ಬಾಂಗ್ಲಾದೇಶೀಯರ ಅಕ್ರಮ ವಲಸೆಗಾರಿಕೆ ಮತ್ತು ದೇಶದ ಭದ್ರತೆಗೆ ಮಾರಕವಾಗುತ್ತಿರುವ ಚೀನಾದ ತಂತ್ರಗಾರಿಕೆ

ಆರೆಸ್ಸೆಸ್‌ನ ನೀತಿ-ನಿರ್ಣಯಗಳನ್ನು ರೂಪಿಸುವ ಮಹತ್ವದ ಸಭೆಯಾದ ಅಖಿಲ ಭಾರತ ಕಾರ‍್ಯಕಾರಿಣಿ ಮಂಡಳಿಯ ರಾಷ್ಟ್ರೀಯ ಸಮಾವೇಶವು ನವೆಂಬರ್ 2, 3ಮತ್ತು 4 ರಂದು ಚೆನ್ನೈನಲ್ಲಿ ಜರಗಿತು. ಆರೆಸ್ಸೆಸ್‌ನ ರಾಷ್ಟ್ರೀಯ ಹಾಗೂ ಪ್ರತಿರಾಜ್ಯಗಳ ಮುಖಂಡರು ಮತ್ತು ವಿಶ್ವಹಿಂದೂ ಪರಿಷತ್, ವನವಾಸಿ ಕಲ್ಯಾಣ, ಭಾರತೀಯ ಕಿಸಾನ್ ಸಂಘ ಸೇರಿದಂತೆ ಅನೇಕ ಸಂಘಪರಿವಾರ ಸಂಘಟನೆಗಳ ರಾಷ್ಟ್ರೀಯ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿದ್ದರು. ದೇಶದಲ್ಲಿನ ಪ್ರಸ್ತುತ ಸಮಸ್ಯೆಗಳು, ಸಾಮಾಜಿಕ ಆಗು-ಹೋಗುಗಳ ಕುರಿತು ಗಂಭೀರ ಚರ್ಚೆ ನಡೆಯಿತು. ಬಾಂಗ್ಲಾದೇಶೀಯರ ಅಕ್ರಮ ವಲಸೆಗಾರಿಕೆ ಮತ್ತು ದೇಶದ ಭದ್ರತೆಗೆ ಮಾರಕವಾಗುತ್ತಿರುವ ಚೀನಾದ ತಂತ್ರಗಾರಿಕೆ ಕುರಿತು ಎರಡು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಅದರ ಸಾರಾಂಶವನ್ನು ಇಲ್ಲಿ ನೀಡಲಾಗಿದೆ.

ನಿರ್ಣಯ : ೧ ಅಸ್ಸಾಂನ ಹಿಂಸೆ ಮತ್ತು ದೇಶಾದ್ಯಂತ ಬಾಂಗ್ಲಾದೇಶಿ ನುಸುಳುಕೋರರ ಸವಾಲು

ಅಸ್ಸಾಂನ ಕೋಕ್ರಜಾರ್, ಚಿರಾಂಗ್ ಮತ್ತು ಧುಬ್ರಿ ಜಿಲ್ಲೆಗಳಲ್ಲಿ ಕಳೆದ ಜುಲೈನಲ್ಲಿ ಬಾಂಗ್ಲಾದೇಶಿ ಮುಸ್ಲಿಂ ಅಕ್ರಮ ಪ್ರವೇಶಿಗರು ನಡೆಸಿದ ಹಿಂಸಾಚಾರಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ (ಎಬಿಕೆಎಂ) ತೀವ್ರವಾಗಿ ಖಂಡಿಸಿದೆ.

ಚೆನ್ನೈಯಲ್ಲಿ ನವೆಂಬರ್ 2-4ರಂದು ಜರಗಿದ ಬೈಠಕ್‌ನಲ್ಲಿ ಈ ಸಂಬಂಧ ನಿರ್ಣಯವನ್ನು ಕೈಗೊಳ್ಳಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ ನಡೆಸಲಾದ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ದೇಶದ ಅನ್ಯಾನ್ಯ ಪ್ರದೇಶಗಳಲ್ಲಿ ನೆಲೆನಿಂತಿರುವ ಈಶಾನ್ಯ ಭಾರತದ ಜನರಲ್ಲಿ ಭಯ ಮೂಡಿಸಿ ಹುಟ್ಟೂರಿಗೆ ಧಾವಿಸುವಂತೆ ಮಾಡಿದ ಪಿತೂರಿಯನ್ನು ಕೂಡ ಬಲವಾಗಿ ಖಂಡಿಸಿದ ಕಾರ್ಯಕಾರಿ ಮಂಡಳಿಯು ಇವೆಲ್ಲ ಕೃತ್ಯಗಳು ದೇಶಕ್ಕೆ ಗಂಭೀರವಾದ ಸವಾಲನ್ನೊಡ್ಡಿವೆ. ಅಸ್ಸಾಂ ಮತ್ತು ಸಮೀಪದ ಪ್ರದೇಶಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಪ್ರದೇಶವು ತೀವ್ರ ಬಿಕ್ಕಟ್ಟನ್ನು ಸೃಷ್ಟಿಸಿದೆ ಎಂದು ಹೇಳಿದೆ.

