RV Teachers College, Jayanagar June 5, 2018.

Bengaluru June 5, 2018: Samartha Bharata organised second phase of statewide 1 crore sapling plantation drive was launched on Tuesday June 5, 2018 at RV Teachers College, Jayanagar, Bengaluru.

Eminent Tree conservationist Sri Vijay Nishant, Educationist and Principal of RV Teachers College Dr Krishnaiah, Trustee of Samartha Bharata Sri Rajesh Padmar addressed the inaugural ceremony. Saplings and seedballs were distributed to all students and faculties during the ceremony. Everyone took eco-pledge,  with an aim of protecting the environment

Samartha Bharata, is a Karnataka state level NGO promoting social voluntarism among Youth.  Samartha Bharata is organising a state-wide mega campaign on planting 1 CRORE SAPLINGS from June 5 to August 15, 2018 across the state. This major campaign of ecological conservation is supported by more than 600 reputed socially active NGOs of the state.

Report of PHASE -1 of Plantation Drive from Last Year, June 5 to August 15, 2017:

 

·         Total number of Saplings Planted – 14,09,921

·         Total number of SeedsBalls Prepared – 52,20,550

·         Total number of SeedsBall Tossing – 44,82,830

·         Volunteers registered: 28,011

·         No of NGO’s joined the Campaign: 368

Need of the Campaign: Today’s major social concern is on global ecological and environmental issues which are affecting the living forms including mankind as a part of this Biosphere. Increasing Global warming, scarcity of available fresh water, heavy seasonal variations, imbalanced annual rain fall which results in drought in many areas, decreasing green cover (forest area) due to anthropocentric activities such as urbanisation, habitat fragmentation etc. Rivers which are the sources of fresh water for livelihood of millions of people and animals, are now dried up. Once a fertile land, now is suffering a slow and steady desertification. Several international summits seriously discussed all these issues in a broader scale.

The National Forest policy says we need 33% of Forest area. As of 2010, the Food and Agriculture Organisation of the United Nations estimates India’s forest cover to be about 68 million hectares or 22% of the country’s area. The 2013 Forest Survey of India states its forest cover increased to 69.8 million hectares by 2012, per satellite measurements; this represents an increase of 5,871 square kilometers of forest cover in 2 years. The role of forests in the national economy and in ecology was further emphasized in the 1988 National Forest Policy, which focused on ensuring environmental stability, restoring the ecological balance, and preserving the remaining forests. In 1988, the Forest Conservation Act of 1980 was amended to facilitate stricter conservation measures. A new target was to increase the forest cover to 33% of India’s land area from the then-official estimate of 23%. In June 1990, the central government adopted resolutions that combined forest science with social forestry, that is, taking the socio-cultural traditions of the local people into.

The roadmap and permanent solution for all the ecological and environmental issues is increasing the Green Cover of our mother earth. Hence this mega plantation drive is organised.

About the Campaign:

  • Duration: From June 5th to August 15, 2018 (World Environment Day to Independence Day).
  • Places: At the level of all Taluks of state. Planting will be done at appropriate places, suitable public bare places or open fields and also at private lands, with prior consent with respective persons and institutions.
  • Selection of Plants: Plants which ecologically plays a significant role are selected for the sapling plantaion campaign. The species will vary from place to place based on local geography. As per suggestions by experts, few plants such as Acacia, Eucalyptus etc are excluded from this campaign.
  • 3 Categories: Campaign will have 3 types for planting drive:
  1. Direct planting of Sapling.
  2. Direct use of Seeds for germination -Seedling (ಬೀಜ ಬಿತ್ತನೆ) .
  3. Throwing Seed Balls at suitable bare areas.
  • Public Participation: From students to Techies, from street vendors to software professionals, Movie Personalities to Journalists, many are part of this major campaign of 1 crore sapling planting drive. Campaign is supported by several Schools, Colleges, NGOs, Corporate companies, local youth organisations, Temple trusts, Ecological forums and also thousands of volunteers at individual scale. Forest department of both Central and State Government assured their full support for our campaign by providing saplings at district/zonal level. Ministry of Raliways also assured the support by providing the place for planting on either sides of Railway tract at specific areas in the state.
  • Seed Ball Preparation workshops and camps is underway at many parts of the state in collaboration with likeminded NGOs such as Utthishta Bharata. Already nearly 30 lakhs Seed Ball is ready to be used.
  • #SelfiewithPlant : Social Media platforms were effectively used for this campaign with Infographics and videos promoting the spirit of ecological conservation. “Selfie with Plant”is such a concept, any volunteer can upload his/her photo in Twitter or Facebook with a hashtag #SamarthaBharata.
  • Public can contribute by: 
  • 1.Providing fresh Plants.
  • 2.Providing Tree Guards.
  • 3.Identifying the Location for plantation.
  • 4.Donation for Tree Guards/Plants/Water/Fertilizer & etc.
  • 5.Proper Maintenance support for 3 years.
  • 6.Volunteers for Planting tree.
  •  7.Volunteers for follow-up.
  • 8.Water Supply arrangement on alternate days for plants.
  • 9. Create Awareness/Publicity to make more people involvement.
  • 10.Promoting Campaign via SMS/WhatsApp/Facebook/Twitter.
  • Contact Numbers: 8792662262, 9731264009, 9980000993. For more details: samarthabharata.org

ಸಮರ್ಥ ಭಾರತ ಸಂಸ್ಥೆಯು ಆಯೋಜಿಸಿರುವ ಕೋಟಿ ಗಿಡ ನೆಡುವ ಬೃಹತ್ ಅಭಿಯಾನ ಎರಡನೇ ಹಂತ ರಾಜ್ಯಾದ್ಯಂತ ಜೂನ್ 5ರಿಂದ ಆಗಸ್ಟ್ 15, 2018ರವರೆಗೆ  ನಡೆಯಲಿದೆ.

 

ರಾಜಸ್ಥಾನದ ನಂತರ ಭಾರತದಲ್ಲಿ ಅತಿಹೆಚ್ಚು ಹಾಗೂ ಅತಿವೇಗವಾಗಿ ಒಣಮರುಭೂಮಿಯಾಗುತ್ತಿರುವ (desertification)  ರಾಜ್ಯಗಳ ಪೈಕಿ ಕರ್ನಾಟಕವೂ ಒಂದು ಎಂಬ  ಅಧ್ಯಯನ ವರದಿಯೊಂದು ನಿಜಕ್ಕೂ ಆತಂಕಕಾರಿ. ಕಳೆದ ಮೂರ್ನಾಲ್ಕು ದಶಕಗಳಿಂದ ನಾನಾ ಕಾರಣಕ್ಕಾಗಿ ನಮ್ಮ ರಾಜ್ಯದ ಹಸಿರ ಹೊದಿಕೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಒಂದೊಮ್ಮೆ ‘ಸುಂದರ ನದಿ ವನಗಳ ನಾಡೇ’, ‘ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳ ನಾಡು’ ಎಂದು ಹಿರಿಯ ಕವಿಗಳಿಂದ ಕರೆಯಿಸಿಕೊಂಡಿದ್ದ ನಮ್ಮ ಕನ್ನಡ ನೆಲ ಇದೀಗ ಪ್ರಾಕೃತಿಕವಾಗಿ ಸೊರಗಿದೆ.  ಕನ್ನಡ ನೆಲವನ್ನು ಮತ್ತೆ ಹಸಿರಾಗಿಸುವ ಬೃಹತ್ ರಾಜ್ಯವ್ಯಾಪಿ ಅಭಿಯಾನವೊಂದರ ಎರಡನೆಯ ಹಂತವು ಮುಂದಿನ ಜೂನ್ ತಿಂಗಳಿನಿಂದ ನಡೆಯಲಿದೆ.

ಪರಿಸರ ಸಂರಕ್ಷಣೆ ಹಾಗೂ ಹಸಿರ ಹೊದಿಕೆ ಹೆಚ್ಚಿಸುವ ಉದ್ದೇಶದಿಂದ ಸಮರ್ಥ ಭಾರತ ಸಂಸ್ಥೆಯು ಆಯೋಜಿಸಿರುವ 

ಕೋಟಿ ಗಿಡ ನೆಡುವ ಬೃಹತ್ ಅಭಿಯಾನ ಎರಡನೇ ಹಂತವು ರಾಜ್ಯಾದ್ಯಂತ ಜೂನ್ 5ರಿಂದ ಆಗಸ್ಟ್ 15, 2018ರವರೆಗೆ  ನಡೆಯಲಿದೆ.

600ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಸಹಕಾರ; ಮರಗಳ ನಿರ್ವಹಣೆಯತ್ತ ಗಮನ.

ಈ ಅಭಿಯಾನಕ್ಕೆ ರಾಜ್ಯದ ಸುಮಾರು 600ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಕೈಜೋಡಿಸಲಿವೆ. ರಾಜ್ಯಾದ್ಯಂತ ಸುಮಾರು 1 ಕೋಟಿಗೂ ಅಧಿಕ ಗಿಡ ನೆಡುವ ಪ್ರಕ್ರಿಯೆಗೆ ಈಗಾಗಲೇ ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆ ಗಿಡಗಳನ್ನು ನೀಡುವುದಾಗಿ ಭರವಸೆ ನೀಡಿದೆ.  ಈಗಾಗಲೇ ಅನೇಕ ಸಂಘ ಸಂಸ್ಥೆಗಳು 30 ಲಕ್ಷಕ್ಕೂ ಮಿಕ್ಕ ಸೀಡ್ ಬಾಲ್ ಗಳನ್ನು ತಯಾರು ಮಾಡಿವೆ. ಈ ಅಭಿಯಾನಕ್ಕೆ ರಾಜ್ಯದ  ಶಾಲಾ-ಕಾಲೇಜುಗಳು, ನಾನಾ ಕಾರ್ಪೊರೇಟ್ ಸಂಸ್ಥೆಗಳೂ ಕೂಡ ಕೈಜೋಡಿಸಿವೆ. ಗಿಡಗಳನ್ನು ನೆಡುವುದು ಮಾತ್ರ ನಮ್ಮ ಜವಾಬ್ದಾರಿ ಆಗಬಾರದು. ನೆಟ್ಟ ಬಳಿಕ ಅದರ ಪಾಲನೆ, ನಿರ್ವಹಣೆಯತ್ತಲೂ ಗಮನಹರಿಸಲು ಮನವಿ ಮಾಡಲಾಗಿದೆ. ಆಯಾ ಪ್ರದೇಶಕ್ಕೆ ಹೊಂದಿಕೊಳ್ಳುವ ಗಿಡಗಳನ್ನು ನೆಡುವುದು ಮತ್ತು ಕನಿಷ್ಠ ಮೂರು ವರ್ಷಗಳ ಕಾಲ ಸಂರಕ್ಷಣೆ ಮಾಡಲು ಸಾಧ್ಯವಾಗುವ ಕಡೆಗಳಲ್ಲಿ ಮಾತ್ರ ಗಿಡಗಳನ್ನು ನೆಡಬೇಕು ಎಂದು ಮನವಿ ಮಾಡಲಾಗಿದೆ.

2017 ಜೂನ್ 5 ರಿಂದ ಆಗಸ್ಟ್ 15 ತನಕ ಜರಗಿದಮೊದಲ ಸಸಿ ನೆಡುವ ಅಭಿಯಾನದ ವಿವರ ಹೀಗಿದೆ.

·         ನೆಡಲಾದ  ಒಟ್ಟು ಗಿಡಗಳು  14,09,921

·         ತಯಾರಿಸಲಾದ ಒಟ್ಟು ಬೀಜದುಂಡೆಗಳು (ಸೀಡ್ ಬಾಲ್ ಗಳು) –  52,20,550

·         ಎಸೆಯಲಾದ ಬೀಜದುಂಡೆಗಳು  (ಸೀಡ್ ಬಾಲ್ ಗಳು)-  44,82,830

·         ಸಾರ್ವಜನಿಕರ ಸಹಭಾಗಿತ್ವ –  28,011

·         ಅಭಿಯಾನಕ್ಕೆ ಸಹಕರಿಸಿದ ಸಂಸ್ಥೆಗಳು – 368

ಹೀಗಿರಲಿದೆ ಅಭಿಯಾನ
ಯಾವಾಗ
? ಜೂನ್ 5ರಿಂದ ಆಗಸ್ಟ್ 15, 2018 ರವರೆಗೆ

  • ಎಲ್ಲಿ?ತಾಲೂಕು- ಹೋಬಳಿ-ಗ್ರಾಮ ಪಂಚಾಯತಿ ಮಟ್ಟದಲ್ಲಿ. ಸರಕಾರಿ ಅಥವಾ ಖಾಸಗಿ ಖಾಲಿ ಸ್ಥಳಗಳಲ್ಲಿ. ಇದಕ್ಕಾಗಿ ಸಂಬಂಧಪಟ್ಟವರಲ್ಲಿ ಪೂರ್ವ ಅನುಮತಿ ತೆಗೆದುಕೊಳ್ಳಬೇಕು.
  • ಯಾವ ಗಿಡ?ಪ್ರದೇಶಾನುಸಾರವಾಗಿ ಹೆಚ್ಚಾಗಿ ಹಣ್ಣು-ಹಂಪಲು, ನೆರಳು ಹಾಗೂ ಜೀವ ವೈವಿಧ್ಯಕ್ಕೆ ಪೂರಕವಾಗಬಲ್ಲ ಮರಗಳನ್ನೇ ಆಯ್ಕೆ ಮಾಡಬೇಕು. ಅಕೇಶಿಯಾ, ನೀಲಗಿರಿ (ಯುಕಲಿಪ್ಟಸ್) ಮರಗಳನ್ನು ನೆಡಬಾರದು ಎಂಬುದು ಪರಿಸರ ತಜ್ಞರ ಸಲಹೆ.
  • ಯಾರೆಲ್ಲ ಭಾಗಿ?- ಕೃಷಿಕ, ಸಾಫ್ಟ್ವೇರ್ ತಂತ್ರಜ್ಞ, ವಿದ್ಯಾರ್ಥಿ, ಅಧ್ಯಾಪಕ, ವ್ಯಾಪಾರಿ ಇತ್ಯಾದಿ ಎಲ್ಲರೂ.
  • 3 ಪ್ರಕಾರಗಳಲ್ಲಿ ಅಭಿಯಾನ ನಡೆಯಲಿದೆ. 1. ಪ್ರತ್ಯಕ್ಷ ಗಿಡ ನೆಡುವುದು. 2. ಸೀಡ್ ಬಾಲನ್ನು ಎಸೆಯುವುದು ಅಥವಾ ನೆಲದಲ್ಲಿ ಹೂತು ನೆಡುವುದು, 3. ಆಯಾ ಗಿಡಗಳ ಬೀಜಗಳನ್ನು ನೇರವಾಗಿ ಬಿತ್ತುವುದು.
  • ಸೀಡ್ ಬಾಲ್ ತಯಾರಿ ಪ್ರಶಿಕ್ಷಣಬೀಜದ ಉಂಡೆ ಅಥವಾ ಸೀಡ್ ಬಾಲ್ ತಯಾರಿ ಒಂದು ಉತ್ತಮವಾದ ವಿಧಾನ. ಈ ಕುರಿತ ಮಾಹಿತಿಗಾಗಿ (ಸಂಪರ್ಕಿಸಿ: ನೀರಜ್ ಕಾಮತ್ 9964142207)
  • ಗಿಡದ ಜೊತೆ ಸೆಲ್ಫಿ: ಗಿಡಗಳನ್ನು ನೆಡುವ- ಬೆಳೆಸುವ ಸ್ವಯಂಸೇವಕರು ಅವುಗಳ ಜೊತೆ ಸೆಲ್ಫಿ ತೆಗೆದು #SamarthaBharata ಹ್ಯಾಷ್ ಟ್ಯಾಗ್‌ನೊಂದಿಗೆ ಟ್ವಿಟ್ಟರ್ ಅಥವಾ ಪೇಸ್ ಬುಕ್ ನಲ್ಲಿ ಹಂಚಿಕೊಳ್ಳಬಹುದು.
  • ಸಾರ್ವಜನಿಕರ ಸಹಭಾಗಿತ್ವ ಹೇಗೆ?
    – ಅಭಿಯಾನಕ್ಕೆ ಗಿಡಗಳನ್ನು ಒದಗಿಸುವುದು
    – ನೆಟ್ಟ ಗಿಡಕ್ಕೆ 3 ವರ್ಷ ಸೂಕ್ತ ಸಂರಕ್ಷಣೆ – ನೀರು ಪೂರೈಕೆ, ಗೊಬ್ಬರ ಬೇಕಿದ್ದಲ್ಲಿ.
    – ಟ್ರೀ ಗಾರ್ಡ್ (ಮರ ಸಂರಕ್ಷಕ ಕವಚಗಳು) ಒದಗಿಸುವುದು
    – ಗಿಡ ನೆಡಲು ಸೂಕ್ತ ಜಾಗ ಒದಗಿಸುವುದು.
    – ಅಭಿಯಾನದ ಕುರಿತು ವ್ಯಾಟ್ಸಾಪ್, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಕೊಡುವುದು.
    – ಅಭಿಯಾನಕ್ಕೆ ಇನ್ನೂ ಹತ್ತಾರು ಕೈಗಳನ್ನು ಜೋಡಿಸುವುದು.

ಹೆಚ್ಚಿನ ಮಾಹಿತಿಗೆ:
8992662262, 9738132356, 99800 00993 , 9731264009,  ಅವರನ್ನು ಸಂಪರ್ಕ ಮಾಡಬಹುದು.

 

Leave a comment

Filed under Activities, Articles, Namasthe India, Photo Gallery, Uncategorized

Voting is a Sacred Duty – Fulfil it ; Vote is a Powerful Weapon – Cast it ಮತದಾನ ಒಂದು ಪವಿತ್ರ ಕರ್ತವ್ಯ – ನೆರವೇರಿಸಿ

Voting is a Sacred Duty – Fulfil it
Vote is a Powerful Weapon – Cast it
#VoteForEmpoweredKarnataka
ಮತದಾನ ಒಂದು ಪವಿತ್ರ ಕರ್ತವ್ಯ – ನೆರವೇರಿಸಿ

ಮತದಾನ ಒಂದು ಪ್ರಬಲ ಅಸ್ತ್ರ – ಚಲಾಯಿಸಿ.

ಆಯ್ಕೆ ನಿಮ್ಮದು, ಆದರೆ, ಯೋಚಿಸಿ -ಆರಿಸಿ.

#VoteForGoodGovernance 
  

Leave a comment

Filed under Articles

ಪದ್ಮವಿಭೂಷಣ ಪಿ.ಪರಮೇಶ್ವರನ್

ರಾಜೇಶ್ ಪದ್ಮಾರ್, ಉಪನ್ಯಾಸಕ article in Vikrama February 2018

ಭಾರತೀಯ ಚಿಂತನೆಗಳ ಬುನಾದಿಯ ಮೇಲೆ ಹೊಸ ತಲೆಮಾರಿನ ಸಾವಿರಾರು ಯುವ ಚಿಂತಕರನ್ನು ಯೋಗ್ಯವಾಗಿ ರೂಪಿಸಿದ ಹಿರಿಯ ವಿದ್ವಾಂಸ, ಲೇಖಕ, ಸಂಘದ ಜ್ಯೇಷ್ಠ ಪ್ರಚಾರಕ ಪಿ.ಪರಮೇಶ್ವರನ್ ರವರಿಗೆ 2018ನೇ ಸಾಲಿನ ‘ಪದ್ಮವಿಭೂಷಣ’ ಪ್ರಶಸ್ತಿಯ ಮನ್ನಣೆ ದೊರಕಿದೆ.

ಮಾರ್ಚ್ 20, 2018ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ಪಿ.ಪರಮೇಶ್ವರನ್ ರವರಿಗೆ ಭಾರತ ಸರಕಾರದ ಎರಡನೇ ಅತ್ಯುಚ್ಚ ನಾಗರೀಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದರು

P-Parameswaran PadmaVibhushan

President Sri Ram Nath Kovind presented Padma Vibhushan to Veteran Scholar, Erudite Writer, Author, Accomplished Orator, Senior RSS Pracharak Sri P Parameswaran in the field of Literature & Education.

ಭಾರತೀಯ ವಿಚಾರ ಕೇಂದ್ರಂ ಎಂಬ ವಿನೂತನ ವೈಚಾರಿಕ ಸಂಸ್ಥೆಯ ಸ್ಥಾಪಕ ನಿರ್ದೇಶಕರಾಗಿ ಕಳೆದ 36 ವರ್ಷಗಳಿಂದ ಅನನ್ಯ ಕೊಡುಗೆ ನೀಡಿರುವ ಪಿ.ಪರಮೇಶ್ವರನ್ ಇಂಟರ್‌ನ್ಯಾಷನಲ್ ಫೋರಂ ಫಾರ್ ಇಂಡಿಯನ್ ಹೆರಿಟೇಜ್ (IFIH) ಸಂಸ್ಥೆಯ ಸ್ಥಾಪಕ ಸದಸ್ಯರೂ ಹೌದು. ಹತ್ತಾರು ಗ್ರಂಥಗಳ ಲೇಖಕರಾಗಿ, ಭಾಷಣಕಾರರಾಗಿ, ಸಂವಾದಿಯಾಗಿ ವೈಚಾರಿಕ ಕ್ಷೇತ್ರದಲ್ಲಿ ಗಣನೀಯವಾಗಿ ಗುರುತಿಸಿಕೊಂಡವರು. ಹೆಸರಾಂತ ಚಿಂತಕರಾದ ಡೇವಿಡ್ ಫ್ರಾಲೆ, ಕೋರ್ಲ್‌ನಾಡ್ ಎಲ್‌ಸ್ಟ್, ರಾಮ್ ಮಾಧವ್, ಜೆ.ನಂದಕುಮಾರ್ ಸೇರಿದಂತೆ ಅನೇಕರಿಗೆ ಮಾರ್ಗದರ್ಶಕರಾಗಿ ಸ್ಮರಣೀಯ ಕೊಡುಗೆ ಸಲ್ಲಿಸಿದವರೇ ಪರಮೇಶ್ವರನ್.

1927ರಲ್ಲಿ  ಆಲಪ್ಪುಳ ಜಿಲ್ಲೆಯ ಚೇರ್ತಲ ಗ್ರಾಮದಲ್ಲಿ ಜನಿಸಿದ ಪರಮೇಶ್ವರನ್ ಹುಟ್ಟೂರಿನಲ್ಲೇ ಶಾಲಾ ಶಿಕ್ಷಣ ಪೂರೈಸಿದರು. ತಿರುವನಂತಪುರದ ಯೂನಿವರ್ಸಿಟಿ ಕಾಲೇಜಿನಲ್ಲಿ ಪದವಿ (ಬಿಎ-

ಆನರ್ಸ್-ಇತಿಹಾಸ). ಬಾಲ್ಯದಿಂದಲೇ ಹಿಂದುತ್ವದ ವಿಚಾರಧಾರೆಯ ಕುರಿತು ತೀವ್ರ ಅಧ್ಯಯನದ ಆಸಕ್ತಿ ಹೊಂದಿದ್ದ ಪರಮೇಶ್ವರನ್, ಈ ಸಂಬಂದಿತ ಸಂಘ-ಸಂಸ್ಥೆಗಳ ಸಂಪರ್ಕ-ಒಡನಾಟ ಸಾಧಿಸಿದ್ದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಅದಾಗಲೇ ಕೇರಳದಲ್ಲಿ ಚಿಗುರೊಡೆಯುತ್ತಿದ್ದ ವೇಳೆಯದು. ಶಾಲಾ ವಿದ್ಯಾರ್ಥಿಯಾಗಿದ್ದ ಪರಮೇಶ್ವರನ್ ವಿದ್ಯಾರ್ಥಿ ಜೀವನದ ಅನೇಕ ಸಂಜೆಗಳನ್ನು ಸಂಘದ ಅಂಗಳದಲ್ಲೇ ಕಳೆದರು. ಸಂಘದ ವಿಚಾರಧಾರೆ, ರಾಷ್ಟ್ರೀಯತೆಯ ಆಧಾರದ ಮೇಲೆ ಪರಮ ವೈಭವದ ಪರಿಕಲ್ಪನೆ – ಎಲ್ಲದರಲ್ಲೂ ಆಸಕ್ತಿ-ಅಭಿರುಚಿ ಮತ್ತು ಶ್ರದ್ಧೆ ಮೈಗೂಡಿಸಿಕೊಂಡರು. 1950 ನೇ ಇಸವಿಯಲ್ಲಿ ಆಗಿನ ಆರೆಸ್ಸೆಸ್ ಸರಸಂಘಚಾಲಕ ಶ್ರೀ ಗುರೂಜಿ ಗೋಳ್ವಲ್ಕರ್‌ರ ಇಚ್ಛೆಯಂತೆ ಸಂಘದ ಪ್ರಚಾರಕರಾಗಿ ಹೊರಟರು. ಜೀವನ ಪೂರ್ತಿ ಅವಿವಾಹಿತರಾಗಿಯೇ ಉಳಿದು ಸಮಾಜ ಸೇವೆಯೇ ಸರ್ವಸ್ವ ಎಂಬ ಸಂಕಲ್ಪವನ್ನು ತಾರುಣ್ಯದ ಹೊಸ್ತಿಲಲ್ಲೇ ಕೈಗೊಂಡರು.