ಬೋಡೋಲ್ಯಾಂಡ್ ಬುಡಕಟ್ಟು ಪ್ರದೇಶ (ಬಿಟಿಎಡಿ)ದ ನಾಲ್ಕು ಜಿಲ್ಲೆಗಳಲ್ಲಿ ನುಸುಳುಕೋರರು ದೊಡ್ಡ ಸಂಖ್ಯೆಯಲ್ಲಿ ನೆಲೆಸಿದ್ದಾರೆ; 2003 ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಮಾಡಿಕೊಂಡ ಒಪ್ಪಂದದ ಮೇರೆಗೆ ಬಿಟಿಎಡಿಯನ್ನು ರಚಿಸಲಾಗಿತ್ತು. ಈ ಅಕ್ರಮ ಪ್ರವೇಶಿಗರಿಗಾಗಿ ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ, ನೈಸರ್ಗಿಕ, ಆರ್ಥಿಕ, ಮತೀಯ ಮತ್ತು ರಾಜಕೀಯ ಕ್ಷೇತ್ರಗಳ ಮೇಲೆ ದೂರಗಾಮಿಯಾದ ಹಲವು ದುಷ್ಪರಿಣಾಮಗಳಾಗಿವೆ. ಕಳೆದ ಮೇ 29 ರಂದು ಮುಸ್ಲಿಮರು ಬೋಡೋಲ್ಯಾಂಡ್ ಬುಡಕಟ್ಟು ಪ್ರಾದೇಶಿಕ ಮಂಡಳಿ (ಬಿಟಿಸಿ)ಯಲ್ಲಿ ತಮಗೆ ಮೀಸಲಾಗಿ ಕೊಡಬೇಕೆಂದು ಆಗ್ರಹಿಸಿ ಬಂದ್‌ಗೆ ಕರೆ ನೀಡಿದ್ದರು. ಮುಸ್ಲಿಮರಿಗೆ ಮೀಸಲಾತಿ ನೀಡುವುದಾಗಿ ದೇಶದ ಕೆಲವು ರಾಜಕೀಯ ಪಕ್ಷಗಳು ನೀಡಿದ ಅಸಾಂವಿಧಾನಿಕ ಭರವಸೆಯಿಂದಾಗಿ ಅಲ್ಲಿ ಬಿಗಿಯಾದ ವಾತಾವರಣ ಉಂಟಾಯಿತು. ಜುಲೈ 20 ರಂದು ಮುಸ್ಲಿಮರು ನಾಲ್ವರು ಬೋಡೋ ಯುವಕರನ್ನು ಭೀಕರವಾಗಿ ಕೊಲೆಗೈದ ಕಾರಣ ಪರಿಸ್ಥಿತಿ ಕೈಮೀರಿ ಹೋಯಿತು. ಬಳಿಕ ಸಂಭವಿಸಿದ ಹಿಂಸಾಚಾರದಲ್ಲಿ ಸರ್ಕಾರಿ ದಾಖಲೆಗಳ ಪ್ರಕಾರವೇ 90  ಮಂದಿಯ ಹತ್ಯೆ ನಡೆಯಿತು ಮತ್ತು ಸುಮಾರು 4 ಲಕ್ಷ ಜನ ಸಂತ್ರಸ್ತರಾಗಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದರು. ಈ ಪರಿಹಾರ ಶಿಬಿರಗಳಲ್ಲಿ ಬಹಳಷ್ಟು ಜನ ನುಸುಳುಕೋರರು ಸೇರಿಕೊಂಡಿದ್ದು, ಅವರನ್ನು ಗುರುತಿಸಿ ಗಡೀಪಾರು ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ, ಅಸ್ಸಾಂನ ಹಲವು ಸಂಘಟನೆಗಳು ಅಕ್ರಮ ಪ್ರವೇಶಿಗರ ಪುನರ್ವಸತಿ ಮಾಡಬಾರದೆಂದು ಸಂಯುಕ್ತ ಹೇಳಿಕೆ ನೀಡಿರುವುದು ಶ್ಲಾಘನೀಯವಾಗಿದೆ.

India-Bangladesh-border, so delicate and porous

ರಾಜಕೀಯ ಪಕ್ಷಗಳು ತಮ್ಮದೇ ಲಾಭಕ್ಕಾಗಿ ನೀಡಿದ ಕಾನೂನುಬಾಹಿರ ಬೆಂಬಲ ಮತ್ತು ನೆರವುಗಳಿಂದಾಗಿ ಮತ್ತು ಮುಸ್ಲಿಂ ನುಸುಳುಕೋರರ ಬಗ್ಗೆ ಸ್ಥಳೀಯ ಜನ ಹೊಂದಿರುವ ಕೋಮು ಆಧಾರಿತ ಸಹಾನುಭೂತಿಯಿಂದಾಗಿ ಅವರು ಸ್ಥಳೀಯವಾಗಿ ತಮ್ಮ ರಾಜಕೀಯ ಬಲವನ್ನು ಬೆಳೆಸಿಕೊಳ್ಳುತ್ತಿದ್ದಾರೆ; ಭೂಮಿ, ಕಾಡು, ಉದ್ಯೋಗಾವಕಾಶ ಹಾಗೂ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಆದ್ದರಿಂದ ಅಕ್ರಮ ಪ್ರವೇಶಿಗರಿಗೆ ಬೆಂಬಲ-ನೆರವು ನೀಡುತ್ತಿರುವ ಶಕ್ತಿಗಳ ವಿರುದ್ಧ ಬಿಗಿಯಾದ ಕ್ರಮ ಕೈಗೊಳ್ಳಬೇಕು.

ಬಾಂಗ್ಲಾದೇಶಿ ಅಕ್ರಮ ಪ್ರವೇಶಿಗರ ವಿಷಯ, ಮುಖ್ಯವಾಗಿ, ಅಸ್ಸಾಂ ಘಟನೆಗಳನ್ನು ಮುಸ್ಲಿಮರ ವಿಷಯವೆಂದು ಚಿತ್ರಿಸುವುದನ್ನು ಎಬಿಕೆಎಂ ಆಕ್ಷೇಪಿಸುತ್ತದೆ. ಕೆಲವು ನಾಯಕರು ಸಂಸತ್ತಿನ ಒಳಗೆ ಹಾಗೂ ಹೊರಗೆ ಉದ್ರೇಕಕಾರಿ ಹೇಳಿಕೆಗಳನ್ನು ನೀಡುವುದು, ಕೇವಲ ಮುಸ್ಲಿಂ ಸಮುದಾಯಕ್ಕೆ ಸೇರಿದ ಸಂಸದರು ಹಿಂಸಾಪೀಡಿತ ಪ್ರದೇಶದ ಕೆಲವು ಆಯ್ದ ಶಿಬಿರಗಳಿಗೆ ಭೇಟಿ ನೀಡುವುದನ್ನು ವಿವೇಕಿಗಳಾದ ಎಲ್ಲ ಜನರೂ ಖಂಡಿಸಬೇಕು; ಏಕೆಂದರೆ ಅಂತಹ ಹೇಳಿಕೆಗಳಿಂದಾಗಿ ಮೂಲವಾಸಿಗಳು ಮತ್ತು ವಿದೇಶೀಯರ ನಡುವಣ ಈ ಸಮಸ್ಯೆ ಕೋಮುವಾದಿ ಬಣ್ಣವನ್ನು ಪಡೆದುಕೊಳ್ಳುತ್ತದೆ.