ರಾಜಕೀಯ ಕ್ಷೇತ್ರವಾದ ಭಾರತೀಯ ಜನಸಂಘದ ಸಂಘಟನಾತ್ಮಕ ಬೆಳವಣಿಗೆ ಇನ್ನೂ ಶೈಶವಾವಸ್ಥೆಯಲ್ಲಿದ್ದಾಗ ಅದಕ್ಕೆ ಬಲ ನೀಡುವ ಉದ್ದೇಶದಿಂದ ಪಿ.ಪರಮೇಶ್ವರನ್ ರನ್ನು 1957 ರಲ್ಲಿ ಜನಸಂಘದ ಸಂಘಟನಾ ಕಾರ್ಯದರ್ಶಿಯನ್ನಾಗಿ ನಿಯುಕ್ತಿ ಮಾಡಲಾಯಿತು. 1968 ರಲ್ಲಿ ಭಾರತೀಯ ಜನಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕ್ರಮೇಣ ಅದರ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು. 1975-77 ರ ಅವದಿಯ ತುರ್ತು ಪರಿಸ್ಥಿತಿಯ ಹೋರಾಟದ ಸಂದರ್ಭದಲ್ಲಿ ಜೈಲುವಾಸವನ್ನೂ ಅನುಭವಿಸಿದರು.

1977ರಲ್ಲಿ ರಾಜಕೀಯ ಕ್ಷೇತ್ರದಿಂದ ವಿಮುಖರಾಗಿ ವೈಚಾರಿಕ ಕ್ಷೇತ್ರದಲ್ಲಿ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದ ಪಿ.ಪರಮೇಶ್ವರನ್‌ರು ಸಾಮಾಜಿಕ ಚಿಂತನೆಗಳು, ಅಭಿವೃದ್ಧಿಯ ಮೈಲಿಗಲ್ಲುಗಳ ಕುರಿತು ಹಾಗೂ ಮೂಲ ಭಾರತೀಯ ಚಿಂತನೆಗಳ ಕುರಿತು ಅಧ್ಯಯನ-ಬರವಣಿಗೆಯತ್ತ ಗಮನಹರಿಸಿದರು.

ಹಿರಿಯ ಸಾಮಾಜಿಕ ಮುಂದಾಳು ನಾನಾಜಿ ದೇಶ್‌ಮುಖ್ ಸ್ಥಾಪಿಸಿದ್ದ ದೀನದಯಾಳ್ ರಿಸರ್ಚ್ ಇನ್‌ಸ್ಟಿಟ್ಯೂಟ್, ನವದೆಹಲಿಯ ನಿರ್ದೇಶಕರಾಗಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದರು.

1982ರಲ್ಲಿ ಮತ್ತೆ ಕೇರಳಕ್ಕೆ ಕಾಲಿಟ್ಟ ಪಿ.ಪರಮೇಶ್ವರನ್, ತಿರುವನಂತಪುರಂನಲ್ಲಿ ‘ಭಾರತೀಯ ವಿಚಾರ ಕೇಂದ್ರಂ’ ಎಂಬ ವೈಚಾರಿಕ ಸಂಸ್ಥೆಯನ್ನು ಪ್ರಾರಂಭಿಸಿದರು. ಭಾರತೀಯ ಚಿಂತನೆಗಳ ಆಧಾರದ ಮೇಲೆ ರಾಷ್ಟ್ರೀಯ ಪುರನರುತ್ಥಾನದ ಆಶಯದೊಂದಿಗೆ ಅಧ್ಯಯನ, ಸಂವಹನ, ಸಂಶೋಧನೆ ಮಾಡುವ ಯುವ ಚಿಂತಕರಿಗೊಂದು ಸ್ಪೂರ್ತಿಯ ವೇದಿಕೆಯಾಗಿ ‘ಭಾರತೀಯ ವಿಚಾರ ಕೇಂದ್ರಂ’ ಕಳೆದ ಮೂರುವರೆ ದಶಕದಲ್ಲಿ ಅದ್ವಿತೀಯ ಪಾತ್ರ ನಿರ್ವಹಿಸಿದೆ. ಇದರ ಜತೆಗೇ ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರ ಹಾಗೂ ವಿವೇಕಾನಂದ ಶಿಲಾ ಸ್ಮ್ಮಾರಕ ಸಂಸ್ಥೆಯಲ್ಲೂ ಪರಮೇಶ್ವರನ್ ತೊಡಗಿಸಿಕೊಂಡರು. ಯುವಜನರಲ್ಲಿ ಭಗವದ್ಗೀತೆಯ ಕುರಿತು ಆಸಕ್ತಿ, ಅಧ್ಯಯನ ಹೆಚ್ಚಿಸುವ ಸಲುವಾಗಿ ರೂಪುಗೊಂಡ ‘ಗೀತಾ ಸ್ವಾಧ್ಯಾಯ ಸಮಿತಿ’ಯ ಮಾರ್ಗದರ್ಶಕರಾಗಿಯೂ ಪರಮೇಶ್ವರನ್‌ರ ಕೊಡುಗೆ ಸ್ತುತ್ಯಾರ್ಹ.

ಸ್ವಾಮಿ ವಿವೇಕಾನಂದರು ಕರ್ಮಯೋಗದ ಆಧಾರದ ಮೇಲೆ ಸ್ಥಾಪಿಸಿದ ರಾಮಕೃಷ್ಣ ಮಿಷನ್ ಜೊತೆ ಉತ್ತಮ ಭಾಂದವ್ಯ ಹೊಂದಿರುವ ಪರಮೇಶ್ವರನ್, ಕಾಲಡಿಯ ಅದ್ವೈತ ಆಶ್ರಮದ ಸ್ಥಾಪಕರೂ, ರಾಮಕೃಷ್ಣ ಮಠದ ಸನ್ಯಾಸಿಗಳೂ ಆದ ಸ್ವಾಮಿ ಆಗಮಾನಂದರವರ ಶಿಷ್ಯರೂ ಹೌದು. 1993ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದ ಶತಾಬ್ದಿ ವರ್ಷ ಆಚರಣೆಯಲ್ಲಿ ಪರಮೇಶ್ವರನ್ ಪಾಲ್ಗೊಂಡಿದ್ದರು.

1998ರಲ್ಲಿ ಕೇರಳದಲ್ಲಿ ಅವ್ಯಾಹತವಾಗಿ ಹೆಚ್ಚಿದ್ದ ಅಪರಾಧ ಪ್ರಕರಣಗಳು ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿತ್ತು. ಸಾಮಾಜಿಕ ಅಭದ್ರತೆಯೂ ಕಾಡತೊಡಗಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ಸಂತುಲನಗೊಳಿಸಲು ಭಗವದ್ಗೀತೆಯ ಪಾರಾಯಣವೇ ರಾಮಬಾಣ ಎಂಬುದನ್ನು ಪ್ರತಿಪಾದಿಸಿದವರೇ ಪಿ.ಪರಮೇಶ್ವರನ್. ‘ಗೀತಾ ದಶಕಂ’ ಎಂಬ ವಿನೂತನ ಯೋಜನೆಯ ಮೂಲಕ ಭಗವದ್ಗೀತೆಯ ಆಶಯಗಳನ್ನು ಎಳೆಯ – ಯುವ ಮನಸ್ಸುಗಳಿಗೆ ತಲುಪಿಸುವ ಬೃಹತ್ ಅಭಿಯಾನ ನಡೆಯಿತು. ಕಳೆದ ವರ್ಷ ತ್ರಿಚೂರಿನಲ್ಲಿ ನಡೆದ ಎರಡು ದಿನಗಳ ‘ಗೀತಾ ಸಂಗಮಂ’ ಕಾರ‌್ಯಕ್ರಮದಲ್ಲಿ ಲಕ್ಷಕ್ಕೂ ಅದಿಕ ಮಕ್ಕಳು ಪಾಲ್ಗೊಂಡಿದ್ದರು. ಹೀಗೆ ಕೇರಳದಲ್ಲಿ ಇತ್ತೀಚೆಗೆ ಭಗವದ್ಗೀತೆಯನ್ನು ಮನೆ-ಮನೆಗೆ, ಯುವ ಜನರೆಡೆಗೆ ತಲುಪಿಸುವಲ್ಲಿ ಪರಮೇಶ್ವರನ್ ರ ನೇತೃತ್ವ ಅಭಿನಂದನಾರ್ಹ.

ಕಳೆದ ವರ್ಷ, 2017ರಲ್ಲಿ ಪರಮೇಶ್ವರನ್‌ರಿಗೆ 90 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ‘ನವತಿ ಆಚರಣೆ’ ಅದ್ದೂರಿಯಾಗಿಯೇ ಕೇರಳದಲ್ಲಿ ನಡೆಯಿತು. ಅದೊಂದು ಅದ್ಭುತ ವೈಚಾರಿಕ ಜಾತ್ರೆಯೇ ಸರಿ! ಆರೆಸ್ಸೆಸ್ ಸರಸಂಘಚಾಲಕ ಡಾ. ಮೋಹನ್ ಭಾಗ್ವತ್ ಸೇರಿದಂತೆ ಅನೇಕ ಗಣ್ಯರು ವಿವಿಧ ಚಿಂತನ-ಮಂಥನ ಕಾರ‌್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಮಲಯಾಳಂ ಪತ್ರಿಕೆಗಳಾದ ‘ಕೇಸರಿ’, ‘ಮಂಥನ’ ಇತ್ಯಾದಿಗಳ ಸಂಪಾದಕರಾಗಿಯೂ ಕಾರ‌್ಯ ನಿರ್ವಹಿಸಿದ್ದ ಇವರು ವಿವೇಕಾನಂದ ಕೇಂದ್ರ ಹೊರತರುತ್ತಿರುವ ‘ಯುವ ಭಾರತಿ’ ಹಾಗೂ ‘ಪ್ರಗತಿ’ ಪತ್ರಿಕೆಗಳ ಸಂಪಾದಕರಾಗಿ ಕಾರ‌್ಯ ನಿರ್ವಹಿಸುತ್ತಿದ್ದಾರೆ.

7 ದಶಕಗಳಿಂದ ಸಮಾಜ ಜೀವನದಲ್ಲಿ ವಿಶೇಷವಾಗಿ ವೈಚಾರಿಕಾ ರಂಗದಲ್ಲಿ ಸಕ್ರಿಯರಾಗಿ  ಸಾವಿರಾರು ಯುವ ಚಿಂತಕರನ್ನು ರೂಪಿಸಿದ ಶ್ರೇಯಸ್ಸು ಪರಮೇಶ್ವರನ್‌ರವರದ್ದು. ಬತ್ತದ ಉತ್ಸಾಹ, ಅದಮ್ಯ ಅಧ್ಯಯನಶೀಲತೆ, ಸಾಮಯಿಕ ಒಳನೋಟ, ಅನುಭವದ ಮಹಾ ಶಿಖರ, ಎಂದಿನ ರಾಜಗಾಂಭೀರ‌್ಯದ ಜತೆಗೇ ಮಂದಹಾಸ – ಎಲ್ಲವೂ ಪರಮೇಶ್ವರನ್‌ರವರಲ್ಲಿ ಕಾಣಬಹುದಾದದ್ದೇ.

 ಪ್ರಶಸ್ತಿಗಳು

1997 – ಹನುಮಾನ್ ಪ್ರಸಾದ್ ಪೊದ್ದಾರ್ ಪ್ರಶಸ್ತಿ, ಕಲ್ಕತ್ತಾ.

2000 – ಜವಹರಲಾಲ್ ನೆಹರು ವಿ.ವಿ., ದೆಹಲಿಯ – ಕೋರ್ಟ್ ಸದಸ್ಯತ್ವ.

2002 – ಅಮೃತ ಕೀರ್ತಿ ಪುರಸ್ಕ್ಕಾರ, ಕೊಲ್ಲಂ

2004 – ಪದ್ಮಶ್ರೀ, ಭಾರತ ಸರಕಾರ.

2018  – ಪದ್ಮವಿಭೂಷಣ

ಪುಸ್ತಕಗಳು : (ಆಂಗ್ಲ ಹಾಗೂ ಮಲಯಾಳಂ)

  1. ಶ್ರೀ ನಾರಾಯಣ ಗುರು – The Prophet of Reraissance
  2. ಶ್ರೀ ಅರವಿಂದನ್ – ಭಾವಿಯುತೆ ದಾರ್ಶನಿಕನ್
  3. ವಿಶ್ವ ವಿಜಯಿ ವಿವೇಕಾನಂದನ್
  4. Marx and Vivekananda 5. Marx to Maharshi
  5. Bhagavad Gita – Vision of New World Order
  6. Beyond all Isms to Humanism.
  7. Heart beats of Hindu Nation (ಯುವಭಾರತಿ ಲೇಖನ ಸಂಗ್ರಹ)
  8. ದಿಶಾ ಬೋಧತ್ತಿಂದೆ ದರ್ಶನಂ
  9. Bhagavadgita – The nectar of Immortality.
  10. ಮಾರುನ್ನ ಸಮೂಹವೂಂ, ಮಾರಾತ್ತ ಮೌಲ್ಯಂಗಳೂಂ
  11. Gita’s Vision of an Ideal Society
  12. ಸ್ವತಂತ್ರ ಭಾರತಂ – ಗತಿಯುಂ, ನಿಯತಿಯುಂ
  13. ಹಿಂದೂ ಧರ್ಮವುಂ, ಇಂಡಿಯನ್ ಕಮ್ಯುನಿಸವುಂ
  14. Hindutva Idealogy – Unique and Unsiversal.
  15. Makarajyotis(A brief study of Swami Vivekananda in Malayalam)
  16. Darshanasamvadam
  17. Swanthantra Bharatham-Gatiyum Niyathiyum
  18. Hindudarmavum Indian communisavum
  19. Vivekanandanum Prabhudha Keralavum (Edited)
  20. Udharedathmanathmanam
  21. Heart Beats of Hindu Nation (3 volumes)

 

Leave a comment

Filed under Articles

‘15 ವರ್ಷಗಳಲ್ಲಿ ದೇಶದ ಜಿಡಿಪಿ ಶೇ 9ರಷ್ಟು ವೃದ್ಧಿ’

‘15 ವರ್ಷಗಳಲ್ಲಿ ದೇಶದ ಜಿಡಿಪಿ ಶೇ 9ರಷ್ಟು ವೃದ್ಧಿ’:

Prajavani Report:

http://www.prajavani.net/news/article/2018/01/13/546946.html

Vivek Band 2018

ಬೆಂಗಳೂರು: ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಮುಂದಿನ 12ರಿಂದ 15 ವರ್ಷಗಳಲ್ಲಿ ಶೇ 9ರಷ್ಟು ವೃದ್ಧಿಯಾಗಲಿದೆ. ಆರ್ಥಿಕತೆಯಲ್ಲಿ ಜಗತ್ತಿನಲ್ಲೇ 3ನೇ ಅಥವಾ 4ನೇ ಸ್ಥಾನ ಪಡೆದುಕೊಳ್ಳಲಿದೆ ಎಂದು ಹಿರಿಯ ಬಾಹ್ಯಾಕಾಶ ವಿಜ್ಞಾನಿ ಡಾ.ಕೆ.ರಾಧಾಕೃಷ್ಣನ್‌ ತಿಳಿಸಿದರು.

ಆರ್‌.ವಿ. ಶಿಕ್ಷಕರ ಕಾಲೇಜು ಹಾಗೂ ಸಮರ್ಥ ಭಾರತ ಟ್ರಸ್ಟ್‌ ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಯುವ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಆರ್ಥಿಕತೆ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಈ ಅಭಿವೃದ್ಧಿ ದರವನ್ನು ಕಾಯ್ದುಕೊಂಡರೆ ಜಗತ್ತಿನ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆಯಲಿದೆ ಎಂದರು.

‘ನನ್ನ ತಾಯಿ, ಅಜ್ಜಿ ಹಾಗೂ ತಾತ ಶಿಕ್ಷಕರಾಗಿದ್ದರು. ನಾನು ಇಸ್ರೊ ಅಧ್ಯಕ್ಷನಾಗಿ ಕೆಲಸ ಮಾಡಿದ್ದರೂ, ಊರಿನ ಜನ ನನ್ನನ್ನು ಶಿಕ್ಷಕಿಯ ಮಗನೆಂದೇ ಗುರುತಿಸುತ್ತಾರೆ. ಗುರುವಿಗೆ ಅಂತಹ ಮಹತ್ವವಿದೆ’ ಎಂದು ತಿಳಿಸಿದರು.

ಸಮರ್ಥ ಭಾರತ ಟ್ರಸ್ಟ್‌ನ ರಾಜೇಶ್‌ ಪದ್ಮಾರ್‌, ‘ವಿವೇಕಾನಂದರ ಆದರ್ಶಗಳನ್ನು ಯುವಕರು ಪಾಲಿಸುವಂತೆ ಮಾಡುವ ಉದ್ದೇಶದಿಂದ ವಿವೇಕ ಬ್ಯಾಂಡ್‌ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನ ಇದೇ 26ಕ್ಕೆ ಕೊನೆಗೊಳ್ಳಲಿದೆ’ ಎಂದು ಹೇಳಿದರು.

Leave a comment

Filed under Articles

ಹಸಿರ ನೆಟ್ಟರೆ ಉಸಿರು

-ರಾಜೇಶ್ ಪದ್ಮಾರ್ article n Vikrama May- 2017

ರಾಜ್ಯಾದ್ಯಂತ 1ಕೋಟಿ ಗಿಡ ನೆಡುವ ಬೃಹತ್ ಅಭಿಯಾನ (ಜೂ.15ರಿಂದ ಆ.15 ರವರೆಗೆ ರಾಜ್ಯಾದ್ಯಂತ ಜಾಗೃತಿ, 400ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಸಹಕಾರ).

ರಾಜಸ್ಥಾನದ ನಂತರ ಭಾರತದಲ್ಲಿ ಅತಿಹೆಚ್ಚು ಹಾಗೂ ಅತಿವೇಗವಾಗಿ ಒಣಮರುಭೂಮಿಯಾಗುತ್ತಿರುವ (desertification) ರಾಜ್ಯ ಕರ್ನಾಟಕ ಎಂಬ ಆತಂಕಕಾರಿ ಸುದ್ದಿ ನೀವು ಓದಿರಬಹುದು. ಕಳೆದ ಮೂರ್ನಾಲ್ಕು ದಶಕಗಳಿಂದ ನಾನಾ ಕಾರಣಕ್ಕಾಗಿ ನಮ್ಮ ರಾಜ್ಯದ ಹಸಿರ ಹೊದಿಕೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಒಂದೊಮ್ಮೆ ‘ಸುಂದರ ನದಿ ವನಗಳ ನಾಡೇ’, ‘ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳ ನಾಡು’ ಎಂದು ಹಿರಿಯ ಕವಿಗಳಿಂದ ಕರೆಯಿಸಿಕೊಂಡಿದ್ದ ನಮ್ಮ ಕನ್ನಡ ನೆಲ ಇದೀಗ ಪ್ರಾಕೃತಿಕವಾಗಿ ಸೊರಗಿದೆ. ಕನ್ನಡ ನೆಲವನ್ನು ಮತ್ತೆ ಹಸಿರಾಗಿಸುವ ಬೃಹತ್ ರಾಜ್ಯವ್ಯಾಪಿ ಅಭಿಯಾನವೊಂದು ಜೂನ್ ತಿಂಗಳಿನಿಂದ ನಡೆಯಲಿದೆ.

ಪರಿಸರ ಸಂರಕ್ಷಣೆ ಹಾಗೂ ಹಸಿರ ಹೊದಿಕೆ ಹೆಚ್ಚಿಸುವ ಉದ್ದೇಶದಿಂದ ಸಮರ್ಥ ಭಾರತ ಸಂಸ್ಥೆಯು ಮುಂದಿನ ಜೂನ್ 15ರಿಂದ ಆಗಸ್ಟ್ 15ರವರೆಗೆ ರಾಜ್ಯಾದ್ಯಂತ 1 ಕೋಟಿ ಗಿಡ ನೆಡುವ ಬೃಹತ್ ಅಭಿಯಾನ ಹಮ್ಮಿಕೊಂಡಿದೆ. ಈ ಅಭಿಯಾನಕ್ಕೆ ರಾಜ್ಯದ ಸುಮಾರು 400ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಕೈಜೋಡಿಸಲಿವೆ. ರಾಜ್ಯಾದ್ಯಂತ ಸುಮಾರು 1 ಕೋಟಿಗೂ ಅಧಿಕ ಗಿಡ ನೆಡುವ ಪ್ರಕ್ರಿಯೆಗೆ ಈಗಾಗಲೇ ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆ ಗಿಡಗಳನ್ನು ಕೊಡುಗೆ ನೀಡುವುದಾಗಿ ರವಸೆ ನೀಡಿದ್ದಾರೆ. ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಗಿಡಗಳನ್ನು ತಯಾರು ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಪ್ರತ್ಯಕ್ಷ ಗಿಡ ನಡೆವುದು. ಸೀಡ್ ಬಾಲನ್ನು ನೆಲದಲ್ಲಿ ಹೂತು ನೆಡುವುದು, ಆಯಾ ಗಿಡಗಳ ಬೀಜಗಳನ್ನು ನೇರವಾಗಿ ಬಿತ್ತುವುದು ಮುಂತಾದ ಪ್ರಕಾರಗಳಲ್ಲಿ ಈ ಅಭಿಯಾನ ನಡೆಯಲಿದೆ.

400ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಸಹಕಾರ 
ಈಗಾಗಲೇ ಅನೇಕ ಸಂಘ ಸಂಸ್ಥೆಗಳು 40 ಲಕ್ಷಕ್ಕೂ ಮಿಕ್ಕ ಸೀಡ್ ಬಾಲ್ ಗಳನ್ನು ತಯಾರು ಮಾಡಿವೆ. ಈ ಅಭಿಯಾನಕ್ಕೆ ರಾಜ್ಯದ ನಾನಾ ಕಾರ್ಪೊರೇಟ್ ಸಂಸ್ಥೆಗಳೂ ಕೂಡ ಕೈಜೋಡಿಸಿವೆ. ರಾಜ್ಯದ ನಾನಾ ಶಾಲಾ ಕಾಲೇಜುಗಳ ಸಂಪರ್ಕ ಮಾಡಿ ಮಕ್ಕಳನ್ನು ಕೂಡ ಬಾಗಿಯಾಗುವಂತೆ ಮಾಡಲು ಮಾತುಕತೆ ನಡೆಯುತ್ತಿದೆ. ಸರ್ಕಾರಿ ಸಂಸ್ಥೆಯಾದ ಕೆಎಂಎಫ್ ಕೂಡ ಪರಿಸರ ಸಂರಕ್ಷಣೆಗೆ ಕೈ ಜೋಡಿಸುತ್ತಿದ್ದು, ನೆಲಮಂಗಲ ಸಮೀಪದ ತೋಟವೊಂದಕ್ಕೆ ಹನಿ ನೀರಾವರಿಗೆ 2.30ಲಕ್ಷ ರೂಪಾಯಿ ದೇಣಿಗೆ ನೀಡಿದೆ. ರಾಜ್ಯದಲ್ಲಿ ನೈಸರ್ಗಿಕ ವಿಕೋಪದಿಂದ ಅರಣ್ಯಗಳು ನಾಶವಾಗುತ್ತಿವೆ. ಅದನ್ನು ಸಂರಕ್ಷಿಸಬೇಕಾದ ಸಂಪೂರ್ಣ ಜವಾಬ್ದಾರಿ ನಮ್ಮ ಮೇಲಿದೆ. ಗಿಡಗಳನ್ನು ಶಾಲೆ, ಕಾಲೇಜು, ದೇವಸ್ಥಾನ, ಮನೆಗಳ ಕಾಂಪೌಂಡ್ ಗಳಲ್ಲಿ ಗಿಡಗಳನ್ನು ನೆಡುತ್ತೇವೆ. ಗಿಡ ನೆಟ್ಟ ತಕ್ಷಣ ಜವಾಬ್ದಾರಿ ಮುಗಿಯುವುದಿಲ್ಲ. ಅದನ್ನು ಪಾಲನೆ ಮಾಡುವತ್ತಲೂ ಗಮನಹರಿಸಲು ಮನವಿ ಮಾಡಲಾಗಿದೆ.

ಮರಗಳ ನಿರ್ವಹಣೆಯತ್ತ ಗಮನ 
ಗಿಡಗಳನ್ನು ನೆಡುವುದು ಮಾತ್ರ ನಮ್ಮ ಜವಾಬ್ದಾರಿ ಆಗಬಾರದು. ನೆಟ್ಟ ಬಳಿಕ ಅದರ ನಿರ್ವಹಣೆಯತ್ತಲೂ ಗಮನಹರಿಸಬೇಕು. ಆಯಾ ಪ್ರದೇಶಕ್ಕೆ ಹೊಂದಿಕೊಳ್ಳುವ ಗಿಡಗಳನ್ನು ನೆಡುವುದು ಮತ್ತು ಕನಿಷ್ಠ ಮೂರು ವರ್ಷಗಳ ಕಾಲ ಸಂರಕ್ಷಣೆ ಮಾಡಲು ಸಾಧ್ಯವಾಗುವ ಕಡೆಗಳಲ್ಲಿ ಮಾತ್ರ ಗಿಡಗಳನ್ನು ನೆಡಬೇಕು. ನೇಪಾಳ, ೂತಾನ್ ಮುಂತಾದ ದೇಶಗಳಲ್ಲಿ ಶೇ. 60ರಷ್ಟು ಅರಣ್ಯ ಇರಲೇಬೇಕೆಂಬ ತಾಕೀತು ಅಲ್ಲಿನ ಸಂವಿಧಾನದಲ್ಲಿದೆ. ಭಾರತದಲ್ಲಿ ಶೇ.33 ರಷ್ಟಿದ್ದ ಅರಣ್ಯ ಪ್ರದೇಶ ಶೇ. 22ಕ್ಕೆ ಇಳಿದಿದೆ. ಈ ಸಮಯದಲ್ಲಿ ಜಲ ಸಂಪನ್ಮೂಲಗಳು ಅಭಿವೃದ್ಧಿಯಾಗದೆ ದೇಶೀಯ ಉತ್ಪನ್ನವನ್ನು ಪರಿಗಣಿಸಲು ಸಾಧ್ಯವಿಲ್ಲ. ಅರಣ್ಯವನ್ನು ಉಳಿಸಿ ಬೆಳೆಸಬೇಕಾದ ಮನಸ್ಸುಗಳ ಅಗತ್ಯ ಈ ದೇಶಕ್ಕಿದೆ. ಸಮರ್ಥ ಭಾರತದ ಈ ಯೋಜನೆಯಲ್ಲಿ ಮನೆಗೊಬ್ಬರಂತೆ ಪಾಲ್ಗೊಳ್ಳಬೇಕಿದೆ. ರಾಜ್ಯದಲ್ಲಿ 6 ಕೋಟಿ ಜನಸಂಖ್ಯೆಯಿದ್ದು, ಒಬ್ಬೊಬ್ಬರು ಒಂದೊಂದು ಸಸಿ ನೆಟ್ಟರೆ ನಮ್ಮ ಪರಿಸರ ಹಚ್ಚ ಹಸಿರಾಗಿಡಲು ಸಾಧ್ಯವಿದೆ.

ಗಿಡದ ಜೊತೆ ಸೆಲ್ಫಿ
ಅಭಿಯಾನಕ್ಕೆ ಸಾಮಾಜಿಕ ಜಾಲ ತಾಣಗಳನ್ನು ಪರಿಣಾಮಕಾರಿಯಾಗಿ ಬಲಿಸಿಕೊಳ್ಳಲಾಗುವುದು. ಗಿಡಗಳನ್ನು ಬೆಳೆಸುವ ಸ್ವಯಂಸೇವಕರು ಅವುಗಳ ಜೊತೆ ಸೆಲ್ಫಿ ತೆಗೆದು #SamarthaBharata ಹ್ಯಾಷ್ ಟ್ಯಾಗ್‌ನೊಂದಿಗೆ ಟ್ವಿಟ್ಟರ್ ಅಥವಾ ಪೇಸ್ ಬುಕ್ ನಲ್ಲಿ ಹಂಚಿಕೊಳ್ಳಬಹುದು. ಪರಿಸರ ಸಂರಕ್ಷಣೆ ಕುರಿತ ವಿಚಾರಗಳನ್ನು, ವಿಡಿಯೋ ಹಾಗೂ ಇನ್ಫೋಗ್ರಾಫಿಕ್ಸ್ ಗಳನ್ನು ಜಾಲತಾಣಗಳ ಮೂಲಕ ಹಂಚಿಕೊಳ್ಳಬಹುದು.

ಹೀಗಿರಲಿದೆ ಅಭಿಯಾನ
 • ಯಾವಾಗ? ಜೂನ್ 5ರಿಂದ ಆಗಸ್ಟ್ 15ರವರೆಗೆ
• ಎಲ್ಲಿ? ತಾಲೂಕು- ಹೋಬಳಿ-ಗ್ರಾಮ ಪಂಚಾಯತಿ ಮಟ್ಟದಲ್ಲಿ. ಸರಕಾರಿ ಅಥವಾ ಖಾಸಗಿ ಖಾಲಿ ಸ್ಥಳಗಳಲ್ಲಿ. ಇದಕ್ಕಾಗಿ ಸಂಬಂಧಪಟ್ಟವರಲ್ಲಿ ಪೂರ್ವ ಅನುಮತಿ ತೆಗೆದುಕೊಳ್ಳಬೇಕು.
• ಯಾವ ಗಿಡ? ಪ್ರದೇಶಾನುಸಾರವಾಗಿ ಹೆಚ್ಚಾಗಿ ಹಣ್ಣು-ಹಂಪಲು, ನೆರಳು ಹಾಗೂ ಜೀವ ವೈವಿಧ್ಯಕ್ಕೆ ಪೂರಕವಾಗಬಲ್ಲ ಮರಗಳನ್ನೇ ಆಯ್ಕೆ ಮಾಡಬೇಕು. ಅಕೇಶಿಯಾ, ನೀಲಗಿರಿ (ಯುಕಲಿಪ್ಟಸ್) ಮರಗಳನ್ನು ನೆಡಬಾರದು ಎಂಬುದು ಪರಿಸರ ತಜ್ಞರ ಸಲಹೆ.
• ಯಾರೆಲ್ಲ ಬಾಗಿ?- ಕೃಷಿಕ, ಸಾಫ್ಟ್ವೇರ್ ತಂತ್ರಜ್ಞ, ವಿದ್ಯಾರ್ಥಿ, ಅಧ್ಯಾಪಕ, ವ್ಯಾಪಾರಿ ಇತ್ಯಾದಿ ಎಲ್ಲರೂ
• ಸೀಡ್ ಬಾಲ್ ತಯಾರಿ ಪ್ರಶಿಕ್ಷಣ – ಬೀಜದ ಉಂಡೆ ಅಥವಾ ಸೀಡ್ ಬಾಲ್ ತಯಾರಿ ಒಂದು ಉತ್ತಮವಾದ ವಿಧಾನ. ಈ ಕುರಿತ ಮಾಹಿತಿಗಾಗಿ
(ಸಂಪರ್ಕಿಸಿ: ನೀರಜ್ ಕಾಮತ್ 9964142207)
 • ಸಾರ್ವಜನಿಕರ ಸಹಬಾಗಿತ್ವ ಹೇಗೆ? –
– ಅಭಿಯಾನಕ್ಕೆ ಗಿಡಗಳನ್ನು ಒದಗಿಸುವುದು
– ನೆಟ್ಟ ಗಿಡಕ್ಕೆ 3 ವರ್ಷ ಸೂಕ್ತ ಸಂರಕ್ಷಣೆ – ನೀರು ಪೂರೈಕೆ, ಗೊಬ್ಬರ ಬೇಕಿದ್ದಲ್ಲಿ.
– ಟ್ರೀ ಗಾರ್ಡ್ (ಮರ ಸಂರಕ್ಷಕ ಕವಚಗಳು) ಒದಗಿಸುವುದು
– ಗಿಡ ನೆಡಲು ಸೂಕ್ತ ಜಾಗ ಒದಗಿಸುವುದು.
– ಅಭಿಯಾನದ ಕುರಿತು ವ್ಯಾಟ್ಸಾಪ್, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಕೊಡುವುದು.
– ಅಭಿಯಾನಕ್ಕೆ ಇನ್ನೂ ಹತ್ತಾರು ಕೈಗಳನ್ನು ಜೋಡಿಸುವುದು.
• ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಘ, ಸಂಸ್ಥೆಗಳು ಪಾಲ್ಗೊಳ್ಳುವಂತೆ ಸಮರ್ಥ ಭಾರತ ಮನವಿ ಮಾಡಿಕೊಂಡಿದೆ.

ಹೆಚ್ಚಿನ ಮಾಹಿತಿಗೆ:
99800 00993 (ಹರೀಶ್), 9591810302 (ಕೃಷ್ಣ ಗೌಡ) ಅವರನ್ನು ಸಂಪರ್ಕ ಮಾಡಬಹುದು.

http://vikrama.in/hasira-nettare-usiru/

Leave a comment

Filed under Articles

ಉಗ್ರಪ್ರೇಮಿಗಳನ್ನು ಇನ್ನೆಲ್ಲಿಗೆ ಕಟ್ಟಬೇಕು?

ರಾಜೇಶ್ ಪದ್ಮಾರ್ article in Vikrama 04-06-2017

‘ನಾನೊಬ್ಬ ಸಾಮಾನ್ಯ ವ್ಯಕ್ತಿ, ಏಪ್ರಿಲ್ 9ರಂದು ಶ್ರೀನಗರದಲ್ಲಿ ನಡೆದ ಲೋಕಸಭಾ ಉಪಚುನಾವಣೆಯಂದು ನಾನು ಮತ ಚಲಾಯಿಸಲು ಮತಗಟ್ಟೆಗೆ ತೆರಳಿದ್ದೆ. ಮರಳಿ ಬರುವಾಗ ಆ ಘಟನೆ ನಡೆಯಿತು. ನನ್ನನ್ನು ಸೇನೆಯ ಜೀಪ್‌ನ ಬಾನೆಟ್‌ಗೆ ಕಟ್ಟಿಹಾಕಿ ಸುಮಾರು 28 ಕಿ.ಮೀ. ದೂರದವರೆಗೆ ಕರೆದೊಯ್ದಿದ್ದಾರೆ. ಇದು ಸೇನೆಯ ಶೌರ್ಯದ ಕೆಲಸವೇ?’ ಹೀಗೆಂದು ಅಲವತ್ತುಕೊಂಡದ್ದು ಫಾರೂಕ್ ಅಹಮದ್ ಧರ್.
ತೀರಾ ಅಮಾಯಕನಂತೆ ಮಾಧ್ಯಮಗಳ ಮುಂದೆ ಗೋಳು ತೋಡಿಕೊಂಡ ಬೆನ್ನಲ್ಲೇ ದೇಶಾದ್ಯಂತ ಮಾನವ ಹಕ್ಕು ಪ್ರತಿಪಾದಕರು, ಕಮ್ಯೂನಿಸ್ಟ್ ಚಿಂತಕರು, ಎನ್‌ಡಿಟಿವಿಯ ನಿಧಿರಾಜ್‌ದಾಸ್ ಸೇರಿದಂತೆ ಕೆಲವು ಪತ್ರಕರ್ತರು, ಪ್ರತ್ಯೇಕವಾದಿ ಮುಖಂಡರು, ರಾಜಕೀಯ ತಜ್ಞರು ಮೈಕೊಡವಿಕೊಂಡು ಸೇನಾಧಿಕಾರಿಯ ಕ್ರಮವನ್ನು ತರಾಟೆಗೆ ತೆಗೆದುಕೊಂಡರು. ಚರ್ಚೆ ಕಾವೇರಿತು.

ನಡೆದಿದ್ದೇನು?
ಏಪ್ರಿಲ್ 9, 2017ರಂದು ಜಮ್ಮು ಮತ್ತು ಕಾಶ್ಮೀರದ ಬುದ್‌ಗಾಂ ಜಿಲ್ಲೆಯ ಉತಲಿಗಾಂವ್ ಗ್ರಾಮದ ಮತಗಟ್ಟೆಯಲ್ಲಿ ನಡೆದ ಲೋಕಸಭಾ ಉಪಚುನಾವಣೆಯ ಸಂದರ್ಭದಲ್ಲಿನ ಘಟನೆಯಿದು. ಮತದಾನದ ವೇಳೆ ಅಲ್ಲಿನ ಮತದಾನದ ಸಿಬ್ಬಂದಿ, ನಾಗರಿಕರು, ಸ್ಥಳೀಯ ಪೊಲೀಸರ ರಕ್ಷಣೆ ಹಾಗೂ ಭದ್ರತೆಯ ಜವಾಬ್ದಾರಿಯನ್ನು ಭಾರತೀಯ ಸೇನೆಯ 53-ಯೂನಿಟ್ ರಾಷ್ಟ್ರೀಯ ರೈಫಲ್ಸ್ ಘಟಕದ ಮೇಜರ್ ನಿತಿನ್ ಲೀತುಲ್ ಗೋಗೋಯ್‌ರಿಗೆ ವಹಿಸಲಾಗಿತ್ತು.

ಮತದಾನಕ್ಕೆ ಅಡ್ಡಿಪಡಿಸುತ್ತಿದ್ದ ಪ್ರತ್ಯೇಕತಾವಾದಿ ಗುಂಪುಗಳು ಕಲ್ಲು ತೂರಾಟದ ತಮ್ಮ ಎಂದಿನ ಪ್ರತಿಭಟನೆಯನ್ನು ಅಂದೂ ಆಯೋಜಿಸಿದ್ದರು. ಶಾಂತಿಯುತ ಮತದಾನವೂ ನಡೆಯಬೇಕು, ನಾಗರಿಕರ-ಪೊಲೀಸರ ಜೀವ ರಕ್ಷಣೆಯೂ ಆಗಬೇಕು, ತನ್ನ ಸೈನಿಕರೂ ಸುರಕ್ಷಿತರಾಗಿ ಕಾರ್ಯ ನಿರ್ವಹಿಸಬೇಕು ಈ ಎಲ್ಲಾ ಸವಾಲುಗಳು ಒಮ್ಮಿಂದೊಮ್ಮೆಲೇ ಬಂದಾಗ ಮೇಜರ್ ಗೋಗೋಯ್ ಅತ್ಯಂತ ದಿಟ್ಟತನದ ರಣತಂತ್ರ ರೂಪಿಸಿದರು. ಅಲ್ಲೇ ಇದ್ದು ಕಲ್ಲು ತೂರಾಟದ ಪ್ರತಿಭಟನಾಕಾರರಿಗೆ ಸಹಕರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಎಳೆದು ತಂದು ಭಾರತೀಯ ಸೇನೆಯ ಜೀಪ್‌ನ ಬಾನೆಟ್‌ಗೆ ಕಟ್ಟಿಹಾಕಲಾಯಿತು. ಭದ್ರವಾಗಿ ಕಟ್ಟಿಹಾಕಿದ ನಂತರ ಜೀಪ್‌ನೊಂದಿಗೆ ಕಲ್ಲು ತೂರಾಟ ನಡೆಸುತ್ತಿದ್ದವರ ಬಳಿಗೆ ಜೀಪ್ ಚಲಾಯಿಸುತ್ತಾ ಬಂದಾಗ, ಇದ್ದಕ್ಕಿದ್ದಂತೆ ಕಲ್ಲು ತೂರಾಟಗಾರರು ಕಕ್ಕಾಬಿಕ್ಕಿಯಾಗಿ ಕಲ್ಲು ತೂರಾಟವನ್ನೇ ನಿಲ್ಲಿಸಿದರು. ಪರಿಸ್ಥಿತಿ ತಿಳಿಯಾಯಿತು. ಮತದಾನ ಶಾಂತಿಯುತವಾಗಿ ನಡೆಯಿತು. ಜೀಪ್‌ನ ಬಾನೆಟ್‌ಗೆ ಸ್ಥಳೀಯ ವ್ಯಕ್ತಿಯನ್ನೇ ಕಟ್ಟಿಹಾಕಿ ಒಂದರ್ಥದಲ್ಲಿ ಮಾನವ ಗುರಾಣಿ (ರಕ್ಷಾಕವಚ)ಯಂತೆ ಬಳಸಿ ಉದ್ವಿಗ್ನ ಸ್ಥಿತಿಯೊಂದನ್ನು ಶಾಂತಿಯುತ ಸ್ಥಿತಿಗೆ ತಂದ ಜಾಣ್ಮೆ ಹಾಗೂ ದಿಟ್ಟತನಕ್ಕೆ ಸಾರ್ವತ್ರಿಕ ಪ್ರಶಂಸೆ ಲಭಿಸಿತು. ಒಂದು ಹನಿ ರಕ್ತವೂ ಬೀಳದೆ, ಒಂದು ಗೀರು ಗಾಯವೂ ಆಗದೆ, ಯಾವುದೇ ಸಾವು-ನೋವು ಸಂಭವಿಸದೆ ಆ ವಿಷಮ ಸಂದರ್ಭವನ್ನು ನಿರ್ವಹಿಸಿದ ಎದೆಗಾರಿಕೆಗಾಗಿ ಭಾರತೀಯ ಸೇನೆ ಪ್ರಶಂಸಾ ಪತ್ರವನ್ನು ನೀಡಿ ಮೇಜರ್ ಗೋಗೋಯ್‌ರಿಗೆ ಅಭಿನಂದನೆ ಸಲ್ಲಿಸಿತು. ಮಾನವ ಹಕ್ಕು ಪ್ರತಿಪಾದಕರು ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸಿದ ಸೇನಾ ಜನರಲ್ ಬಿಪಿನ್ ರಾವತ್ ‘ಮೇಜರ್ ಗೋಗೋಯ್ ಯಾವುದೇ ಮಾನವ ಹಕ್ಕುಗಳ ಉಲ್ಲಂಘನೆ ನಡೆಸಿಲ್ಲ. ಸೇನೆಯ ವ್ಯವಸ್ಥೆಯಂತೆ ನಡೆಸಲಾಗುವ Standard Operating Procedure ಗಳ ಪ್ರಕಾರ ನಡೆದುಕೊಂಡಿದ್ದಾರೆ. ಪರಿಸ್ಥಿತಿಗೆ ತಕ್ಕ ಹಾಗೆ ನಿರ್ಧಾರ ತೆಗೆದುಕೊಳ್ಳುವ ಅವಕಾಶ ಅವರಿಗಿದೆ’, ಎಂದು ಸಮರ್ಥಿಸಿದ್ದಾರೆ. ಏನೂ ರಕ್ತಪಾತವಾಗದೆ ಜನರ ಜೀವವುಳಿಸಿದ ಮೇಜರ್ ಗೋಗೋಯ್ ಒಂದು ವೇಳೆ ಕಲ್ಲು ತೂರಾಟಗಾರರನ್ನು ನಿಯಂತ್ರಿಸುವ ಹಾಗೂ ಮತದಾನದ ಸಿಬ್ಬಂದಿಗಳನ್ನು ರಕ್ಷಿಸುವ ಭರದಲ್ಲಿ ಬಂದೂಕು ಬಳಸಲು ಆದೇಶಿಸಿದ್ದರೆ?

ಮೂಲತಃ ಅಸ್ಸಾಂನ ಗುವಾಹಟಿಯ ಕಾಮ್‌ರೂಪ್ ಗ್ರಾಮದ ಮೇಜರ್ ನಿತಿನ್ ಗೋಗೋಯ್‌ರನ್ನು ಅಸ್ಸಾಂನ ಪತ್ರಿಕೆಗಳು ಹಾಡಿ ಹೊಗಳಿವೆ. ಕೆಲವು ವಿಮರ್ಶಕರಂತೂ ಗೋಗೋಯ್ ತೋರಿದ ಪ್ರಚಂಡ ರಣತಂತ್ರವನ್ನು ವೀರಯೋಧ ಲಚಿತ್ ಬರ್ಫುಖಾನ್‌ಗೆ ಹೋಲಿಸಿದ್ದಾರೆ. 1671ರಲ್ಲಿ ಮೊಗಲರ ವಿರುದ್ಧ ಹೋರಾಡಿದ್ದ ಲಚಿತ್ ಬರ್ಫುಖಾನ್‌ರ ಧೈರ್ಯ ಮತ್ತು ಎದೆಗಾರಿಕೆ ಮೇಜರ್ ಗೋಗೋಯ್‌ರದ್ದು ಎನ್ನುವ ಮೂಲಕ ಅವರ ಮನೋಸ್ಥೈರ್ಯವನ್ನು ಹೆಚ್ಚಿಸಿದ್ದಾರೆ.

ಕಲ್ಲು ತೂರಾಟ
ಸ್ವಾತಂತ್ರ್ಯ ಪ್ರಾಪ್ತಿಯ ದಿನಗಳಿಂದಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಹಾಗೂ ದೇಶದ ಭದ್ರತೆಗೆ ಅಪಾಯಕಾರಿಯಾಗಿರುವ ನೂರಾರು ಘಟನೆಗಳು ನಡೆಯುತ್ತಿವೆ. ಹಾಗಾಗಿ ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದ ಎಲ್ಲಾ 22 ಜಿಲ್ಲೆಗಳಲ್ಲೂ ನಾಗರಿಕರ ಜೀವನ ರಕ್ಷಣೆ ಹಾಗೂ ಅವರ ಸಾಂವಿಧಾನಿಕ ಹಕ್ಕುಗಳನ್ನು ಎತ್ತಿ ಹಿಡಿಯಲು ಸದಾ ಸನ್ನದ್ಧವಾಗಿದೆ. ದಿನದ 24 ಗಂಟೆಯೂ ವರ್ಷದ 365 ದಿನಗಳೂ ಸೇನೆ ಇಲ್ಲಿ ಕ್ರಿಯಾಶೀಲವಾಗಿದೆ.

ಜಮ್ಮೂ, ಕಾಶ್ಮೀರ ಹಾಗೂ ಲಡಾಖ್ – ಈ ಮೂರೂ ಪ್ರದೇಶಗಳನ್ನು ರಾಜಕೀಯ ಹಾಗೂ ಸಾಮಾಜಿಕವಾಗಿ ವಿಶ್ಲೇಷಿದರೆ ಅಶಾಂತಿ ಹಾಗೂ ಹೆಚ್ಚು ಗಲಭೆಗಳು ಸಂಭವಿಸುವುದು ಕಾಶ್ಮೀರ ಕಣಿವೆಯಲ್ಲಿ. ಜಮ್ಮು (26,293 ಚದರ ಕಿ.ಮೀ) ಮತ್ತು ಲಡಾಖ್ (59,146 ಚ. ಕಿ. ಮೀ.)ಗೆ ಹೋಲಿಸಿದರೆ ಕಾಶ್ಮೀರದ ವಿಸ್ತೀರ್ಣದ ಕೇವಲ 15.73% ಮಾತ್ರ !

ಆದರೆ ಕಾಶ್ಮೀರದ ಜನಸಂಖ್ಯೆ 54.93%. ಅದರಲ್ಲೂ ಮುಸಲ್ಮಾನರು (96.40%) , ಹಿಂದೂ (2.45%), ಸಿಖ್ಖ (0.98%) ಇತರರು (0.17%) 2011ರ ಜನಗಣತಿಯ ಈ ಅಂಕಿ-ಅಂಶಗಳು ಬೊಟ್ಟುಮಾಡುವ ಸಂಗತಿಯೇನೆಂದರೆ ಕಾಶ್ಮೀರ ಕಣಿವೆಯಲ್ಲಿ ಮುಸ್ಲಿಂ ಜನಸಂಖ್ಯೆ ಗಣನೀಯ ಪ್ರಮಾಣದ ಏರಿರುವ ಬೆನ್ನಲ್ಲೇ ಪ್ರತಿನಿತ್ಯ ಶಾಂತಿ ಕದಡುವ ಘಟನೆಗಳು ತೀರಾ ಸಹಜ ಎಂಬಂತೆ ಸಂಭವಿಸುತ್ತಿವೆ. ಪಾಕಿಸ್ಥಾನ ಪ್ರೇರಿತ ಭಯೋತ್ಪಾದನಾ ಶಿಬಿರಗಳಿಗೆ ಸೇರುತ್ತಿರುವ ಕಾಶ್ಮೀರದ ಯುವಕರು ಒಂದೆಡೆಯಾದರೆ, ಪ್ರತ್ಯೇಕತಾವಾದಿ ನಾಯಕರುಗಳಿಗೆ ಈ ಜನಸಂಖ್ಯೆಯ ಬಲದಿಂದಲೇ ತಮ್ಮ ಬೇಡಿಕೆಯನ್ನು ಮತ್ತಷ್ಟು ತೀವ್ರವಾಗಿಸಲು ಸಾಧ್ಯವಾಯಿತು.

ಅಫ್ಜಲ್ ಗುರುವಿಗೆ ನೇಣು, ಬುರ್ಹಾನ್ ವಾನಿಯ ಹತ್ಯೆ ಸೇರಿದಂತೆ ಎಲ್ಲಾ ಸಂದರ್ಭಗಳನ್ನು ಬಳಸಿಕೊಂಡಿರುವ ಪ್ರತ್ಯೇಕತಾವಾದಿಗಳು ನಾಗರಿಕರನ್ನು ದಿಕುತಪ್ಪಿಸಿ, ಸಾಮಾಜಿಕ ವ್ಯವಸ್ಥೆಯನ್ನು ಬುಡಮೇಲುಗೊಳಿಸಲು ಕಲ್ಲುತೂರುವ ಪ್ರತಿಭಟನೆಗಳನ್ನು ಹೆಚ್ಚುಮಾಡಿದರು. 1931ರಿಂದಲೂ ಕಾಶ್ಮೀರ ಕಣಿವೆಯಲ್ಲಿ ಕಲ್ಲುತೂರಾಟದ ಘಟನೆಗಳು ನಡೆದಿವೆ. ಆದರೆ ಕಳೆದ 4 ವರ್ಷಗಳಲ್ಲಿ ಈ ಕಲ್ಲು ತೂರಾಟದ ಪ್ರಮಾಣ ತೀರಾ ಹೆಚ್ಚು. ‘ಇಂಡಿಯಾ ಟುಡೇ’ ಪತ್ರಿಕೆ ಮಾರ್ಚ್-2017ರಲ್ಲಿ ನಡೆಸಿದ ತನಿಖಾ ವರದಿಯ ಪ್ರಕಾರ ಕಲ್ಲು ತೂರಾಟದಲ್ಲಿ ಭಾಗವಹಿಸುವ ಯುವಕ-ಯುವತಿಯರಿಗೆ ದಿನನಿತ್ಯದ ಸಂಬಳ ನೀಡಲಾಗುತ್ತಿತ್ತುಎಂದು ಬಾರಾಮುಲ್ಲಾ ಜಿಲ್ಲೆಯ ಪ್ರತಿಭಟನಾಕಾರನೊಬ್ಬ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಸತ್ಯ ಬಾಯಿಬಿಟ್ಟಿದ್ದ. ಭಾರತ ಸರಕಾರದ ಇಂಟೆಲಿಜೆನ್ಸ್ ಬ್ಯೂರೋ ವರದಿಯಂತೆ ಕಲ್ಲು ತೂರಾಟದ ಪ್ರತಿಭಟನೆಗಳನ್ನು ಸಂಘಟಿಸಲು ಪ್ರತ್ಯೇಕತಾವಾದಿ ನಾಯಕರುಗಳಾದ ಸೈಯದ್ ಅಲಿಶಾಹ್ ಗೀಲಾನಿ ಮತ್ತು ಅಸಿಯಾ ಅಂದ್ರಾಬಿ ಸೇರಿದಂತೆ ಪ್ರಮುಖ ನಾಯಕರುಗಳಿಗೆ ಪಾಕಿಸ್ಥಾನದ ಐ.ಎಸ್.ಐ. (ISI) ಮೂಲಕ 800 ಕೋಟಿ ರೂಪಾಯಿಗಳು ಹರಿದುಬಂದಿತ್ತು. ಈ ಹೋರಾಟದಲ್ಲಿ ಭಾಗವಹಿಸುವ ಬಹುತೇಕ ಮಂದಿ ಕಾಶ್ಮೀರ ಕಣಿವೆಯ ಯುವಕ-ಯುವತಿಯರು. ತಾರುಣ್ಯದ ಹೊಸ್ತಿಲಲ್ಲೇ ಇವರನ್ನು ಬಳಸಿಕೊಂಡು ಇವರಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಮೊಳಗಿಸಿ, ಭಾರತೀಯ ಸೈನಿಕ ವಿರುದ್ಧ ಹೋರಾಡುವ ಮಾನಸಿಕತೆಯನ್ನು ಬೆಳಗಿಸಲಾಗುತ್ತಿತ್ತು. ಇದಕ್ಕಾಗಿಯೇ ‘ಕಾಶ್ಮೀರದ ಯುವಕ-ಯುವತಿಯರು ಕೈಯಲ್ಲಿ ಕಲ್ಲನ್ನಲ್ಲ, ಲ್ಯಾಪ್‌ಟ್ಯಾಪ್ ಹಿಡಿಯಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಕಳೆದ 2016ರಲ್ಲಿ ಕಾಶ್ಮೀರ ಕಣಿವೆಯಲ್ಲಿ 2690 ಕಲ್ಲು ತೂರಾಟದ ಪ್ರಕರಣಗಳು ನಡೆದಿತ್ತು. ತಿಂಗಳುಗಟ್ಟಲೆ ಶಾಲಾ-ಕಾಲೇಜುಗಳು ಬಂದ್ ಆಗಿತ್ತು. ಜನಜೀವನ ಅಸ್ತವ್ಯಸ್ತಗೊಂಡಿತ್ತು. ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿತ್ತು. ಈ ಎಲ್ಲಾ ಸಂದರ್ಭಗಳಲ್ಲೂ ಮೌನಿಯಾಗಿದ್ದ ಬುದ್ಧಿಜೀವಿ ವಲಯ ಮೇಜರ್ ಗೋಗೋಯ್ ಪ್ರಕರಣದಲ್ಲಿ ಕಾಶ್ಮೀರದಲ್ಲಿ , ಮಾನವ ಹಕ್ಕುಗಳನ್ನು ಕಾಪಾಡುವಂತೆ ಬೊಬ್ಬಿರಿಯುತ್ತಿದ್ದಾರೆ.

ಆರೋಪವೇನು ?
ಜೀಪ್‌ಗೆ ಕಟ್ಟಲ್ಪಟ್ಟ ವ್ಯಕ್ತಿ ಫಾರೊಕ್ ಅಹ್ಮದ್ ದಾರ್ ಬುದ್‌ಗಾಂ ಜಿಲ್ಲೆಯ ಚಿಲ್‌ಬ್ರಾನ್ ನಿವಾಸಿ. ಅಂದು ಮತಗಟ್ಟೆಗೆ ಬಂದು ಮತದಾನ ಮಾಡಿದ ನಂತರ ಕಲ್ಲು ತೂರಾಟ ನಡೆಸುವ ಗುಂಪಿನ ಬಳಿಯಿದ್ದ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಕಾರ್ಯಕರ್ತನಾದ ಫಾರೂಕ್, ತನ್ನನ್ನು ಜೀಪ್‌ಗೆ ಕಟ್ಟಿ ಹಿಂಸಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಸ್ಟೇಷನ್‌ನಲ್ಲಿ ದೂರು ನೀಡಿದ್ದ. ಆತನ ಪರವಾಗಿ ಇನ್ನೊಂದು ಎಫ್‌ಐಆರ್ ದಾಖಲಿಸಿದ ಮಾನವ ಹಕ್ಕು ಸಂಘಟನೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಕಾಶ್ಮೀರದಲ್ಲಿ ಭಾರತೀಯ ಸೇನೆ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ತನ್ನ ಹಳೆಯ ವಾದವನ್ನು ಮತ್ತೆ ಮುಂದಿಟ್ಟಿದೆ. ಈ ವಾದಕ್ಕೆ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರೆಂಟ್‌ನ ಯಾಸಿನ್ ಮಲಿಕ್, ಹುರಿಯತ್ ಕಾನ್ಫರೆನ್ಸ್‌ನ ಸೈಯದ್ ಗೀಲಾನಿ ಸೇರಿದಂತೆ ಅನೇಕ ಪ್ರತ್ಯೇಕತಾವಾದಿ ನಾಯಕರು ದನಿಗೂಡಿಸಿದ್ದಾರೆ. ಎಲ್ಲಾ ಆರೋಪಗಳನ್ನು ಭಾರತೀಯ ಸೇನೆ ಸಾರಾಸಗಟಾಗಿ ತಿರಸ್ಕರಿಸಿದೆ.

Leave a comment

Filed under Articles

ಸಮರಸತೆ ಭ್ರಾತೃತ್ವದ ಪರ್ವ

Monday, 07.08.2017  ರಾಜೇಶ್ ಪದ್ಮಾರ್

ಶ್ರಾವಣ ಮಾಸದ ಪೂರ್ಣಿಮೆಯಂದು ರಕ್ಷಾಬಂಧನದ ಸಂಭ್ರಮ. ಸಹೋದರತ್ವದ ಸಂದೇಶ ಸಾರುವ ಈ ಹಬ್ಬ ಒಂದೊಮ್ಮೆ ಉತ್ತರ ಭಾರತದಲ್ಲಿ ಜನಪ್ರಿಯವಾಗಿತ್ತು. ಇದೀಗ ದೇಶದಾದ್ಯಂತ ಹಾಗೂ ಭಾರತೀಯರು ನೆಲೆಸಿರುವ ವಿಶ್ವದ ಅನೇಕ ರಾಷ್ಟ್ರಗಳಲ್ಲೂ ಆಚರಿಸಲ್ಪಡುತ್ತಿದೆ. ಗಣೇಶ ಚತುರ್ಥಿ, ವಿಜಯದಶಮಿ ಇತ್ಯಾದಿ ಧಾರ್ವಿುಕ ಹಬ್ಬಗಳಿಗಿಂತ ಭಿನ್ನವಾಗಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ಆಯಾಮದ ಹಿನ್ನೆಲೆ ಹೊಂದಿರುವ ರಕ್ಷಾ ಬಂಧನ ಉತ್ಸವವು ಈ ನೆಲದ ಮೂಲಗುಣವಾದ ಭ್ರಾತೃತ್ವದ ಸಂದೇಶ ಸಾರುವ ವಿಶಿಷ್ಟ ಹಬ್ಬ. ಅಣ್ಣ-ತಂಗಿ, ಅಕ್ಕ-ತಮ್ಮಂದಿರ ನಡುವಿನ ಉತ್ಕಟ ಪ್ರೀತಿಯೇ ಈ ಹಬ್ಬದ ಹೂರಣ.

ಇದೀಗ ಸಾಮಾಜಿಕ ಹಬ್ಬವಾಗಿ ಎಲ್ಲೆಡೆಯೂ ಆಚರಿಸಲ್ಪಡುವುದರಿಂದ ಅಣ್ಣ-ತಮ್ಮ, ಅಕ್ಕ-ತಂಗಿ ಸೇರಿದಂತೆ ವರ್ಗ-ಜಾತಿ-ಪ್ರಾಂತ-ಪಕ್ಷ-ಭಾಷೆ-ಪಂಥ ಇತ್ಯಾದಿ ಭೇದ ಮರೆತು ಎಲ್ಲರೂ ಪರಸ್ಪರ ಸಂಭ್ರಮದಿಂದ ರಕ್ಷಾಬಂಧನವನ್ನು ಆಚರಿಸುತ್ತಾರೆ. ಈ ಅಮರಪ್ರೀತಿಯ ದ್ಯೋತಕವಾಗಿ ರಾಖಿ ಅಥವಾ ರಕ್ಷೆಯನ್ನು ಪರಸ್ಪರ ಬಲಗೈಗೆ ಕಟ್ಟುವುದು ಆ ಮೂಲಕ ಪರಸ್ಪರರನ್ನು ರಕ್ಷಿಸುವ ಮನೋಸಂಕಲ್ಪ ಮಾಡುವುದು ಈ ಹಬ್ಬದ ವಿಶೇಷ. ಅಪಾಯ ಅಥವಾ ಆಪತ್ತಿನ ಸಂದರ್ಭಗಳಲ್ಲಿ ತಕ್ಷಣ ನೆರವಾಗಿ ರಕ್ಷಿಸುವ ಜವಾಬ್ದಾರಿ ನನ್ನದು ಎಂಬ ಹೊಣೆಗಾರಿಕೆಯ ಮನೋಭಾವನೆ ರಾಖಿ ಕಟ್ಟಿಸಿಕೊಂಡವರಲ್ಲಿ ಒಡಮೂಡುತ್ತದೆ. ಹೀಗೆ ರಾಖಿ ಕಟ್ಟಿದವರನ್ನು ರಕ್ಷಿಸುವ ಹೊಣೆಗಾರಿಕೆ ಅಥವಾ ಜವಾಬ್ದಾರಿಯ ‘ಬಂಧನ’ವನ್ನು ಶಾಬ್ದಿಕ ರೂಪದಲ್ಲಿ ಸೂಚ್ಯವಾಗಿ ತಿಳಿಹೇಳುವ ಹಬ್ಬವೇ ರಕ್ಷಾಬಂಧನ.

ರಕ್ಷಾಬಂಧನವು ಒಂದು ಮತನಿರಪೇಕ್ಷ ಸಾಮಾಜಿಕ ಹಬ್ಬ. ಪ್ರಾಂತ-ಜಾತಿ-ಪಂಗಡ ಇತ್ಯಾದಿಗಳನ್ನು ಮೀರಿ ನಿಂತು ಭಾರತೀಯರನ್ನೆಲ್ಲ ಒಂದಾಗಿಸುವ ಹಬ್ಬ. ಭಾರತೀಯರೆಲ್ಲರೂ ಸಹೋದರ-ಸಹೋದರಿಯರು ಎನ್ನುವ ನಮ್ಮ ಭಾವನೆಗೆ ಇಂಬು ನೀಡುವ ಸಡಗರದ ದಿನವಿದು. ಅಥರ್ವಣ ವೇದದ ಭೂಮಿಸೂಕ್ತಾದಲ್ಲಿ ಉಲ್ಲೇಖವಾಗಿರುವ ‘ಮಾತಾ ಭೂಮಿಃ, ಪುತ್ರೋಹಂ ಪೃಥಿವ್ಯಾಃ’ ಶ್ಲೋಕದಂತೆ ಈ ಭೂಮಿಯೇ ನಮ್ಮ ತಾಯಿ ಹಾಗೂ ನಾವೆಲ್ಲ ಇದರ ಮಕ್ಕಳು. ಆದ್ದರಿಂದ ನಮ್ಮೆಲ್ಲರ ತಾಯಿ ಒಂದೇ! ಅದೇ ನಾವು ನಿಂತು-ಕುಳಿತು-ಎದ್ದು-ಮಲಗಿ-ಓಡಾಡುವ ಈ ಮಾತೃಭೂಮಿ ಅಂದರೆ ಭಾರತದ ನೆಲ ಅಥವಾ ಭಾರತಮಾತೆಯ ಮಡಿಲು. ಹಾಗಾಗಿ ಭಾರತಮಾತೆ 130 ಕೋಟಿ ಭಾರತೀಯರನ್ನು ಮಕ್ಕಳಾಗಿ ಹೊಂದಿದ್ದಾಳಲ್ಲವೇ? ಒಂದೇ ತಾಯಿಯ ಮಕ್ಕಳೆಂದಮೇಲೆ ಎಲ್ಲರೂ ಪರಸ್ಪರ ಸಹೋದರ-ಸಹೋದರಿಯರು ತಾನೇ? ಈ ಸಹೋದರತ್ವ ಭಾವ ಬೆಸೆದು ಪರಸ್ಪರ ಸಮರಸತೆ ಮೂಡಿಸುವುದೇ ರಕ್ಷಾಬಂಧನ ಹಬ್ಬದ ಸಾಮಾಜಿಕ ಆಯಾಮ. ಇಡೀ ದೇಶವಾಸಿಗಳನ್ನು ಒಟ್ಟುಗೂಡಿಸಿ ರಾಷ್ಟ್ರೀಯತೆಯ ಐಕ್ಯಮಂತ್ರ ಸಾರುವ ಶಕ್ತಿಯೂ ಈ ಹಬ್ಬಕ್ಕಿದೆ. ಹಾಗಾಗಿ ಮನೆಯಲ್ಲಿ ಅಣ್ಣ ಮತ್ತು ತಂಗಿ ರಾಖಿ ಕಟ್ಟಿ ಭ್ರಾತೃತ್ವ ಭಾವವನ್ನು ಆಚರಿಸುವುದರಿಂದ ಮೊದಲ್ಗೊಂಡು ದೇಶದ ಗಡಿಕಾಯುವ ಸೈನಿಕರು ಪರಸ್ಪರ ರಕ್ಷೆಯನ್ನು ಕಟ್ಟುವ ಮೂಲಕ ಬಂಧುತ್ವ ಭಾವದಿಂದ ಪುಳಕಿತಗೊಳ್ಳುತ್ತಾರೆ. ಕಾಶ್ಮೀರದ ಪಾಕ್ ಗಡಿಯಲ್ಲಿ ಕರ್ತವ್ಯಮಗ್ನನಾಗಿರುವ ಅಸ್ಸಾಂನ ಯೋಧ ತನ್ನ ತಂಡದ ತಮಿಳುನಾಡು, ಕರ್ನಾಟಕ, ಗುಜರಾತ್ ಅಥವಾ ಇತರ ರಾಜ್ಯದ ಮೂಲದಿಂದ ಬಂದ ಯೋಧರಿಗೆಲ್ಲರಿಗೂ ರಾಖಿಕಟ್ಟಿ ನಾವೆಲ್ಲರೂ ಒಂದೇ ರಾಷ್ಟ್ರದ ಮಕ್ಕಳು, ಭಾರತ್ ಮಾತಾಕೀ ಜೈ ಎನ್ನುತ್ತಾರಲ್ಲ, ಆ ರಾಷ್ಟ್ರಭಾವದ ಜಾಗರಣೆಯೇ ರಕ್ಷಾಬಂಧನ ಹಬ್ಬ ತಿಳಿಹೇಳುವ ಸಾಮಾಜಿಕ ಪಾಠ. ಇಂದು ಭಾರತದ ಒಳಗಿನ ಸಾಮಾಜಿಕ ವಿಷಮತೆಗೆ ಈ ಭ್ರಾತೃತ್ವ ಭಾವದ ಕುಸಿತವೂ ಪ್ರಮುಖ ಕಾರಣ. ತನ್ನಂತೆಯೇ ಪರರು ಎಂಬ ಸಮಾನತೆಯ ಆಶಯ ಎಲ್ಲರಿಗೂ, ಎಲ್ಲೆಡೆಯೂ ಮೂಡಿಬಂದರೆ ‘ಮೇಲು-ಕೀಳು’ ಎಂಬ ಭಾವನೆ ಖಂಡಿತ ನಿಮೂಲನೆಗೊಂಡೀತು. ಶ್ರೇಷ್ಠತೆಯ ವ್ಯಸನ ತೊಡೆದು ಹಾಕಿ, ಜಾತಿ-ಪಂಥಗಳ ಭೇದಭಾವ ಮೀರಿ ನಿಲ್ಲಲು ಭ್ರಾತೃತ್ವವೇ ಮೂಲಾಧಾರ. 1969ರಲ್ಲಿ ಉಡುಪಿಯಲ್ಲಿ ನಡೆದ ಸಂತಸಮ್ಮೇಳನದಲ್ಲಿ ಮೊಳಗಿದ ಘೋಷಣೆ-‘ಹಿಂದವಃ ಸೋದರಾ ಸರ್ವೆ. ಇಲ್ಲಿ ‘ಹಿಂದೂಗಳು’ ಅಂದರೆ ಭಾರತೀಯರು ಎಂಬ ವಿಶಾಲಾರ್ಥದಲ್ಲಿ ಬಳಸಲಾಗಿದೆ. ಭಾರತೀಯರೆಲ್ಲರೂ ಸಹೋದರರು ಎಂಬ ಭಾವ ಮೂಡಿದಾಗ ಮಾತ್ರ ನಮ್ಮೊಳಗಿನ ಭೇದ ಮೀರಿ ‘ನಾವೆಲ್ಲರೂ ಒಂದು’ ಎನ್ನುವ ಸಮರಸ ವಾತಾವರಣ ನಿರ್ವಣವಾಗುತ್ತದೆ. ಸೋದರತ್ವ ಭಾವ ಇಲ್ಲದ್ದರಿಂದಲೇ ಪರಸ್ಪರ ಜಗಳಗಳು, ತರ್ಕಗಳು; ರಾಜ್ಯ-ರಾಜ್ಯಗಳ ಮಧ್ಯೆ ನೀರು-ಭಾಷೆಗಾಗಿ ಜಗಳ! ರಾಜ್ಯದೊಳಗೇ ಜಿಲ್ಲೆ-ಜಿಲ್ಲೆಗಳಿಗೆ ನದಿನೀರಿನ ಯೋಜನೆಗಾಗಿ ಜಗಳ. ಸೋದರ-ಸೋದರಿ ಭಾವನೆ ಇಲ್ಲದ್ದರಿಂದಲೇ ಜಾತಿಯ ನಿಂದನೆ, ಅಸಮಾನತೆ, ಮಾನಹಾನಿ-ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿರುವುದು. ಹಾಗಾಗಿ ನಮ್ಮ ಸಮಾಜ ಎದುರಿಸುತ್ತಿರುವ ಈ ‘ಸ್ವಯಂಕೃತ’ ಸಮಸ್ಯೆಗಳನ್ನು ನಿವಾರಿಸಲು ರಾಮಬಾಣವೇ ಈ ರಕ್ಷಾ ಬಂಧನ ಹಬ್ಬ. ಶ್ರಾವಣ ಪೂರ್ಣಿಮೆಯ ಈ ಪವಿತ್ರ ದಿನದಂದು ಮನೆ-ಕಚೇರಿ-ಶಾಲೆ-ಕಾಲೇಜುಗಳಲ್ಲಿ ನಮ್ಮ ಆತ್ಮೀಯರಿಗೆ ರಾಖಿ ಕಟ್ಟೋಣ. ಪರಸ್ಪರ ಬಂಧುತ್ವದ ಭಾವ ಬೆಸೆಯೋಣ.