ಮುಸ್ಲಿಂ ಮೂಲಭೂತವಾದಿಗಳು ಮುಂಬಯಿ, ಪ್ರಯಾಗ, ಲಕ್ನೋ, ಕಾನ್ಪುರ, ಬರೇಲಿ, ಅಹಮದಾನಾದ್, ಜೋಧ್‌ರ ಮುಂತಾದ ಕಡೆಗಳಲ್ಲಿ ಅಸ್ಸಾಂ ಘಟನೆಗಳ ವಿರುದ್ಧ ನಡೆಸಿದ ಪೂರ್ವಯೋಜಿತ ಆಕ್ರಮಣಕಾರಿ ಮತ್ತು ಹಿಂಸಾತ್ಮಕ ಪ್ರತಿಭಟನೆಗಳು ದೇಶದ ಜನತೆಯನ್ನು ಚಿಂತೆಗೀಡು ಮಾಡಿವೆ. ಮುಂಬಯಿಯ ಹಿಂಸಾತ್ಮಕ ಪ್ರತಿಭಟನೆಗಳ ವೇಳೆ ನಾಗರಿಕರು ಮತ್ತು ಮಾಧ್ಯಮದವರ ಮೇಲೆ ದಾಳಿ ನಡೆಸಲಾಯಿತು; ಪೊಲೀಸರ ಕೈಯಲ್ಲಿದ್ದ ಶಾಸ್ತ್ರಾಸ್ತ್ರಗಳನ್ನು ಕಿತ್ತುಕೊಳ್ಳಲಾಯಿತು; ರಾಷ್ಟ್ರೀಯ ಗೌರವದ ಪ್ರತೀಕಗಳಾದ ಸ್ಮಾರಕಗಳನ್ನು ಅಪವಿತ್ರಗೊಳಿಸಲಾಯಿತು ಹಾಗೂ ನಾಶಪಡಿಸಲಾಯಿತು; ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಲಾಯಿತು. ಇಂತಹ ಘಟನೆಗಳನ್ನು ಆಡಳಿತ ಮುಂದಾಗಿ ಊಹಿಸದಿರುವುದು ಮತ್ತು ಅಂತಹ ಅಪರಾಧಿಗಳನ್ನು ಗುರುತಿಸಿ ಶಿಕ್ಷಿಸದಿರುವುದು ಇನ್ನಷ್ಟು ಗಂಭೀರ ಅಂಶವಾಗಿದ್ದು, ಎಬಿಕೆಎಂ ಆ ಘಟನೆಗಳನ್ನು ಬಲವಾಗಿ ಖಂಡಿಸುತ್ತದೆ.

ಅದೇ ವೇಳೆ ರಾಷ್ಟ್ರ ವಿರೋಧಿ ಶಕ್ತಿಗಳು, ವೈಯಕ್ತಿಕವಾಗಿ ಮತ್ತು ಸಂಪರ್ಕ ಮಾಧ್ಯಮಗಳ ಮೂಲಕ ದೇಶದ ವಿವಿಧ ಭಾಗದಲ್ಲಿರುವ ಈಶಾನ್ಯ ಭಾರತದ ಜನರಿಗೆ ರಮ್ಜಾನ್ ಬಳಿಕ ಸೇಡು ತೀರಿಸಿಕೊಳ್ಳಲಾಗುವುದೆಂದು ಬೆದರಿಕೆ ಒಡ್ಡಿದವು. ಅದರಿಂದಾಗಿ ಬೆಂಗಳೂರು, ಪುಣೆ, ಹೈದರಾಬಾದ್ ಮತ್ತು ಚೆನ್ನೈಗಳಿಂದ ಜನ ದೊಡ್ಡ ಪ್ರಮಾಣದಲ್ಲಿ ಈಶಾನ್ಯ ಭಾರತದ ತಮ್ಮ ಹುಟ್ಟೂರಿಗೆ ಧಾವಿಸಿದರು. ಅಂತಹ ಬಿಕ್ಕಟ್ಟಿನ ಸಮಯದಲ್ಲಿ ದೇಶಪ್ರೇಮಿಗಳಾದ ಸಾವಿರಾರು ಜನ ರಾಷ್ಟ್ರೀಯ ಏಕತೆ ಮತ್ತು ಹೊಣೆಗಾರಿಕೆಯನ್ನು ಪ್ರದರ್ಶಿಸಿ, ಭಯಗ್ರಸ್ತರಾದ ಜನರಿಗೆ ಭದ್ರತೆ ಹಾಗೂ ಎಲ್ಲ ಬಗೆಯ ನೆರವು ನೀಡಿ, ಊರಿಗೆ ಮರಳುವುದು ಬೇಡವೆಂದು ಒತ್ತಾಸೆಯಾಗಿ ನಿಂತರು. ಅದರಿಂದಾಗಿ ಭಯದ ವಾತಾವರಣ ಇತರ ಪ್ರದೇಶಗಳಿಗೆ ಹಬ್ಬಲಿಲ್ಲ ಮತ್ತು ಈಶಾನ್ಯ ಭಾರತದ ಜನರಲ್ಲಿ ಆತ್ಮವಿಶ್ವಾಸ ಮೂಡಿತು. ಆ ಎಲ್ಲ ನಾಗರಿಕರನ್ನು ಹೃದಯಪೂರ್ವಕವಾಗಿ ಅಭಿನಂದಿಸುವ ಎಬಿಕೆಎಂ, ಇಡೀ ದೇಶ ತಮ್ಮ ಹಿಂದಿದೆ ಎಂದು ಈಶಾನ್ಯ ಭಾರತದ ಜನತೆಗೆ ಭರವಸೆ ನೀಡುತ್ತದೆ. ಭಯ ಹಬ್ಬಿಸುವ ಅಂತಹ ರಾಷ್ಟ್ರವಿರೋಧಿಗಳನ್ನು ಗುರುತಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಎಬಿಕೆಎಂ ಆಗ್ರಹಿಸುತ್ತದೆ.