(ಲೇಖಕರು ಹವ್ಯಾಸಿ ಬರಹಗಾರರು)

http://vijayavani.net/%E0%B2%B8%E0%B2%AE%E0%B2%B0%E0%B2%B8%E0%B2%A4%E0%B3%86-%E0%B2%AD%E0%B3%8D%E0%B2%B0%E0%B2%BE%E0%B2%A4%E0%B3%83%E0%B2%A4%E0%B3%8D%E0%B2%B5%E0%B2%A6-%E0%B2%AA%E0%B2%B0%E0%B3%8D%E0%B2%B5/

***

ಪುರಾಣಗಳಲ್ಲಿ ಉಲ್ಲೇಖ

ಪುರಾಣದ ಕಥೆಗಳಲ್ಲೂ, ಚಾರಿತ್ರಿಕ ಪ್ರಸಂಗಗಳಲ್ಲೂ ರಕ್ಷಾ ಬಂಧನದ ಉಲ್ಲೇಖ ಹೇರಳವಾಗಿ ಸಿಗುತ್ತದೆ. ಶಿಶುಪಾಲನ ವಧೆಯ ಸಂದರ್ಭದಲ್ಲಿ ಕೃಷ್ಣನ ಬಲಗೈಗೆ ಪುಟ್ಟಗಾಯವಾದಾಗ ತನ್ನ ಸೆರಗಿನ ಅಂಚನ್ನು ಕತ್ತರಿಸಿ ಕೃಷ್ಣನ ಬಲಗೈಗೆ ಕಟ್ಟಿದ್ದ ದ್ರೌಪದಿಯನ್ನು ಮುದೊಂದು ದಿನ ಅಕ್ಷಯವಸ್ತ್ರ ನೀಡುವ ಮೂಲಕ ದುರ್ಯೋಧನನ ದರ್ಬಾರಿನಲ್ಲಿ ಸಂರಕ್ಷಿಸುತ್ತಾನೆ. ಇಲ್ಲಿಂದ ಮುಂದೆ ರಕ್ಷಾಬಂಧನದ ಪರಿಕಲ್ಪನೆ ಮೊದಲ್ಗೊಂಡಿತು ಎಂದು ವ್ಯಾಸಪ್ರಣೀತರು ಹೇಳುವುದುಂಟು. ಕೆಲವೊಮ್ಮೆ ಇಂದ್ರ-ಶಚೀದೇವಿ ಹಾಗೂ ರಾಕ್ಷಸರ ಜತೆಗಿನ ಯುದ್ಧಗಳು, ರಜಪೂತರ ರಾಜ್ಯಾಡಳಿತದ ಸಂದರ್ಭಗಳಲ್ಲಿ, ಅಲೆಗ್ಸಾಂಡರ್-ಪುರೂರವ ಕದನದ ವೇಳೆ… ಹೀಗೆ ಬೇರೆ-ಬೇರೆ ಸಂದರ್ಭಗಳಲ್ಲಿ ನೇರ ರಕ್ತಸಂಬಂಧಿ ಸಹೋದರ-ಸಹೋದರಿಯಲ್ಲದ, ಆದರೆ ಸಹೋದರ ಭಾವದಿಂದ ಪರಸ್ಪರ ರಾಖಿಕಟ್ಟಿ ಭ್ರಾತೃತ್ವದ ಭಾವ ಬೆಸೆದ ಅನೇಕ ಉದಾಹರಣೆಗಳು ಕಾಣಸಿಗುತ್ತವೆ. ಮೋದಿ, ಯೋಗಿಗೆ ಮುಸ್ಲಿಂ ಮಹಿಳೆಯರ ರಾಖಿ

ತ್ರಿವಳಿ ತಲಾಕ್ ವಿರುದ್ಧ ದನಿ ಎತ್ತಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಧನ್ಯವಾದ ಸಲ್ಲಿಸಲು ವಾರಾಣಸಿಯ ಮುಸ್ಲಿಂ ಮಹಿಳೆಯರು ರಾಖಿ ಕಳುಹಿಸಿದ್ದಾರೆ. ಈ ರಾಖಿಯನ್ನು ಮುತ್ತು ಹಾಗೂ ದಾರದಿಂದ ಸಿದ್ಧಪಡಿಸಲಾಗಿದ್ದು, ವಿಶೇಷವಾಗಿ ಮೋದಿ ಹಾಗೂ ಯೋಗಿ ಭಾವಚಿತ್ರವನ್ನು ಬಳಸಲಾಗಿದೆ. ವಿದ್ಯಾರ್ಥಿಗಳಿಂದ 110 ಅಡಿ ರಾಖಿ

ಉತ್ತರಪ್ರದೇಶದ ಮೊರಾದಬಾದ್ ಶಾಲೆಯೊಂದರ ವಿದ್ಯಾರ್ಥಿಗಳು ರಕ್ಷಾ ಬಂಧನ ಪ್ರಯುಕ್ತ 110 ಅಡಿ ಉದ್ದದ ರಾಖಿ ತಯಾರಿಸಿ ಯೋಧರಿಗೆ ಕಳುಹಿಸಿದ್ದಾರೆ. ದೇಶದ ನಾನಾ ರಾಜ್ಯಗಳ ಸಂಸ್ಕೃತಿ ಹಾಗೂ ಧರ್ಮದ ನಡುವಿನ ಏಕತೆಯನ್ನು ಬಿಂಬಿಸಲಾಗಿರುವ ರಾಖಿಯನ್ನು ಬಣ್ಣದ ಕಾಗದ, ಬಟ್ಟೆ, ಲೇಸ್ ಹಾಗೂ ಅಲಂಕಾರಿಕ ವಸ್ತುಗಳನ್ನು ಬಳಸಿ ತಯಾರಿಸಲಾಗಿದೆ. ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ಕೃತ್ಯದ ನಂತರ ಯೋಧರಿಗೆ ರಾಖಿ ಕಳುಹಿಸುವ ಆಲೋಚನೆ ಬಂತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ದೇಶ ಹಾಗೂ ಸೈನಿಕರ ಬಗ್ಗೆ ತಮಗಿರುವ ಪ್ರೀತಿ ವಿಶ್ವಾಸವನ್ನು ತೋರಿಸಲು ವಿದ್ಯಾರ್ಥಿಗಳು ಈ ರಾಖಿ ಸಿದ್ಧಪಡಿಸಿದ್ದಾರೆ. ಸೈನಿಕರಿಗೆ 22 ಸಾವಿರ ರಾಖಿ ರವಾನೆ

ಸೈನಿಕರ ಆರೋಗ್ಯವೃದ್ಧಿ ಹಾಗೂ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪಶ್ಚಿಮ ಬಂಗಾಳ, ಉತ್ತರಾಖಂಡ, ಸಿಕ್ಕಿಂ, ಗುಜರಾತ್, ತಮಿಳುನಾಡಿನ ಆರ್​ಎಸ್​ಎಸ್ ಶಾಲೆಯ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಸಾವಿರಾರು ರಾಖಿಗಳನ್ನು ಸ್ವತಃ ತಾವೇ ತಯಾರಿಸಿ ಅದರ ಜತೆಗೆ ಶುಭಸಂದೇಶ ಒಳಗೊಂಡ ಗ್ರೀಟಿಂಗ್ ಕಾರ್ಡ್​ಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅವುಗಳನ್ನು ಲೇಹ್, ಸಿಯಾಚಿನ್ ಮತ್ತು ಸಿಕ್ಕಿಂ ಗಡಿಯಲ್ಲಿ ಕರ್ತವ್ಯನಿರತ ಯೋಧರಿಗೆ ಏರ್ ಇಂಡಿಯಾ ಮೂಲಕ ತಲುಪಿಸಲಾಗಿದೆ. ಆಗಸ್ಟ್ 5ರಂದು ಯೋಧರಿಗೆ ರಾಖಿ ಮತ್ತು ಶುಭಾಶಯ ಪತ್ರಗಳನ್ನು ತಲುಪಿಸಲಾಗಿದ್ದು, ರಾಜ್ಯಸಭಾ ಮಾಜಿ ಸದಸ್ಯ ಹಾಗೂ ‘ವಿಜಯವಾಣಿ’ ಅಂಕಣಕಾರ ತರುಣ್ ವಿಜಯ್ ಈ ಅಭಿಯಾನದ ನೇತೃತ್ವ ವಹಿಸಿದ್ದಾರೆ. ‘ಸಿಸ್ಟರ್ಸ್4ಜವಾನ್ಸ್’ ಎಂಬ ಘೋಷವಾಕ್ಯದಡಿ ನಡೆಸಲಾದ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಸಿಕ್ಕಿಂಗೆ 7 ಸಾವಿರ ಹಾಗೂ ಲೇಹ್ ಮತ್ತು ಸಿಯಾಚಿನ್​ಗೆ 15 ಸಾವಿರ ರಾಖಿಗಳನ್ನು ಕಳುಹಿಸಿಕೊಡಲಾಗಿದೆ. ಸಾಮಾನ್ಯವಾಗಿ ಸಹೋದರಿಯ ರಕ್ಷಣೆಗೆ ಸಹೋದರ ಬದ್ಧನಾಗಿರುತ್ತಾನೆ ಎಂಬ ಉದ್ದೇಶದಿಂದ ರಾಖಿ ಕಟ್ಟಲಾಗುತ್ತದೆ. ಆದರೆ ಈ ವಿದ್ಯಾರ್ಥಿನಿಯರು ಸ್ವತಃ ತಾವೇ ತಯಾರಿಸಿದ ರಾಖಿಗಳನ್ನು ಯೋಧರಿಗೆ ಕಳುಹಿಸಿಕೊಡುವ ಮೂಲಕ ಅವರಿಗೆ ರಕ್ಷಾಕವಚವಾಗಿ ನಿಂತಿದ್ದಾರೆ ಎಂದು ತರುಣ್ ವಿಜಯ್ ಪ್ರತಿಕ್ರಿಯಿಸಿದ್ದಾರೆ.

Leave a comment

Filed under Articles

ಸಮಾಜಯೋಗಿ ಲಕ್ಷ್ಮಣರಾವ್ ಇನಾಮ್​ದಾರ್​

 Friday, 22.09.2017 ರಾಜೇಶ್ ಪದ್ಮಾರ್

ಗುಜರಾತನ್ನು ಕರ್ಮಭೂಮಿಯನ್ನಾಗಿಸಿ ಅನೇಕ ಸಾಮಾಜಿಕ ಕಾರ್ಯಕರ್ತರಿಗೆ ಪ್ರೇರಣೆ ಪ್ರೋತ್ಸಾಹ ನೀಡಿ, ಇಂದಿನ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಪ್ರತಿಭೆಗಳಿಗೆ ನೀರೆರೆದು ಪೋಷಿಸಿದ ಆರೆಸ್ಸೆಸ್ ಪ್ರಚಾರಕ ಹಾಗೂ ಸಹಕಾರ ಭಾರತಿಯ ಸ್ಥಾಪನೆಯ ಮುಂಚೂಣಿಯಲ್ಲಿದ್ದ ಲಕ್ಷ್ಮಣರಾವ್ ಮಾಧವ ಇನಾಮ್ಾರ್​ರದ್ದು ಪ್ರೇರಣಾದಾಯಿ ವ್ಯಕ್ತಿತ್ವ.

ಜೀವನದುದ್ದಕ್ಕೂ ಸಮಾಜಸೇವೆಯಲ್ಲಿಯೇ ಸಾರ್ಥಕ್ಯ ಕಂಡ ಲಕ್ಷ್ಮಣರಾವ್ ಇನಾಮ್ಾರರ ಈ ಹೆಸರು ಗುಜರಾತಿಗರಿಗೆ ಅಷ್ಟಾಗಿ ಪರಿಚಿತವಲ್ಲ; ಬದಲಾಗಿ ‘ವಕೀಲ್ ಸಾಬ್’ ಅಂದರೆ ಬಹುತೇಕರು ಬಲ್ಲರು.

ಗುಜರಾತ್ ಸೇರಿದಂತೆ ಪಶ್ಚಿಮ ಭಾರತದಲ್ಲಿ ಸಂಘದ ಬೇರುಗಳನ್ನು ಗಟ್ಟಿಗೊಳಿಸಿದ ಲಕ್ಷ್ಮಣರಾವ್, ಭಾರತದುದ್ದಗಲ ಪ್ರವಾಸ ಮಾಡಿ, ದೇಶದ ಸಾಮಾನ್ಯ ಜನರ ಆರ್ಥಿಕತೆ, ಹಣಕಾಸು ವ್ಯವಹಾರಗಳ ಪ್ರಗತಿಗಾಗಿ ಸಹಕಾರಿ ಆಂದೋಲನಕ್ಕೆ ಮುಂದಾದರು. ಪರಿಣಾಮವಾಗಿಯೇ 1978ರಲ್ಲಿ ಸಹಕಾರ ಭಾರತಿ ಎಂಬ ಆರೆಸ್ಸೆಸ್ ಪ್ರೇರಿತ ಸಂಸ್ಥೆ ಸ್ಥಾಪಿಸಲ್ಪಟ್ಟಿತು. ಇಂದು ಈ ಸಂಸ್ಥೆ ಭಾರತದ ಸಹಕಾರಿ ಕ್ಷೇತ್ರದ ಅತಿದೊಡ್ಡ ಸಂಸ್ಥೆಯಾಗಿ ರೂಪುಗೊಂಡು ದೇಶದ ಆರ್ಥಿಕ ಪ್ರಗತಿಗೆ ಮಹತ್ತರ ಕೊಡುಗೆ ನೀಡುತ್ತಿದೆ.

‘ಬಿನಾ ಸಂಸ್ಕಾರ್, ನಹೀ ಸಹಕಾರ್, ಬಿನಾ ಸಹಕಾರ್ ನಹೀ ಉದ್ಧಾರ್’ ಎಂಬ ಜನಪ್ರಿಯ ಘೋಷಣೆಯನ್ನು ಜಾರಿಗೆ ತಂದವರೇ ಲಕ್ಷ್ಮಣರಾವ್. ಅಂದರೆ ಸಂಸ್ಕಾರವಿಲ್ಲದೆ ಸಹಕಾರ ಅಸಾಧ್ಯ, ಸಹಕಾರವಿಲ್ಲದೆ ಪ್ರಗತಿ ಅಸಾಧ್ಯ. ಆದ್ದರಿಂದ ಯಾವುದೇ ಸಂಸ್ಥೆ, ಸಮಾಜ, ಸಂಘಟನೆ ಇರಲಿ ಅಲ್ಲಿ ಸಂಸ್ಕಾರಯುಕ್ತ ಸಹಕಾರ ಇದ್ದಲ್ಲಿ ಮಾತ್ರ ಪ್ರಗತಿ ಸಾಧ್ಯ ಎಂಬುದನ್ನು ಒತ್ತಿ ಹೇಳುತಿದ್ದರು ಇನಾಮ್ಾರ್.

ಸೆಪ್ಟೆಂಬರ್ 21, 1917 ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಖಚಾವ್ ಎಂಬ ಹಳ್ಳಿಯಲ್ಲಿ ಜನಿಸಿದ ಲಕ್ಷ್ಮಣರಾವ್ ದೊಡ್ಡ ಅವಿಭಕ್ತ ಕುಟುಂಬದ ಅಕ್ಕರೆಯ ವಾತಾವರಣದಲ್ಲಿ ಬೆಳೆದವರು. ಅವರಿಗೆ 7 ಸಹೋದರರು, ಇಬ್ಬರು ತಂಗಿಯಂದಿರು. ತಂದೆ ಮಾಧವ ರಾವ್ ಸರ್ಕಾರಿ ಅಧಿಕಾರಿ. ಅವರಿಗೆ ಆರು ಸಹೋದರಿಯರು, ಆ ಪೈಕಿ ನಾಲ್ವರು ಸಹೋದರಿಯರು ವಿಧವೆಯಾದ್ದರಿಂದ ತಮ್ಮ ಮಕ್ಕಳೊಂದಿಗೆ ತವರಿಗೆ ಮರಳಿ ಮಾಧವರಾವ್​ರ ಮನೆಯಲ್ಲೇ ಇದ್ದರು. ಹೀಗಾಗಿ ಬಲುದೊಡ್ಡ ಕುಟುಂಬದ ನಿರ್ವಹಣೆಯೂ ಒಂದು ಸವಾಲು. ಆದರೂ, ಕುಟುಂಬದ ಪ್ರತಿಯೋರ್ವ ಸದಸ್ಯರಲ್ಲಿದ್ದ ಸಂಸ್ಕಾರ, ಪರಸ್ಪರ ಸಹಕಾರ ಇಡೀ ಕುಟುಂಬದ ಯಶಸ್ವೀ ನಿರ್ವಹಣೆಯ ಬೆನ್ನೆಲುಬಾಗಿತ್ತು. ಈ ಪಾಠವನ್ನು ಚಿಕ್ಕಂದಿನಿಂದಲೇ ಕಲಿತ ಲಕ್ಷ್ಮಣರಾಯರು ಮುಂದೆ ಸಹಕಾರಿ ಕ್ಷೇತ್ರದಲ್ಲೂ ಅಳವಡಿಸಿ ಒಂದು ತಂಡವಾಗಿ ಕೆಲಸ ನಿರ್ವಹಿಸಲು (ಟೀಮ್ ವರ್ಕ್) ಬೇಕಾದ ಕೌಶಲ, ಮನೋಭೂಮಿಕೆಯನ್ನು ಕಾರ್ಯಕರ್ತರಿಗೆ ತಿಳಿಹೇಳುತ್ತಿದ್ದರು.

1939ರಲ್ಲಿ ಕಾನೂನು ಪದವಿ ವ್ಯಾಸಂಗದ ವೇಳೆ ಸಾಮಾಜಿಕ ಬದುಕಿನತ್ತ ಆಸಕ್ತಿ ತೋರಿದ ಲಕ್ಷ್ಮಣರಾವ್ ಸ್ವಾತಂತ್ರ್ಯ ಆಂದೋಲನದ ಅನೇಕ ಸಭೆಗಳಲ್ಲಿ ಭಾಗವಹಿಸಿದ್ದರು. ಸ್ವಾತಂತ್ರ್ಯೕರ ಸಾವರ್ಕರ್​ರ ಕರೆಗೆ ಓಗೊಟ್ಟು ಅನೇಕ ಯುವ ವಕೀಲರು, ಕಾನೂನು ವಿದ್ಯಾರ್ಥಿಗಳು ಹೈದರಾಬಾದ್​ನ ನಿಜಾಮರ ವಿರುದ್ಧದ ಶಾಂತಿಯುತ ಸತ್ಯಾಗ್ರಹ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಆ ಪೈಕಿ ಲಕ್ಷ್ಮಣರಾವ್ ಕೂಡ ಒಬ್ಬರು.

1943ರಲ್ಲಿ ಸಂಘದ ಸಂಪರ್ಕಕ್ಕೆ ಬಂದ ಮೇಲೆ ಇವರ ಜೀವನದ ದಿಕ್ಕೇ ಬದಲಾಯಿತು. ಕೇವಲ 25ರ ಹರೆಯದಲ್ಲಿ ಗುಜರಾತಿನ ನವ್​ಸಾರಿಗೆ ಬಂದಿಳಿದು ಪ್ರಚಾರಕ್ (ಪೂರ್ಣಾವಧಿ) ಆಗಿ ಸಮಾಜಸೇವೆಗೆ ತನ್ನನ್ನು ತಾನು ಸಮರ್ಪಿಸುವ ದೃಢ ಸಂಕಲ್ಪ ಕೈಗೊಂಡರು. ಜೀವನಪೂರ್ತಿ ಅವಿವಾಹಿತರಾಗಿಯೇ ಉಳಿದು, ಗುಜರಾತನ್ನೇ ಕರ್ಮಭೂಮಿಯನ್ನಾಗಿ ಆರಿಸಿ, ಸದ್ದಿಲ್ಲದ ಸಾಧಕರಾಗಿ ಸಾವಿರಾರು ಯುವಕರಲ್ಲಿ ದೇಶಭಕ್ತಿಯ ಹಣತೆ ಹಚ್ಚಿದರು.

ಗಾಂಧಿ ಹತ್ಯೆಯ ಮಿಥ್ಯಾರೋಪ ಹೊರಿಸಿ ಆರೆಸ್ಸೆಸ್ ಸ್ವಯಂಸೇವಕರ ಮನೆ, ಇತರೆ ಆಸ್ತಿಯ ಲೂಟಿ ನಡೆದಾಗ ಸ್ವಯಂಸೇವಕರನ್ನು ಸುರಕ್ಷಿತವಾಗಿರಿಸಿ, ಅವರಲ್ಲಿ, ಮನೋಸ್ಥೈರ್ಯ ಕುಸಿಯದ ಹಾಗೆ ವಿಶ್ವಾಸ ತುಂಬಿದವರೇ ಲಕ್ಷ್ಮಣರಾವ್. ಗುಜರಾತ್​ನ ಅನೇಕ ಕಡೆ ಅಂದಿನ ಕಾಂಗ್ರೆಸ್ ಹೊರಿಸಿದ್ದ ಸುಳ್ಳು ಆರೋಪದ ಪರಿಣಾಮವಾಗಿ ಸಾವಿರಾರು ಸ್ವಯಂಸೇವಕರ ಮೇಲೆ ದಾಳಿ ನಡೆಸಲಾಗಿತ್ತು. ಬಿರುಗಾಳಿಯ ಹೊತ್ತಲ್ಲೂ ಓರ್ವ ಕುಶಲ ಅಂಬಿಗನಂತೆ ಸಂಘನೌಕೆಯನ್ನು ಗುಜರಾತ್​ನಲ್ಲಿ ಮುನ್ನ್ನೆಸಿದ ಶ್ರೇಯಸ್ಸು ಲಕ್ಷ್ಮಣರಾವ್​ರಿಗೆ ಸಲ್ಲುತ್ತದೆ.

1952ರಲ್ಲಿ ಗುಜರಾತ್​ನ ಪ್ರಾಂತ ಪ್ರಚಾರಕರಾಗಿ ನಿಯುಕ್ತಿಗೊಂಡ ಇವರು ರಾಜ್ಯಾದ್ಯಂತ ಪ್ರವಾಸ ಮಾಡಿ ನಾಲ್ಕು ವರ್ಷಗಳಲ್ಲಿ 150 ಹೊಸ ಶಾಖೆಗಳನ್ನು ಪ್ರಾರಂಭ ಮಾಡಿದರು. ಸಹಸ್ರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ಸಂಜೆಗಳನ್ನು ಆರೆಸ್ಸೆಸ್ ಅಂಗಳದಲ್ಲಿ ಕಳೆಯುತಿದ್ದರು. ಆ ಪೈಕಿ ಓರ್ವ ಹುಡುಗನೇ ನರೇಂದ್ರ ಮೋದಿ. ನಿರರ್ಗಳ ಭಾಷಣಕಾರರಾಗಿದ್ದ ಲಕ್ಷ್ಮಣರಾಯರ ಮಾತುಗಳು ಯುವಕರನ್ನು ರಾಷ್ಟ್ರೀಯ ವಿಚಾರಧಾರೆಗೆ ಸೆಳೆಯುತ್ತಿದ್ದವು. ಲಕ್ಷ್ಮಣರಾವ್​ರ ಸಲಹೆಯಂತೆ ಅನೇಕ ಯುವಕರು ಪ್ರಚಾರಕರಾಗಿ ಸಮಾಜಸೇವೆಯನ್ನೇ ಬಾಳಿನ ಧ್ಯೇಯವಾಗಿ ಸ್ವೀಕರಿಸಿದರು. ಸುಮಾರು 35 ವರ್ಷಗಳ ಕಾಲ ಗುಜರಾತ್​ನಲಿದ್ದು ಸಂಘಕಾರ್ಯ ಬೆಳೆಸಿದ ಇವರು 1978ರಲ್ಲಿ ಸಹಕಾರ ಭಾರತಿಯ ಸ್ಥಾಪನೆಯೊಂದಿಗೆ ದೇಶದುದ್ದಗಲ ಪ್ರವಾಸ ಮಾಡಲಾರಂಭಿಸಿದರು. ಅನೇಕ ರಾಜ್ಯಗಳಲ್ಲಿ ಸಹಕಾರ ಭಾರತಿಯ ಘಟಕಗಳು ತೆರೆಯಲ್ಪಟ್ಟಿತು. ಇಂದು ಭಾರತದ 450ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 22,000ಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳನ್ನೊಳಗೊಂಡ ದೇಶದ ನಂ.1 ಸಂಘಟನೆ ಎನಿಸಿದೆ.

1984ರಲ್ಲಿ ತಮ್ಮ 67ನೇ ವಯಸ್ಸಿನಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಿಧನ ಹೊಂದಿದ ಲಕ್ಷ್ಮಣರಾವ್ ಇನಾಮ್ಾರ್ ತಮ್ಮ ಕರ್ತೃತ್ವ, ನೇತೃತ್ವದ ಮೂಲಕ ಸಾವಿರಾರು ಕಾರ್ಯಕರ್ತರ ಮನಸ್ಸಿನಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತಿದ್ದಾರೆ.

2001ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಆಗಿನ ಆರೆಸ್ಸೆಸ್ ಸರಸಂಘಚಾಲಕ ಕು.ಸೀ. ಸುದರ್ಶನ್, ಆಗಿನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನರೇಂದ್ರ ಮೋದಿಯವರು ಬರೆದಿದ್ದ ‘ಸೇತುಬಂಧ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಲಕ್ಷ್ಮಣರಾವ್​ರ ಜೀವನ ಸಾಧನೆಯನ್ನು ಕೊಂಡಾಡಿದ್ದರು. 2008ರಲ್ಲಿ 16 ಆರೆಸ್ಸೆಸ್ ಪ್ರಚಾರಕರ ಕುರಿತಾಗಿ ನರೇಂದ್ರ ಮೋದಿಯವರು ಬರೆದ ‘ಜ್ಯೋತಿಪುಂಜ’ ಪುಸ್ತಕದಲ್ಲಿ ಲಕ್ಷ್ಮಣರಾವ್​ರನ್ನು ವಿಶೇಷವಾಗಿ ಪ್ರಶಂಶಿಸಿ ಬರೆದಿದ್ದರು. 1979ರಲ್ಲಿ ಬರೋಡಾ ವಿಭಾಗ ಪ್ರಚಾರಕರಾಗಿ, ನಂತರ ಸಂಭಾಗ ಪ್ರಚಾರಕರಾಗಿ ಕಾರ್ಯನಿರ್ವಹಿಸುವಾಗ ಲಕ್ಷ್ಮಣರಾಯರು ಕೊಟ್ಟ ಮಾರ್ಗದರ್ಶನವನ್ನು ಸ್ಮರಿಸುವ ಮೋದಿ, 1982ರಲ್ಲಿ ಗುಜರಾತ್ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆಯುವ ಪ್ರೇರಣೆ ಲಭಿಸಿದ್ದೂ ಲಕ್ಷ್ಮಣರಾಯರಿಂದ ಎಂದಿದ್ದಾರೆ.

ದಿನನಿತ್ಯದ ಓದು, ಯೋಗ, ಪ್ರಾಣಾಯಾಮ, ವ್ಯಾಯಾಮ, ಅಚ್ಚುಕಟ್ಟಾದ ದೈನಿಕ ಯೋಜನೆ, ಭಾಷಣ ಕಲೆ, ಪ್ರತ್ಯುತ್ಪನ್ನಮತಿ, ಎಲ್ಲರ ಸಹಭಾಗಿತ್ವದ ಮೂಲಕ ನಾಯಕತ್ವ, ಸಂಸ್ಕಾರ ಸಹಿತ ಸಹಕಾರ- ಇತ್ಯಾದಿ ಅನೇಕ ಗುಣಗಳನ್ನು ಲಕ್ಷ್ಮಣರಾವ್ ಇನಾಮ್ಾರ್​ರ ಪ್ರೇರಣೆಯಿಂದಲೇ ನರೇಂದ್ರ ಮೋದಿಯವರು ಮೈಗೂಡಿಸಿಕೊಂಡಿದ್ದರು ಎನ್ನುತ್ತಾರೆ ಮೋದಿಯ ಆಪ್ತರಲ್ಲೊಬ್ಬರಾದ ಕಿಶೋರ್ ಮಕ್ವಾನಾ.

ಸಾವಿರಾರು ಸಾಮಾಜಿಕ ಕಾರ್ಯಕರ್ತರಿಗೆ ಪ್ರೇರಣೆ ನೀಡಿದ ದೀನ್​ದಯಾಳ್ ಉಪಾಧ್ಯಾಯ, ನಾನಾಜಿ ದೇಶಮುಖ್​ರ ಸಮಕಾಲೀನರಾಗಿದ್ದ ಆರೆಸ್ಸೆಸ್ ಧುರೀಣ ಲಕ್ಷ್ಮಣರಾವ್ ಇನಾಮ್​ದಾರ್​ ಓರ್ವ ಸಮಾಜಯೋಗಿ.

(ಲೇಖಕರು ಸಾಮಾಜಿಕ ಕಾರ್ಯಕರ್ತರು, ಹವ್ಯಾಸಿ ಬರಹಗಾರರು)

http://vijayavani.net/%E0%B2%B8%E0%B2%AE%E0%B2%BE%E0%B2%9C%E0%B2%AF%E0%B3%8A%E0%B3%95%E0%B2%97%E0%B2%BF-%E0%B2%B2%E0%B2%95%E0%B3%8D%E0%B2%B7%E0%B3%8D%E0%B2%AE%E0%B2%A3%E0%B2%B0%E0%B2%BE%E0%B2%B5%E0%B3%8D-%E0%B2%87%E0%B2%A8/

Leave a comment

Filed under Articles

ಸಾಮರಸ್ಯಕ್ಕೆ ಬೇಕು ‘ತೆರೆದ ಮನಸ್ಸು’

ಲೇಖನ: ರಾಜೇಶ್ ಪದ್ಮಾರ್

‘ಸವರ್ಣೀಯ ಸಮಾಜದ ಮನಸ್ಸಿನ ಕೊಳೆಯೇ ಅಸ್ಪೃಶ್ಯತೆ. ಅದೊಂದು ಮಾನಸಿಕ ವಿಕೃತಿ. ಅಸ್ಪೃಶ್ಯತೆ ಎಂದರೆ ಸವರ್ಣೀಯರ ಈ ಸಂಕುಚಿತ ಮನೋಭಾವವನ್ನು ತೆಗೆದು ಹಾಕುವುದು’ ಎಂದು ಹೇಳಿದ್ದರು ಆರೆಸ್ಸೆಸ್ಸಿನ ಎರಡನೇ ಸರಸಂಘಚಾಲಕರಾಗಿದ್ದ ಗುರೂಜಿ ಗೋಳ್ವಲ್ಕರ್.  ಅಸ್ಪೃಶ್ಯತೆಯ ಆಚರಣೆಯನ್ನು ಬೇರು ಸಹಿತ ಕಿತ್ತೆಸೆಯಬೇಕೆಂಬುದು ಅವರ ಹಂಬಲ. ಗುರೂಜಿ ಗೋಳ್ವಲ್ಕರ್‌ರ ಪ್ರಕಾರ ಅಸ್ಪೃಶ್ಯತೆಯನ್ನು ಆಚರಿಸುತ್ತಿರುವ ಸವರ್ಣೀಯ ಸಮಾಜ, ಅಸ್ಪೃಶ್ಯತೆಗೊಳಗಾಗಿ ಕೀಳರಿಮೆಯಲ್ಲಿ ನರಳುತ್ತಿರುವವರು, ಈ ಆಚರಣೆಗಳಿಗೆ ಧಾರ್ಮಿಕ ಮಾನ್ಯತೆ ಕೊಟ್ಟಿರುವ ಮಠಾಧೀಶರು ಹಾಗೂ ಧಾರ್ಮಿಕ ನೇತಾರರು – ಈ ಮೂರೂ ಮಗ್ಗುಲುಗಳಲ್ಲಿ ಗಂಭೀರ ಪ್ರಯತ್ನ ನಡೆಸಬೇಕು. ಅದಕ್ಕೆ ಅವರು ದೇಶದುದ್ದಗಲ ಸಂಚರಿಸಿ ಆ ಪ್ರಯತ್ನಗಳಿಗೆ ವೇಗ ತುಂಬಿದರು.

ಸಾಮರಸ್ಯ ಕುರಿತ ಆರೋಗ್ಯಪೂರ್ಣ ಚರ್ಚೆಗೆ ವೇದಿಕೆಯೊದಗಿಸುತ್ತಿರುವ ದೃಶ್ಯ – ಮುದ್ರಣ ಮಾಧ್ಯಮಗಳು ಈ ನಿಟ್ಟಿನಲ್ಲಿ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ. ಸವಾಲಿನಿಂದ ಪರಿಹಾರದತ್ತ ಮುಖ ಮಾಡುತ್ತಿರುವ ಈ ಸಾಮರಸ್ಯ ಚರ್ಚೆಗಳು ಇಂದು ನಿನ್ನೆಯದಲ್ಲದಿದ್ದರೂ, ಬದಲಾದ-ಬದಲಾಗುತ್ತಿರುವ ಸನ್ನಿವೇಶಗಳಲ್ಲಿ ಪರಿಷ್ಕರಣೆಗೊಳಗಾದಷ್ಟೂ ಉತ್ತಮ.

ನಿನ್ನೆ ಸೆಪ್ಟೆಂಬರ್ 28 ರ ‘ಕನ್ನಡಪ್ರಭ’ ದಲ್ಲಿ ಪ್ರಕಟಗೊಂಡ ಲೇಖನವೊಂದರಲ್ಲಿ ಪ್ರಗತಿಪರ ಹೋರಾಟಗಾರ ಚೇಳೂರು ವೆಂಕಟೇಶ್‌ರು ’ಮಾದಾರಶ್ರೀಗಳ ಯಾತ್ರೆ ಐತಿಹಾಸಿಕ ಹೇಗಾದೀತು?’ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ. ಲೇಖನದುದ್ದಕ್ಕೂ ಅವರು ಪ್ರಸ್ತಾಪಿಸಿರುವ ಅಂಶಗಳನ್ನು ಗಮನಿಸಿದರೆ ಮೇಲ್ನೋಟಕ್ಕೆ ಅವರೊಬ್ಬರು ಸಾಮಾಜಿಕ ಹೋರಾಟಗಾರರು ಎಂಬುದು ಓದುಗರಿಗೆ ಗೊತ್ತಾಗುತ್ತದೆ. ಆದರೆ ಕೇವಲ ನಾಲ್ಕು ಪ್ರಶ್ನೆಗಳನ್ನೆತ್ತಿ ಬಿಸಾಕಿ, ಸಾಮರಸ್ಯ ಮೂಡಿಸುವ ಸಹಪಂಕ್ತಿಭೋಜನ, ಸಾಮರಸ್ಯ ನಡಿಗೆ ಇತ್ಯಾದಿ ಕಿರುಪ್ರಯತ್ನಗಳನ್ನೇ ಒಂದೇ ಏಟಿನಲ್ಲಿ ’ನಿಷ್ಪ್ರಯೋಜಕ’ ಎಂದು ಮೂದಲಿಸುವುದನ್ನು ನೋಡಿದರೆ ಇವರಿಗೆ ಸಮಸ್ಯೆ ’ಪರಿಹಾರ’ವಾಗುವುದು ಬೇಕಿಲ್ಲವೇನೋ ಅನ್ನಿಸುತ್ತೆ.

A Brahmin performing Padapooja for Sri Madara Chennaya Swamiji at Mysore

ಸಮಾಜದಲ್ಲಿ ಸಾಮರಸ್ಯ ಮೂಡಿಸಲು ನಡೆಯುವ ಯಾವ ಆಂದೋಲನವಾಗಲೀ, ಆಂದೋಲನಕಾರರಾಗಲೀ ಕ್ಷಿಪ್ರ ಫಲಿತಾಂಶ ನಿರೀಕ್ಷಿಸುವುದಿಲ್ಲ. ನಾಳೆ ಬೆಳಿಗ್ಗೆಯೊಳಗೆ ಇಡೀ ಸಮಾಜವೇ ಒಂದಾಗುತ್ತದೆ, ಶತಮಾನಗಳಿಂದ ಬಂದ ಅಸ್ಪೃಶ್ಯತೆ, ಜಾತೀಯ ಮೇಲು-ಕೀಳರಿಮೆಗಳೆಲ್ಲವೂ ರಾತ್ರಿ ಬೆಳಗಾಗುವುದರೊಳಗೆ ಇಲ್ಲವಾಗುವುದೆಂಬ ಭ್ರಮೆಯೂ ಅಲ್ಲಿಲ್ಲ. ನೂರಾರು ವರ್ಷಗಳ ಹಿನ್ನೆಲೆಯ ಈ ಸಾಮಾಜಿಕ ರೋಗಗಳ ನಿವಾರಣೆಗೆ ಕನಿಷ್ಠ ಕಾಲಾವಕಾಶ ಬೇಕೇ ಬೇಕು. ಅದೆಷ್ಟು ಎಂಬುದೇ ಎಲ್ಲರ ಪ್ರಶ್ನೆ. ಆದರೂ ಸಾಮರಸ್ಯ ಬೆಸೆಯುವ ಈ ಸಾಂಕೇತಿಕ ಪ್ರಯತ್ನಗಳು ಪ್ರಾಮಾಣಿಕವಾಗಿ ಹೆಚ್ಚು ಊರು-ಮನೆ-ದೇಗುಲಗಳಲ್ಲಿ ನಡೆದಾಗಲೇ ಸಮರಸತೆ ಸಾಧ್ಯ.

ಯಾವುದೇ ಸಾಮಾಜಿಕ ಹೋರಾಟಗಾರರು ಸಾಮರಸ್ಯ ಮೂಡಿಸುವ ಚಟುವಟಿಕೆಗಳನ್ನು ಆಯೋಜಿಸಿ, ಯಶಸ್ವಿ ಮಾಡಬಹುದಾದರೂ ಅದರ ನೇತೃತ್ವವನ್ನು ಯಾರಾದರೊಬ್ಬ ಧಾರ್ಮಿಕ ಮುಖಂಡರೇ ವಹಿಸಬೇಕು. ಯಾಕೆಂದರೆ ಧಾರ್ಮಿಕ ಗುರುಗಳೊಬ್ಬರು ಸಮಾನತೆಯ ಮಾತನ್ನಾಡಿದಾಗ, ಆ ಮೂಲಕ ಧಾರ್ಮಿಕ ಆಚರಣೆಗಳಲ್ಲಿ ಸಾಮಾಜಿಕ ಸಮಾನತೆಯ ಆಶಯವುಳ್ಳ ಬದಲಾವಣೆ ತಂದಾಗ ಈ ಸಮಸ್ಯೆಯು ಸುಲಭವಾಗಿ ಪರಿಹಾರವಾಗುತ್ತದೆ. ಧಾರ್ಮಿಕ ಆಚರಣೆಗಳೇ ಸವರ್ಣೀಯ-ಅಸ್ಪೃಶ್ಯ ಇತ್ಯಾದಿ ಕಂದಕಗಳನ್ನು ಕಾಯ್ದುಕೊಂಡು ಬಂದಿರುವ ಕಾರಣ ಧಾರ್ಮಿಕ ಮುಖಂಡರಿಂದಲೇ ಆ ರೀತಿಯ ಶಾಶ್ವತ ಬದಲಾವಣೆಗಳನ್ನು ಅಪೇಕ್ಷಿಸಬಹುದು. ಆ ಧಾರ್ಮಿಕ ಮುಖಂಡತ್ವವನ್ನು ಪೇಜಾವರ ಶ್ರೀಗಳಾಗಲೀ, ಆದಿಚುಂಚನಗಿರಿ ಶ್ರೀಗಳಾಗಲೀ, ಸಿದ್ಧಗಂಗಾಶ್ರೀಗಳಾಗಲೀ, ಮಾದಾರ ಚೆನ್ನಯ್ಯ ಶ್ರೀಗಳಾಗಲೀ ಅಥವಾ ಯಾರೇ ಧಾರ್ಮಿಕ ನಾಯಕರು ವಹಿಸಿದರೆ ಮಾತ್ರವೇ ಈ ಪ್ರಯತ್ನಗಳಿಗೆ ಸರಿಯಾದ ಅಂತ್ಯ ಕಾಣಬಹುದು.

ದಶಕಗಳಿಂದಲೂ ದಲಿತ ಕಾಲೋನಿಗಳಿಗೆ ಭೇಟಿ ನೀಡಿ, ಅಲ್ಲಿನ ದಲಿತರ ನೋವಿಗೆ ಸ್ಪಂದಿಸುವ ಪೇಜಾವರ ಶ್ರೀಗಳ ಪ್ರಯತ್ನವನ್ನು ಸಾರಾಸಗಟಾಗಿ ’ಮನುಸಂಸ್ಕೃತಿ ಬಿತ್ತುವ’ – ’ಮನುಧರ್ಮದ ಬ್ರಾಹ್ಮಣ್ಯವನ್ನು ಪುನರುತ್ಥಾನ ಮಾಡುವ ಯತ್ನ’ ಎಂದು ಕರೆದಿರುವುದು ಸಮಂಜಸವಲ್ಲ. ಅವರು ಅಷ್ಟಾದರೂ ಮಾಡ್ತಾರಲ್ಲಾ, ಉಳಿದವರೇನು? ಎಂಬ ಪ್ರಶ್ನೆ ಮೂಡಿದ್ದರೆ ಆಶ್ಚರ‍್ಯವಿರಲಿಲ್ಲ. ಸಾಮರಸ್ಯ ಮೂಡಿಸುವ ಭರವಸೆಯ ಕಳಶ ಹೊತ್ತ ಅನೇಕರಲ್ಲಿ ಪೇಜಾವರರೂ ಒಬ್ಬರು. ಅಷ್ಟಮಠಗಳ ಒಳಗಿನ ತೀವ್ರ ವಿರೋಧಗಳ ನಡುವೆಯೂ ಪೇಜಾವರ ಶ್ರೀಗಳು ದಲಿತಕೇರಿಯ ಪಾದಯಾತ್ರೆಯನ್ನು ಮುಂದುವರೆಸಿದ್ದಾರೆ. ತುಳಿತಕ್ಕೊಳಗಾದ ಸಾವಿರಾರು ಮಂದಿಯ ಸಮಾನತೆಯ ಆಶಯದ ಹಣತೆಗೆ ಸಾಂತ್ವನದ ತೈಲ ಸುರಿದಿದ್ದಾರೆ.

Pejawar Seer’s Padayatra for social harmony in a Dalit Colony at Kolar

2010ರ ಸೆಪ್ಟೆಂಬರ್ 15 ರಂದು ಮೈಸೂರಿನ ಕೃಷ್ಣಮೂರ್ತಿಪುರಂ ಬಡಾವಣೆಯಲ್ಲಿ ನಡೆದ ಮಾದಾರ ಶ್ರೀಗಳ ಬ್ರಾಹ್ಮಣ ಬೀದಿಗಳಲ್ಲಿನ ಪಾದಯಾತ್ರೆ ಸಾಮರಸ್ಯ ತರುವ ಪ್ರಯತ್ನಗಳ ಪೈಕಿ ಬಲು ಮಹತ್ವದ್ದು.

ಸಾಮರಸ್ಯದ ಕುರಿತು ಚರ್ಚೆಯನ್ನು ಮಾತ್ರ ಮಾಡಿದರೆ ಸಾಲದು, ಆ ದಿಕ್ಕಿನಲ್ಲಿ ಪರಿಹಾರದ  ಪ್ರಯತ್ನಗಳನ್ನು ಮಾಡಬೇಕು. ಮಾದಾರ ಶ್ರೀಗಳ ಪಾದಯಾತ್ರೆ ಅದೆಂತು ಯಶಸ್ವಿಯಾದೀತು? ಬ್ರಾಹ್ಮಣ ಸಮಾಜದ ಪ್ರಮುಖರು ಮಾದಿಗ ಸಮುದಾಯದ ಸ್ವಾಮೀಜಿಗೆ ಪಾದಪೂಜೆ ಮಾಡುವರೇ? ನಿಜಕ್ಕೂ ಬ್ರಾಹ್ಮಣರಲ್ಲಿ ಈ ರೀತಿಯ ಬದಲಾವಣೆ ಸಾಧ್ಯವೇ? ಎಂಬಿತ್ಯಾದಿ ಪ್ರಶ್ನೆಗಳನ್ನು ಪ್ರಗತಿಪರ ಹೋರಾಟಗಾರರು ಮಾಡಿದ್ದರು. (ಕುತೂಹಲವನ್ನು ಸಾಕ್ಷೀಕರಿಸಲು ಕೆ.ಪಿ.ಸಿದ್ಧಯ್ಯನವರಂತಹ ಹೋರಾಟಗಾರರೂ ಕೃಷ್ಣಮೂರ್ತಿಪುರಂ ಬಡಾವಣೆಗೆ ಆಗಮಿಸಿದ್ದರು). ಅಲ್ಲಿ ಬ್ರಾಹ್ಮಣ ಸಮಾಜದಲ್ಲಾದ ಪರಿವರ್ತನೆಯನ್ನು ಸ್ವಾಗತಿಸಬೇಕು. ಸಾಮರಸ್ಯ ಹೋರಾಟಗಾರರಿಗೆಲ್ಲ ಆ ಪಾದಯಾತ್ರೆ ಐತಿಹಾಸಿಕ ಎಂದೇ ಎನಿಸಿತ್ತು. ಅದನ್ನು ’ಐತಿಹಾಸಿಕ’ ಎಂದು ಘೋಷಿಸಿದ್ದೇ ಮೈಸೂರಿನ ಎಲ್ಲಾ ಮಾಧ್ಯಮಗಳು. ಜಾತಿವ್ಯವಸ್ಥೆ, ಆರೋಪ-ಪ್ರತ್ಯಾರೋಪಗಳಲ್ಲೇ ಕಾಲಕಳೆಯುತ್ತಿದ್ದ ವೇಳೆಯಲ್ಲೇ ಈ ರೀತಿಯ ಪ್ರಯತ್ನವೊಂದರ ಕುರಿತು ರಾಜ್ಯದ ಎಲ್ಲಾ ಪತ್ರಿಕೆಗಳು ಔಟ್‌ಲುಕ್ ಸೇರಿದಂತೆ ರಾಷ್ಟ್ರೀಯ ಪತ್ರಿಕೆಗಳೂ ವರದಿ ಮಾಡಿತ್ತು.

ಇದಾಗಿ ಒಂದು ವರ್ಷಕ್ಕೆ, ಮೊನ್ನೆ ಸೆಪ್ಟೆಂಬರ್ 15ಕ್ಕೆ ಮತ್ತೊಂದು ಕಾರ್ಯಕ್ರಮ. 2010ರಲ್ಲಿ ಸವರ್ಣೀಯ ಸಮಾಜದ ಮಂದಿ ಮಾದಿಗರನ್ನು ತಮ್ಮ ಮನೆಗೆ ಸ್ವಾಗತಿಸಿದಾಗ, ಇದೆಲ್ಲಾ ಆಟಾಟೋಪ, ಈ ಸವರ್ಣೀಯರು ಮಾದಿಗರ ಮನೆಯಲ್ಲಿ ಸಹಪಂಕ್ತಿ ಭೋಜನ ಮಾಡಿಯಾರೇ? ಎಂಬುದೂ ಪ್ರಗತಿಪರರ ಪ್ರಶ್ನೆಯಾಗಿತ್ತು. ಮೈಸೂರಿನ ಗಾಂಧಿನಗರದ ೨೫ಕ್ಕೂ ಹೆಚ್ಚು ಮಾದಿಗ-ದಲಿತರ ಮನೆಗಳ ಅನ್ನದ ಸವಿಯನ್ನುಂಡ ಸವರ್ಣೀಯ ಸಮಾಜದ ಪ್ರಮುಖರು ಸಾಮರಸ್ಯ ಹೋರಾಟಕ್ಕೆ ಮಹತ್ವದ ಮೈಲಿಗಲ್ಲನ್ನೊದಗಿಸಿದರು. ಮಾದಿಗ ಸಮುದಾಯದ ನೂರಾರು ಮಂದಿಯ ಸಂತಸವನ್ನು ಹೇಗೆ ವರ್ಣಿಸಿದರೂ ಕಡಿಮೆಯೇ. ಮೈಸೂರಿನ ಮೇಯರ್ ಪುಷ್ಪಲತಾ, ಕಾಂಗ್ರೆಸ್ ಶಾಸಕ ಅಮರೇಶ್, ಸಚಿವ ರಾಮ್‌ದಾಸ್, ಆರೆಸ್ಸೆಸ್‌ನ ವೆಂಕಟರಾಮ್, ’ಅಹಿಂದ’ದ ಡಾ|| ಪೂರ್ಣಾನಂದ ಸೇರಿದಂತೆ ಅನೇಕರು ಜೊತೆಗೂಡಿದ್ದ ಈ ಸಹಪಂಕ್ತಿಭೋಜನಕ್ಕೆ ನೇತೃತ್ವವೊದಗಿಸಿದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿಗಳು ’ಬಸವ ತತ್ವದ ವಿರುದ್ಧ’ ಎನ್ನುವ ಮಾತು ಖಂಡಿತಾ ಸರಿಯಲ್ಲ.

ನಾಸಿಕ್‌ನ ಕಾಳಾರಾಮ್ ಮಂದಿರದ ಹೋರಾಟ ಇರಬಹುದು, ಮೈಸೂರಿನ ಕೃಷ್ಣಮೂರ್ತಿಪುರಂ ಇರಬಹುದು, ಡಾ|| ಅಂಬೇಡ್ಕರ್ ನೇತೃತ್ವ ಇರಬಹುದು. ಮಾದಾರ ಶ್ರೀಗಳ ನೇತೃತ್ವ ಇರಬಹುದು, ಇಲ್ಲಿರುವ ಆಶಯ ಮಾತ್ರ ಒಂದೇ. ಸವರ್ಣೀಯ ಸಮಾಜದ ಮೇಲರಿಮೆ ಹಾಗೂ ತಥಾಕಥಿತ ಅಸ್ಪೃಶ್ಯರೆನಿಸಿಕೊಂಡವರ ಕೀಳರಿಮೆ – ಇವೆರಡನ್ನೂ ಹೋಗಲಾಡಿಸಿ ಪರಸ್ಪರರ ಅಂತರವನ್ನು ಕಡಿಮೆ ಮಾಡುವುದೇ ಈ ಪ್ರಯತ್ನಗಳ ಉದ್ದೇಶ. ಕರ್ನಾಟಕದಲ್ಲಿ ಈ ತೆರದ ಪ್ರಯತ್ನಗಳು ಬಹುಶಃ ದೊಡ್ಡ ಪ್ರಮಾಣದಲ್ಲಿ ಮೊದಲ ಬಾರಿಗೆ ಆಗುತ್ತಿರುವಾಗ, ಇವುಗಳನ್ನು ತೆರೆದ ಮನಸ್ಸಿನಿಂದಲೇ ಸ್ವಾಗತಿಸಬೇಕು. ಏಕೆಂದರೆ ಸಾಮರಸ್ಯಕ್ಕೆ ಬೇಕಾಗಿರುವುದು ತೆರೆದ ಮನಸ್ಸು ಹಾಗೂ ನಿಷ್ಕಲ್ಮಶ ಹೃದಯ.

‘ಸವರ್ಣೀಯ ಸಮಾಜದ ಮನಸ್ಸಿನ ಕೊಳೆಯೇ ಅಸ್ಪೃಶ್ಯತೆ. ಅದೊಂದು ಮಾನಸಿಕ ವಿಕೃತಿ. ಅಸ್ಪೃಶ್ಯತೆ ಎಂದರೆ ಸವರ್ಣೀಯರ ಈ ಸಂಕುಚಿತ ಮನೋಭಾವವನ್ನು ತೆಗೆದು ಹಾಕುವುದು’ ಎಂದು ಹೇಳಿದ್ದರು ಆರೆಸ್ಸೆಸ್ಸಿನ ಎರಡನೇ ಸರಸಂಘಚಾಲಕರಾಗಿದ್ದ ಗುರೂಜಿ ಗೋಳ್ವಲ್ಕರ್.  ಅಸ್ಪೃಶ್ಯತೆಯ ಆಚರಣೆಯನ್ನು ಬೇರು ಸಹಿತ ಕಿತ್ತೆಸೆಯಬೇಕೆಂಬುದು ಅವರ ಹಂಬಲ. ಗುರೂಜಿ ಗೋಳ್ವಲ್ಕರ್‌ರ ಪ್ರಕಾರ ಅಸ್ಪೃಶ್ಯತೆಯನ್ನು ಆಚರಿಸುತ್ತಿರುವ ಸವರ್ಣೀಯ ಸಮಾಜ, ಅಸ್ಪೃಶ್ಯತೆಗೊಳಗಾಗಿ ಕೀಳರಿಮೆಯಲ್ಲಿ ನರಳುತ್ತಿರುವವರು, ಈ ಆಚರಣೆಗಳಿಗೆ ಧಾರ್ಮಿಕ ಮಾನ್ಯತೆ ಕೊಟ್ಟಿರುವ ಮಠಾಧೀಶರು ಹಾಗೂ ಧಾರ್ಮಿಕ ನೇತಾರರು – ಈ ಮೂರೂ ಮಗ್ಗುಲುಗಳಲ್ಲಿ ಗಂಭೀರ ಪ್ರಯತ್ನ ನಡೆಸಬೇಕು. ಅದಕ್ಕೆ ಅವರು ದೇಶದುದ್ದಗಲ ಸಂಚರಿಸಿ ಆ ಪ್ರಯತ್ನಗಳಿಗೆ ವೇಗ ತುಂಬಿದರು. 1966 – ಪ್ರಯಾಗದಲ್ಲಿ, 1969 ರಲ್ಲಿ ಉಡುಪಿಯಲ್ಲಿ ನಡೆದ ಸರ್ವ ಮಠಾಧಿಪತಿಗಳ ಸಮ್ಮೇಳನದಲ್ಲಿ ’ಅಸ್ಪೃಶ್ಯತೆಯ ಆಚರಣೆಗಳಿಗೆ ಧರ್ಮದ ಸಮ್ಮತಿ ಇಲ್ಲ’ ಎಂಬ ಖಚಿತ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಉಡುಪಿ ಸಮ್ಮೇಳನದ ಅಧ್ಯಕ್ಷತೆಯನ್ನು ಅಸ್ಪೃಶ್ಯರೆನಿಸಿದ್ದ ಸಮಾಜದಲ್ಲಿ ಹುಟ್ಟಿದ, ಅಂದಿನ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಐಎಎಸ್ ಅಧಿಕಾರಿ ಶ್ರೀ ಭರಣಯ್ಯನವರು ವಹಿಸಿದ್ದರು. ಗುರೂಜಿ ಗೋಳ್ವಲ್ಕರ್ ಹಾಗೂ ಪೇಜಾವರ ಶ್ರೀಗಳ ನೇತೃತ್ವದ ಈ ಐತಿಹಾಸಿಕ ಕಾರ‍್ಯಕ್ರಮ ಸಾಮರಸ್ಯದ ಹೋರಾಟಕ್ಕೆ ಹೊಸ ಬಾಗಿಲನ್ನೇ ತೆರೆಯಿತು. ಚರ್ಚೆಯೊಂದರಲ್ಲಿ ಮಾತನಾಡುತ್ತಾ ’ಜಗದ್ಗುರುಗಳಾದ ನಿಮ್ಮ ಜಗತ್ತಿನಲ್ಲಿ ಅಸ್ಪೃಶ್ಯರು, ವಂಚಿತರು, ವನವಾಸಿಗಳು ಇದ್ದಾರೇನು? ಅವರ‍್ಯಾರೂ ಇಲ್ಲದ ಪುಟ್ಟ ಜಗತ್ತಿಗೇಕೆ ಜಗದ್ಗುರುಗಳಾಗುತ್ತೀರಿ? ಸಮಾಜದ ಎಲ್ಲರನ್ನು ತೆರೆದ ಬಾಹುಗಳಲ್ಲಿ ಅಪ್ಪಿಕೊಂಡು ನೈಜ ಜಗದ್ಗುರುಗಳಾಗಿರಿ’ ಎಂಬ ಖಚಿತ ಅಭಿಪ್ರಾಯ ಹೇಳಿದ್ದರು ಗೋಳ್ವಲ್ಕರ್.

ಮಾದಾರ ಶ್ರೀಗಳು ಮಾಡಿದ – ಮಾಡುತ್ತಿರುವ ಪ್ರಯತ್ನಗಳಿಗೆ ಅಪಸ್ವರ ಎತ್ತಿರುವುದು ವಿಪರ‍್ಯಾಸವೇ ಸರಿ. ಹಿಂದೆಂದಿಗಿಂತಲೂ ಪರಿಸ್ಥಿತಿ ತಿಳಿಯಾಗುವ ಈ ಆಶಾಸ್ಪದ ಸನ್ನಿವೇಶದಲ್ಲೂ ಪ್ರಗತಿಪರ ಎನಿಸಿಕೊಂಡವರು ತಮ್ಮ ಚಿಂತನೆ-ವಾದಗಳನ್ನು ಕಾಲದ ಪ್ರಗತಿಯೊಂದಿಗೆ ತಾಳೆಹಾಕಬೇಕಾಗಿದೆ. ಅಪ್‌ಡೇಡ್ ಆಗದ ಹಳೇ ವಾದಗಳನ್ನೇ ಹೇಳಿದರೆ ಅಸ್ಪೃಶ್ಯತೆ ನಿವಾರಣೆ, ಸಾಮಾಜಿಕ ಸಮಾನತೆ ಎಂತು ಸಾಧ್ಯ? ಕೇವಲ ಮಾತು, ಲೇಖನ ಘೋಷಣೆ, ವಿರೋಧ ಮಾಡುವುದಷ್ಟೇ ನಮ್ಮ ಕೆಲಸ ಎಂದು ಭಾವಿಸಿರುವ ಮಂದಿಯೆಲ್ಲಾ ಮತ್ತೊಮ್ಮೆ ಪ್ರಾಮಾಣಿಕ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಧುನಿಕ ಯುವಜನತೆಯ ಅಂತರಾಳದಲ್ಲಿ ಕುಡಿಯೊಡೆಯುತ್ತಿರುವ ಸಹಜ ಸ್ನೇಹ-ಬಾಂಧವ್ಯಗಳನ್ನು ಸಂಶಯದಿಂದ ನೋಡುವುದು ಬೇಡ. ಸಹಪಂಕ್ತಿ ಭೋಜನವೇ ಇರಲಿ, ಸಾಮರಸ್ಯ ಯಾತ್ರೆಯೇ ಇರಲಿ, ಪೇಜಾವರ – ಮಾದಾರ ಶ್ರೀಗಳೇ ಇರಲಿ, ಇಲ್ಲಿ ವ್ಯಕ್ತಿ-ಕಾರ‍್ಯಕ್ರಮಗಳು ಕೇವಲ ಸಾಂಕೇತಿಕ, ಆಶಯಕ್ಕೆ ಮಾತ್ರ ಮನ್ನಣೆ.

-ರಾಜೇಶ್ ಪದ್ಮಾರ್, ಬೆಂಗಳೂರು ಉಪನ್ಯಾಸಕ

(This article appeared in Kannnada Prabha Sept 29-2011)

Leave a comment

Filed under Articles

ಕೇರಳದಲ್ಲಿ ಕಮ್ಯುನಿಸ್ಟರ ರಕ್ತಕ್ರೌರ್ಯ: ಬುದ್ಧಿಜೀವಿಗಳ ಮಹಾಮೌನ !

October 15, 2016

ಲೇಖನ: ರಾಜೇಶ್ ಪದ್ಮಾರ್

ರಾಜಕೀಯ ಹಿಂಸಾಚಾರಕ್ಕೆ ಯಥೇಚ್ಛ ಉದಾಹರಣೆಗಳನ್ನು ನೀಡಿರುವ ರಾಜ್ಯವೆಂದರೆ ನೆರೆಯ ಕೇರಳ. ದೇವರ ಸ್ವಂತ ನಾಡು (God’s Own Country) ಎಂಬ ಹೆಗ್ಗಳಿಕೆಯಿದ್ದರೂ ಅತಿಕ್ಷುಲ್ಲಕ ವಿಚಾರಗಳಿಗೂ ನೆತ್ತರು ಹರಿಸುವಷ್ಟು ಸಲೀಸಾಗಿ ರಾಜಕೀಯ ಹಿಂಸಾಚಾರಕ್ಕೆ ಹೆಸರುವಾಸಿಯಾಗಿರುವುದು ಕೇರಳ ಜನತೆಯ ವಿಪರ್ಯಾಸ. ಕಳೆದ 50 ವರ್ಷಗಳಲ್ಲಿ  300ಕ್ಕೂ ಹೆಚ್ಚು ಯುವಕರು ಈ ರಾಜಕೀಯ ಹಿಂಸಾಚಾರಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಕ್ಕೂ ಅಧಿಕಮಂದಿ ಬೆರಳು-ಕೈ-ಕಾಲು ಕಳೆದುಕೊಂಡು ಜೀವನಪರ್ಯಂತ ಯಾತನೆ ಅನುಭವಿಸುತ್ತಿದ್ದಾರೆ. ಅಪಾರಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ. ಮನೆ-ಮಠ ಕಳೆದುಕೊಂಡವರ ಪಾಡು ಹೇಳತೀರದು.

ಮೊನ್ನೆ ಅಕ್ಟೋಬರ್ 12ರಂದು ಕಣ್ಣೂರು ಜಿಲ್ಲೆಯ ಪಿಣರಾಯಿ ಎಂಬಲ್ಲಿ ಆರೆಸ್ಸೆಸ್ ಸ್ವಯಂಸೇವಕ ರಮಿತ್ ಎಂಬ ಯುವಕನನ್ನು ಕಮ್ಯುನಿಸ್ಟ್ ಕಾರ್ಯಕರ್ತರು ಹಾಡುಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಹಾಕಿದರು. ಕೇರಳ ಮುಖ್ಯಮಂತ್ರಿಯ ಸ್ವಗ್ರಾಮದಲ್ಲಿ ನಡೆದ ಈ ಭೀಕರ ಹತ್ಯೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಯಿತು. ಇದಕ್ಕೂ ಮುನ್ನ 2002 ರ ಮೇ 22ರಂದು ರಮಿತ್ ನ ತಂದೆ ಹಾಗೂ ಆರೆಸ್ಸೆಸ್ ಸ್ವಯಂಸೇವಕರಾಗಿದ್ದ ಉತ್ತಮನ್ ರನ್ನು ಕೊಲೆಗೈಯಲಾಗಿತ್ತು. ಇತ್ತೀಚಿಗೆ ಮೇ ತಿಂಗಳಲ್ಲಿ ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷ ಅಧಿಕಾರಕ್ಕೆ ಬಂದ ಸಂಭ್ರಮದಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತರು ರಮಿತ್ ನ ಮನೆಗೆ ದಾಳಿ ನಡೆಸಿದ್ದರು. ಮನೆಯ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಕಿ ಖುಷಿ ಆಚರಿಸಿದ್ದರು. ತಡೆಯಲು ಬಂದ ತಾಯಿ ನಾರಾಯಣಿ ಮೇಲೆ ಹಲ್ಲೆ ನಡೆಸಿದ್ದರ ಪರಿಣಾಮವಾಗಿ ಆಕೆ ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಇದೀಗ ರಮಿತ್ ನ ತಾಯಿ ನಾರಾಯಣಿ ಗಂಡನನ್ನೂ, ಮಗನನ್ನೂ ಕಮ್ಯುನಿಸ್ಟ್ ಹಿಂಸಾಚಾರಕ್ಕೆ ಕಳೆದುಕೊಂಡಿದ್ದಾರೆ.

ಇಷ್ಟಕ್ಕೂ, ಈ ಎಲ್ಲ ಹಿಂಸಾಚಾರದ ಕೃತ್ಯಗಳಲ್ಲಿ ಹತ್ಯೆಗೊಳಗಾದದ್ದು, ಹಲ್ಲೆಗೊಳಗಾಗುತ್ತಿರುವವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು. ಕೊಲೆ ಹಿಂಸೆ ಮಾಡಿದವರಲ್ಲಿ ಬಹುಪಾಲು ಕಮ್ಯೂನಿಸ್ಟ್ ಅಥವಾ ಮಾರ್ಕಿಸ್ಟರದ್ದೇ. ಕೆಲವು ಇಸ್ಲಾಮಿಕ್ ಸಂಘಟನೆಗಳು, ಮಿಷ’ನರಿ’ಗಳೂ ಕೆಲವು ಬಾರಿ ಹಿಂಸೆಗಿಳಿದ ಉದಾಹರಣೆಗಳೂ ಇವೆ. ಒಟ್ಟಿನಲ್ಲಿ 230ಕ್ಕೂ ಅಧಿಕ ಮಂದಿ ಆರೆಸ್ಸೆಸ್ ಸ್ವಯಂಸೇವಕರು ಹತ್ಯೆಯಾಗಿದ್ದಾರೆ ಎನ್ನುತ್ತದೆ ಒಂದು ಲೆಕ್ಕಾಚಾರ! ರಾಷ್ಟ್ರೀಯವಾದಿ ಸಾಮಾಜಿಕ ಕಾರ್ಯಕರ್ತರ ಹತ್ಯೆಗೆ ವಿರೋಧಿಗಳೆಲ್ಲ ಒಟ್ಟಾದ ಉದಾಹರಣೆಗಳು ಹೇರಳವಾಗಿವೆ. ಇಷ್ಟೊಂದು  ಅಗಾಧ ಪ್ರಮಾಣದ ರಾಜಕೀಯಹತ್ಯೆಗಳು ಭಾರತದ ಯಾವ ರಾಜ್ಯದಲ್ಲೂ ವರದಿಯಾಗಿಲ್ಲ. ಕೇರಳದಲ್ಲಿನ ಈ ಕಮ್ಯೂನಿಸ್ಟ್ ರಕ್ತಪಾತದ ಕತ್ತಲೆಯ ಪುಟಗಳು ಇದೀಗ ರಾಷ್ಟ್ರಮಟ್ಟದಲ್ಲಿ ಅನಾವರಣಗೊಳ್ಳುತ್ತಿದೆ. ಮುಖವಾಡ ಬಯಲಾಗುತ್ತಿದೆ.

ಕಳಚಿದ ಮುಖವಾಡ
1920ರ ದಶಕದಲ್ಲಿ ಭಾರತಕ್ಕೆ ಕಾಲಿಟ್ಟ ಕಮ್ಯೂನಿಸ್ಟ್ ವಿಚಾರಧಾರೆ ಕೇರಳಿಗರನ್ನು ಅತಿಯಾಗಿ ಆಕರ್ಷಿಸಿತು. ದಶಕಗಳ ಹಿಂದೆಯೇ ಕೇರಳವನ್ನು ಚೆನ್ನಾಗಿ ಅರಿತಿದ್ದ ಸ್ವಾಮಿ ವಿವೇಕಾನಂದರು ಆ ರಾಜ್ಯವನ್ನು ಹುಚ್ಚಾಸ್ಪತ್ರೆ (Lunatic Asylum) ಎಂದಿದ್ದರು. ಅದು ಅಲ್ಲಿನ ಮತಿಭ್ರಾಂತ ಸಾಮಾಜಿಕ ವ್ಯವಸ್ಥೆಯನ್ನು ಮನಗಂಡು ನೇರವಾಗಿ ಹೇಳಿದ ಮಾತಾಗಿತ್ತು. ಕಮ್ಯೂನಿಸ್ಟ್ ವಿಚಾರಧಾರೆಯನ್ನು ಅಪ್ಪಿಕೊಳ್ಳುವ ಭರದಲ್ಲಿ ಈ ನೆಲದ ಮೂಲಗುಣವಾದ ಸಹನೆ-ತಾಳ್ಮೆ-ಕ್ಷಮೆ-ದಯೆ-ಕರುಣೆ ಇವು ಯಾವುದಕ್ಕೂ ಕ್ಯಾರೇ ಅನ್ನಲಿಲ್ಲ. ‘ಕ್ರಾಂತಿ’ ಮಾಡುತ್ತೇವೆ ಎಂಬ ಭ್ರಾಂತಿಯಲ್ಲಿ, ಸಮಾಜ ಪರಿವರ್ತನೆಯೆಂಬ ನೆಪವೊಡ್ಡಿ ಕೇರಳದ ಸಾಮಾಜಿಕ ಜನಜೀವನವನ್ನೇ ಬುಡಮೇಲುಗೊಳಿಸಿದ್ದು ಕಮ್ಯೂನಿಸ್ಟ್ ವಿಚಾರವಾದ. ಶೋಷಿತರಿಗೆ ನೆರವು ನೀಡುವ ಸುಳ್ಳು ಘೋಷಣೆಗಳು, ಸಮಾನತೆ ಸಾಧಿಸುತ್ತೇವೆ ಎಂಬ ಪೊಳ್ಳು ಮಾತುಗಳು, ಮಾನವತೆಯನ್ನು ಎತ್ತಿ ಹಿಡಿಯುವ ಮಾರ್ಗ ಎಂಬ ಡೋಂಗಿ ತನವೇ ಕಮ್ಯೂನಿಸ್ಟ್ ನಾಯಕರ ವರಸೆಯಾಗಿತ್ತು. ಜಾತೀಯತೆಯ ವ್ಯಸನದಿಂದ ಕಂಗೆಟ್ಟಿದ್ದ ಕೇರಳರ ಜನತೆ ಸ್ವಾತಂತ್ರ್ಯಾನಂತರ ಕಮ್ಯೂನಿಸ್ಟ್ ಆಡಳಿತವನ್ನೇ ಆಯ್ಕೆ ಮಾಡಿದರು.

1957ರಲ್ಲಿ ಇ.ಎಂ.ಎಸ್. ನಂಬೂದರಿಪಾಡ್ ನೇತೃತ್ವದಲ್ಲಿ ವಿಶ್ವದ ಮೊತ್ತಮೊದಲ ಚುನಾಯಿತ ಕಮ್ಯೂನಿಸ್ಟ್ ಸರ್ಕಾರ ಕೇರಳದಲ್ಲಿ ಅಸ್ತಿತ್ವಕ್ಕೆ ಬಂತು! ಇವತ್ತು ಕೇರಳವನ್ನು ಕಮ್ಯೂನಿಸ್ಟ್ ಸರ್ಕಾರ ಆಳುತ್ತಿದೆ. ಪ್ರಸ್ತುತ ವರ್ಷಗಳಲ್ಲಿ ಕೇರಳದ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಹೇಳಿಕೊಳ್ಳುವ ಶೈಕ್ಷಣಿಕ-ವೈದ್ಯಕೀಯ-ಕ್ರೀಡಾ- ಉದ್ದಿಮೆಗಳಾಗಲೀ ಯಾವುದೂ ಇಲ್ಲ. ‘ಪ್ರಗತಿ’ ತರುವವರು ಅಭಿವೃದ್ಧಿಗೇ ಮಾರಕವಾದರು. ‘ಹಸಿದ ಹೊಟ್ಟೆಗೆ ಅನ್ನ ಬೇಕು, ಕಂಪ್ಯೂಟರ್ ಬೇಡ’ ಎಂದು ವಿರೋಧಿಸಿದ ಕಮ್ಯುನಿಸ್ಟ್ ನಾಯಕರ ಮಕ್ಕಳು ಇಂದು ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ! ಪೊಳ್ಳುತನದ ಪರಾಕಾಷ್ಠೆ  !

1925ರಲ್ಲಿ ಪ್ರಾರಂಭಗೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳೂ ಕೇರಳ ತಲುಪಿದ್ದು; ಕಮ್ಯೂನಿಸ್ಟ್ ವಿಚಾರಧಾರೆ ತಲಪಿದ ವೇಳೆಯಲ್ಲೇ. ಅದರೆ ಸದ್ದಿಲ್ಲದೆ, ಸಾರ್ವಜನಿಕವಾಗಿ ಮೌನಿಯಾಗಿಯೇ ಸಂಘದ ಚಟುವಟಿಕೆಗಳು ಕೇರಳದುದ್ದಕ್ಕೂ ವ್ಯಾಪಿಸಿತು. ಸಾವಿರಾರು ಯುವಕರು ಸಂಘ ಪ್ರತಿಪಾದಿಸುತ್ತಿದ್ದ ರಾಷ್ಟ್ರೀಯ ವಿಚಾರಗಳತ್ತ ಆಕರ್ಷಿತರಾದರು. ನಿಸ್ವಾರ್ಥ ಸಮಾಜಸೇವೆಗೆ ಮುಂದಾದರು. ಪರಿಣಾಮವಾಗಿ ಇಡೀ ಭಾರತದಲ್ಲೇ ಅತಿ ಹೆಚ್ಚು ಆರೆಸ್ಸೆಸ್ ಶಾಖೆ-ಚಟುವಟಿಕೆಗಳುಳ್ಳ ರಾಜ್ಯ ಎಂಬ ಮನ್ನಣೆಗೂ ಕೇರಳ ಪಾತ್ರವಾಯಿತು. ಆರೆಸ್ಸೆಸ್ ವಿಚಾರಧಾರೆ ಅಥವಾ ರಾಷ್ಟ್ರೀಯ ವಿಚಾರದ ದೃಷ್ಟಿಕೋನಗಳು ಕೇರಳದ ಶಿಕ್ಷಣ-ಸಾಮಾಜಿಕ- ಸಾಹಿತ್ಯ ಹಾಗೂ ಸಿನಿಮಾರಂಗದ ಮೇಲೂ ಪ್ರಭಾವ ಬೀರಿತು.

ಅಷ್ಟೇ ಅಲ್ಲ, ಅದಾಗಲೇ ಯುವಜನತೆಯನ್ನು ಆಕರ್ಷಿಸುವಲ್ಲಿ ಕಮ್ಯೂನಿಸ್ಟ್ ವಿಚಾರಧಾರೆ ವಿಫಲವಾಗುತ್ತಾ ಸಾಗಿತು. ಯೌವನದಲ್ಲಿ ಕಮ್ಯೂನಿಸ್ಟ್ ಕಾರ್ಯಕರ್ತರಾಗಿದ್ದ ಅನೇಕರು ಮದುವೆಯಾಗಿ ಮಕ್ಕಳಾದ ಮೇಲೆ, ಮಕ್ಕಳನ್ನು ಆರೆಸ್ಸೆಸ್ ಶಾಖೆಗಳಿಗೆ ಕಳುಹಿಸಿದ ಉದಾಹರಣೆಗಳೂ ನೂರಾರು.

ಕಮ್ಯೂನಿಸ್ಟ್ ಪಕ್ಷದ ರಾಷ್ಟ್ರವಿರೋಧಿ ನೀತಿಗಳಿಂದ ಬೇಸತ್ತು ಕಮ್ಯೂನಿಸ್ಟ್ ಪಕ್ಷ ತೊರೆಯುವವರ ಸಂಖ್ಯೆ ಜಾಸ್ತಿಯಾಗುತ್ತಾ ಸಾಗಿತು. ಕೆಲವರು ಕಮ್ಯೂನಿಸ್ಟ್ ಪಕ್ಷದಿಂದ ಹೊರಬಂದು ಸುಮ್ಮನಿದ್ದರೆ, ಇನ್ನೂ ಅನೇಕರು ಆರೆಸ್ಸೆಸ್‌ನಲ್ಲಿ ಸಕ್ರಿಯರಾದರು. 1960ರ ದಶಕದಲ್ಲಿ ಕೇರಳದ ಅನೇಕ ಜಿಲ್ಲೆಗಳಲ್ಲಿ ಈ ರೀತಿ ಪ್ರವಾಹದ ಅಲೆ (craze) ಎದ್ದು ಕಾಣುತ್ತಿತ್ತು. ಈ ಬೆಳವಣಿಗೆ ಕಮ್ಯೂನಿಸ್ಟ್ ನಾಯಕರಿಗೆ ಮೈನಡುಕ ಹುಟ್ಟಿಸಿತು. ಕಮ್ಯೂನಿಸ್ಟ್ ನೇತಾಗಣ ಚಿಂತಿತವಾಯಿತು.

ರಕ್ತದೋಕುಳಿಗೆ ಮುನ್ನುಡಿ:

ತಮ್ಮ ಜೊತೆಯಿದ್ದ ಯುವಕರು ರಾಷ್ಟ್ರೀಯ ವಿಚಾರಧಾರೆಯತ್ತ ಒಲವು ತೋರಿಸಿ, ವಲಸೆ ಹೋಗುವುದನ್ನು ತಡೆಯಲು ಅವರು ಬಳಸಿದ್ದು ರಕ್ತಕ್ರೌರ್ಯದ ಮಾರ್ಗವನ್ನು. 1965ರ ಮಾರ್ಚ್ 18ರಂದು ಕೇರಳದ ಈ ರಕ್ತದೋಕುಳಿಗೆ ಮುನ್ನುಡಿ ಬರೆಯಲಾಯಿತು. ಮಲಪ್ಪುರಂ ಜಿಲ್ಲೆಯ ತಾಣೂರ್ ಎಂಬಲ್ಲಿ ಸುಬ್ರಮಣಿಯಮ್ ಎಂಬ 18 ವರ್ಷದ ತರುಣನ ಹತ್ಯೆಯೊಂದಿಗೆ ಕೇರಳದ ರಾಜಕೀಯ ಹಿಂಸಾಚಾರ ಪ್ರಾರಂಭವಾಯಿತು. ಮೊನ್ನೆ ಸೆಪ್ಟೆಂಬರ್ 3, 2016ರಂದು ಕಣ್ಣ್ಣೂರಿನ ಇರಿಟ್ಟಿ ಬಳಿಯ ಬಿನೀಶ್ ಎಂಬ ಯುವಕನ ಹತ್ಯೆಯ ತನಕ, ಈವರೆಗೆ ಇನ್ನೂರಕ್ಕೂ ಹೆಚ್ಚು ಆರೆಸ್ಸೆಸ್ ಸ್ವಯಂಸೇವಕರು ರಕ್ತಪಾತಕ್ಕೆ ಬಲಿಯಾಗಿದ್ದಾರೆ. ಹಿಂಸಾಚಾರ ನಡೆದಾಗಲೆಲ್ಲ ಅದನ್ನು ಖಂಡಿಸದೆ ಅದನ್ನು ‘ಅತ್ಯಂತ ಶ್ರೇಷ್ಠತಮ ಕಾರ್ಯ’ ಎಂಬಂತೆ ಬಿಂಬಿಸುವುದೂ ಕಮ್ಯೂನಿಸ್ಟರ ತಂತ್ರ. ಅನೇಕ ಕಮ್ಯೂನಿಸ್ಟ್ ನಾಯಕರು ಸಾರ್ವಜನಿಕವಾಗಿಯೇ ಕಮ್ಯೂನಿಸ್ಟ್ ಹಿಂಸಾಚಾರವನ್ನು ಒಪ್ಪಿಕೊಂಡಿದ್ದಾರೆ. ಅನೇಕ ಕೋರ್ಟ್ ಕೇಸುಗಳಲ್ಲಿ ನಾಯಕರುಗಳ ಅಪರಾಧಗಳು ಸಾಬೀತಾಗಿವೆ. ನೂರಾರು ಕಮ್ಯೂನಿಸ್ಟ್ ಕಾರ್ಯಕರ್ತರು ತಾವು ಮಾಡಿದ ಕೊಲೆ ಹಲ್ಲೆ ಕೃತ್ಯಗಳಿಗಾಗಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದೆಲ್ಲವೂ ಸಾರ್ವಜನಿಕವಾಗಿ ತಿಳಿದಿರುವ ವಿಚಾರ. ಇದರಲ್ಲಿ ಯಾವ ಗುಟ್ಟೂ ಅಡಗಿಲ್ಲ. ಕೇರಳದ ಜನತೆಗೆ ಕಮ್ಯೂನಿಸ್ಟ್ ಹಿಂಸಾಚಾರ ಹೊಸತೇನೂ ಅಲ್ಲ ಎಂಬಂತಾಗಿದೆ. ಆದರೂ ಕಮ್ಯೂನಿಸ್ಟ್ ನಾಯಕರು ಈ ಕುರಿತು ಎಳ್ಳಷ್ಟೂ ಚಿಂತಿತರಾಗಿಲ್ಲ. ‘ಹಿಂಸೆ’ _ ಒಂದು ಸ್ವಾಭಾವಿಕ ಪ್ರಕ್ರಿಯೆ, ಎಂಬಂತೆ ಅವರ ಕಾರ್ಯವೈಖರಿ ಇದೆ. ಆದರೆ ಬಾಯಲ್ಲಿ ಮಾತ್ರ ಮಾನವತೆಯ ಮಾತು!

ವಿಶಾಲ್ ಕುಮಾರ್:  ಎಬಿವಿಪಿಯ ಯುವ ಮುಂದಾಳು ವಿಶಾಲ್ ಕುಮಾರ್ ಎಂಬ ಯುವಕನನ್ನು 2012 ಜುಲೈ 17ರಂದು ಭೀಕರವಾಗಿ ಹತ್ಯೆ ಮಾಡಲಾಯಿತು. ಬಿ.ಎಸ್ಸಿ. ಇಲೆಕ್ಟ್ರಾನಿಕ್ಸ್ ವಿದ್ಯಾರ್ಥಿಯಾಗಿದ್ದ ಈ ಪ್ರತಿಭಾವಂತ ಯುವಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಚೆಂಗನ್ನೂರು ತಾಲೂಕು ಅಧ್ಯಕ್ಷ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಗರ ಶಾರೀರಿಕ ಪ್ರಮುಖನಾಗಿ ಜವಾಬ್ದಾರಿ ಹೊಂದಿದ್ದ. ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮದಂದು ಕಾಲೇಜಿನ ಪ್ರವೇಶ ದ್ವಾರದಲ್ಲಿ ಸರಸ್ವತಿಯ ಚಿತ್ರದೊಂದಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಎಂಬ ಕಾರಣಕ್ಕೆ ಆತನ ಹತ್ಯೆ ಮಾಡಲಾಯಿತು.

ಕೆ.ಟಿ. ಜಯಕೃಷ್ಣನ್ ಮಾಸ್ತರ್ : ಕೇರಳದ ಇತಿಹಾಸದಲ್ಲೇ ಅತಿ ಭಯಾನಕ ಹತ್ಯೆ ಎಂದರೆ ಕೆ.ಟಿ. ಜಯಕೃಷ್ಣನ್ ಮಾಸ್ತರ್ ಅವರದ್ದು. 1999ರ ಡಿಸೆಂಬರ್ 1 ರಂದು ಕಣ್ಣೂರಿನ ಪನೂರ್ ಬಳಿಯ ಕೂತುಪರಂಬು ಎಂಬಲ್ಲಿನ ಮೊಕೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಅವರು, ಎಂದಿನಂತೆ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾಗಲೇ, ವಿದ್ಯಾರ್ಥಿಗಳ ಎದುರೇ ದಾರುಣವಾಗಿ ಹತ್ಯೆಗೀಡಾದವರು. ಆರೆಸ್ಸೆಸ್ ಸ್ವಯಂಸೇವಕರಾಗಿದ್ದ ಕೆ.ಟಿ.ಜಯಕೃಷ್ಣನ್  ಮಾಸ್ತರ್ ಭಾರತೀಯ ಜನತಾ ಯುವ ಮೋರ್ಚಾದ ಕೇರಳ ರಾಜ್ಯ ಉಪಾಧ್ಯಕ್ಷರಾಗಿ ಜವಾಬ್ದಾರಿ ಹೊಂದಿದ್ದರು.

ಎಳಂತೋಟತ್ತಿಲ್ ಮನೋಜ್ : ಎಳಂತೋಟತ್ತಿಲ್ ಮನೋಜ್ ಎಂಬ ಯುವನಾಯಕ ಕಣ್ಣೂರಿನ ಆರೆಸ್ಸೆಸ್ ಹುಡುಗರ ಅಚ್ಚುಮೆಚ್ಚಿನ ಯುವಕ. ಕಮ್ಯೂನಿಸ್ಟರ ನೆಲೆಬೀಡಾದ ಕಣ್ಣೂರಿನಲ್ಲಿ ಅನೇಕ ಕಮ್ಯೂನಿಸ್ಟ್ ಯುವಕರು ಆರೆಸ್ಸೆಸ್ಸಿನತ್ತ ಮುಖ ಮಾಡಿದ ಸಂದರ್ಭ. ಇದಕ್ಕೆ ಕಾರಣ ಮನೋಜ್‌ರ ಅಪ್ರತಿಮ ಸ್ನೇಹಶೀಲ ವ್ಯಕ್ತಿತ್ವ. ಆದರೆ ಕಮ್ಯೂನಿಸ್ಟರ ರಕ್ತಕ್ರೌರ್ಯಕ್ಕೆ ಬಲಿಯಾದ ಮನೋಜ್ 2014ರ ಸೆಪ್ಟೆಂಬರ್ 1 ರಂದು ಕಣ್ಣೂರಿನ ಕದಿರೂರು ಎಂಬಲ್ಲಿ ಹಾಡುಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಯಿತು.

ಸದಾನಂದನ್ ಮಾಸ್ತರ್ ರ ಹೋರಾಟಗಾಥೆ: ಸದಾನಂದನ್ ಮಾಸ್ತರ್ ಎಂಬವರ ಹೋರಾಟಗಾಥೆ ನಿಜಕ್ಕೂ ಮೈನವಿರೇಳಿಸುವಂತದ್ದು. ಒಂದೊಮ್ಮೆ ಕಣ್ಣೂರಿನ ಕಮ್ಯೂನಿಸ್ಟ್ ಪಾರ್ಟಿಯಲ್ಲಿ ಸಕ್ರಿಯರಾಗಿದ್ದ ಸದಾನಂದನ್ ಮಾಸ್ತರ್‌ರಿಗೆ ಕ್ರಮೇಣ ಕಮ್ಯೂನಿಸ್ಟ್ ವಿಚಾರದ ಭಂಡತನದ ಅರಿವಾಯಿತು. ಆರೆಸ್ಸೆಸ್ಸಿನತ್ತ ಮುಖ ಮಾಡಿದ ಸದಾನಂದನ್ ಮಾಸ್ತರ್ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾದರು. ಆರೆಸ್ಸೆಸ್‌ನ ಕಣ್ಣೂರು ಜಿಲ್ಲಾ ಸಹ ಕಾರ‍್ಯವಾಹ ಜವಾಬ್ದಾರಿ ವಹಿಸಿದರು. ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಗಳೊಂದಿಗೆ ಸಾವಿರಾರು ಯುವಕರಿಗೆ ಪ್ರೇರಣೆಯಾಗಿದ್ದರು. ಇದನ್ನು ಸಹಿಸದ ಕಮ್ಯೂನಿಸ್ಟ್ ನಾಯಕರು ಸದಾನಂದನ್ ಮಾಸ್ತರ್‌ರ ಹತ್ಯೆಗೆ ಸಂಚು ರೂಪಿಸಿದರು. ಭೀಕರ ಆಕ್ರಮಣದಲ್ಲಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡರು. ಎರಡೂ ಕಾಲುಗಳು ಕತ್ತರಿಸಲ್ಪಟ್ಟಿದ್ದರೂ, ಈಗ 60ರ ಹರೆಯದ ಸದಾನಂದನ್ ಮಾಸ್ತರ್ ಕಮ್ಯೂನಿಸ್ಟರ ವಿರುದ್ಧ ಹೋರಾಡುತ್ತಿದ್ದಾರೆ.

ಈ ರೀತಿಯ ಘಟನೆಗಳು 300ಕ್ಕೂ ಹೆಚ್ಚು. ವಿವರ ಹೇಳುತ್ತಾ ಸಾಗಿದರೆ ಕಣ್ಣೀರು ಬತ್ತಿ ಹೋಗಿ ರಕ್ತವೇ ಬಂದೀತು. ಆದರೂ ಸಂಘದ ಸ್ವಯಂಸೇವಕರ ಶ್ರದ್ಧೆ ಕುಂದಿಲ್ಲ. ತೋಳ್ಬಲ ಕುಸಿದಿಲ್ಲ. ಕಮ್ಯುನಿಸ್ಟ್ ಹಿಂಸಾಚಾರಕ್ಕೆ ಶಾಂತವಾಗಿಯೇ ಇದ್ದಾರೆ. ಹಿಂಸೆಗೆ ಪ್ರತಿಹಿಂಸೆಯ ದಾರಿ ಹಿಡಿಯದೇ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾ ‘receiving end’ ನಲ್ಲಿ ಇದ್ದಾರೆ.

ಕಮ್ಯೂನಿಸ್ಟ್ ಹತ್ಯಾಕಾಂಡದ ಕುರಿತು ದಿವ್ಯಮೌನ:

ಕಮ್ಯೂನಿಸ್ಟ್ ವಿಚಾರಧಾರೆಯನ್ನು ಬೆಂಬಲಿಸುವ ಅನೇಕ ಎಡಪಂಥೀಯ ವಿಚಾರವಾದಿಗಳು, ಬುದ್ಧಿಜೀವಿಗಳು ಕೇರಳದಲ್ಲಿ ನಡೆಯುತ್ತಿರುವ ಈ ಘೋರ ಹತ್ಯಾಕಾಂಡದ ಕುರಿತು ದಿವ್ಯಮೌನ ವಹಿಸುತ್ತಾರೆ. ಗಿರೀಶ್ ಕಾರ್ನಾಡ್, ಅಗ್ನಿ ಶ್ರೀಧರ್, ಜಿ.ಟಿ. ಗೋವಿಂದರಾವ್ ಸೇರಿದಂತೆ ಕರ್ನಾಟಕ ಅನೇಕ ಎಡಪಂಥೀಯ ವಿಚಾರಧಾರೆಯ ಐಕಾನ್‌ಗಳು ’ಜಾಣಕುರುಡು’ ನಟಿಸುತ್ತಿದ್ದಾರೆ. ಮಾತೆತ್ತಿದರೆ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು ಮಾತನಾಡುವ, ಈ ಬುದ್ಧಿಜೀವಿಗಳು ನಮ್ಮ ಪಕ್ಕದ ಕೇರಳದಲ್ಲಿನ ಕಮ್ಯೂನಿಸ್ಟ್ ರಕ್ತಪಾತದ ಕೃತ್ಯಗಳ ಕುರಿತು ಎಳ್ಳಷ್ಟೂ ಮಾತನಾಡಲಾರರು. ಹಿಂಸೆಯನ್ನು ನಿಲ್ಲಿಸುವುದಕ್ಕಾಗಿ ಜಲ್ಲಿಕಟ್ಟು ಇತ್ಯಾದಿ ರೈತರ ಪಾರಂಪರಿಕ ಆಚರಣೆಗಳನ್ನು ನಿಷೇಧಿಸಿ ಎಂದು ಬೊಬ್ಬೆಹಾಕುವ ಈ ಬುದ್ಧಿಜೀವಿಗಳು ಕೇರಳದ ಅಮಾಯಕ ರಾಷ್ಟ್ರೀಯವಾದಿ ಕಾರ್ಯಕರ್ತರ ಭೀಕರ ಹತ್ಯಾಕಾಂಡದ ಕುರಿತು ಬಾಯಿ ತೆರೆಯುವುದೇ ಇಲ್ಲ. ’ಕ್ರೌರ್ಯವೇ ನಮ್ಮ ದಾರಿ’ ಎಂದು ಒಪ್ಪಲೂ ಸಿದ್ಧರಿಲ್ಲ; ಕ್ರೌರ್ಯವನ್ನು ನಿಲ್ಲಿಸಿ ಎಂದು ತಮ್ಮ ಕಾರ‍್ಯಕರ್ತರಿಗೆ ಹೇಳಲೂ ತಯಾರಿಲ್ಲ. ಕ್ರೌರ್ಯವನ್ನು ಖಂಡಿಸಲೂ ಮನಸ್ಸು ಒಪ್ಪದು; ಆದರೂ ಸದಾ ’ಮಾನವತೆ’ಯ ಮಹಾಸಂದೇಶದ ಮಂತ್ರ ಬಾಯಲ್ಲಿ! ಇದು ಕಮ್ಯೂನಿಸ್ಟ್ ಎಡಬಿಡಂಗಿತನಕ್ಕೆ ಉದಾಹರಣೆ.

ಇತ್ತೀಚೆಗೆ ಸೆಪ್ಟೆಂಬರ್ 25 ರಂದು ಕೇರಳದ ಕಲ್ಲಿಕೋಟೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಪ್ರಧಾನಿ ನರೇಂದ್ರಮೋದಿಯವರು ಈ ಕಮ್ಯೂನಿಸ್ಟ್ ಕ್ರೌರ್ಯಕ್ಕೆ ಬಲಿಯಾದ ಬಲಿದಾನಿಗಳ ಚಿತ್ರ ಸಹಿತ ವಿವರಗಳುಳ್ಳ ‘ಆಹುತಿ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿದ್ದಾರೆ. ಕಮ್ಯೂನಿಸ್ಟ್ ಪಕ್ಷ ನಡೆಸಿರುವ ಹಿಂಸಾಚಟುವಟಿಕೆಗಳ ಕುರಿತು ಸತ್ಯವನ್ನು ಹೊರತಂದು ಕಮ್ಯೂನಿಸ್ಟ್‌ರ ಅಸಲಿ ಮುಖವಾಡವನ್ನು ಸಮಾಜಕ್ಕೆ ತೋರಿಸಬೇಕಾಗಿದೆ.

 

Leave a comment

Filed under Articles