ಅಕ್ರಮ ಪ್ರವೇಶಿಗರಿಗೆ ಪರವಾದ ಟ್ರಿಬ್ಯುನಲ್‌ನಿಂದ ಅಕ್ರಮ ವಲಸಿಗರ ನಿರ್ಧಾರ (ಐಎಂಡಿಟಿ) ಕಾಯ್ದೆ – ೧೯೮೩ಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್ ತೀರ್ಪು ಮತ್ತು ನುಸುಳುಕೋರರನ್ನು ಗಡೀಪಾರು ಮಾಡಬೇಕೆಂದು ದೆಹಲಿ ಹಾಗೂ ಗುವಾಹಟಿಗಳ ಹೈಕೋರ್ಟ್‌ಗಳ ಆದೇಶ ಇದ್ದಾಗಲೂ ಮತ್ತು ಹಿರಿಯ ಹಾಗೂ ಜವಾಬ್ದಾರಿಯುತ ಉನ್ನತ ಅಧಿಕಾರಿಗಳು ಸಮಸ್ಯೆಯ ಗಂಭೀರತೆಯ ಬಗ್ಗೆ ಹಲವು ಸಲ ಎಚ್ಚರಿಸಿದ್ದರೂ ಕೂಡ ಓಟ್‌ಬ್ಯಾಂಕ್ ರಾಜಕೀಯದಿಂದ ಪ್ರೇರಿತವಾದ ಕೇಂದ್ರ-ರಾಜ್ಯ ಸರ್ಕಾರಗಳು ಅಕ್ರಮ ಪ್ರವೇಶಿಗರನ್ನು ಪ್ರೋತ್ಸಾಹಿಸುತ್ತಲೇ ಇವೆ; ಬಿಗಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಅಕ್ರಮ ಪ್ರವೇಶಿಗರು ಬಂದೆಡೆ ದೇಶದ ಜನಸಂಖ್ಯಾ ಸಮತೋಲನವನ್ನು ಕೆಡಿಸಿದರೆ ಇನ್ನೊಂದೆಡೆ ವಿವಿಧ ಆಕ್ಷೇಪಾರ್ಹ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಷಾಮೀಲಾಗುವ ಮೂಲಕ ದೇಶದ ಭದ್ರತೆಗೆ ಅಪಾಯವೊಡ್ಡುತ್ತಿದ್ದಾರೆ. ಖೋಟಾನೋಟು ಚಲಾವಣೆ, ಶಸ್ತ್ರಾಸ್ತ್ರ ಹಾಗೂ ಮಾದಕ ವಸ್ತುಗಳ ಅಕ್ರಮ ವ್ಯವಹಾರ, ಹಸುಗಳ ಕಳ್ಳಸಾಗಾಟದಂತಹ ಹತ್ತಾರು ಅಪರಾಧ ಕೃತ್ಯಗಳಲ್ಲಿ ತೊಡಗಿರುವ ನುಸುಳುಕೋರರು ಪಾಕಿಸ್ಥಾನದ ಐಎಸ್‌ಐನ ಸಾಧನವಾಗಿ ವರ್ತಿಸುತ್ತಿದ್ದಾರೆ.

ವಿದೇಶೀಯರ ಕಾಯ್ದೆ ೧೯೪೬ ಮತ್ತು ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳ ತೀರ್ಪುಗಳ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಕ್ರಮ ಪ್ರವೇಶಿಗರನ್ನು ಕಟ್ಟುನಿಟ್ಟಾಗಿ ಪತ್ತೆಹಚ್ಚಬೇಕು; ಅವರಿಗೆ ನಾಗರಿಕ ಸವಲತ್ತುಗಳನ್ನು ನಿರಾಕರಿಸಬೇಕು ಮತ್ತು ಎಲ್ಲ ಬಾಂಗ್ಲಾದೇಶಿ ನುಸುಳುಕೋರರನ್ನು ಗಡೀಪಾರು ಮಾಡಬೇಕು. ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಅವರ ಎಲ್ಲ ಹೆಸರುಗಳನ್ನು ತಕ್ಷಣ ವಜಾಗೊಳಿಸಬೇಕು. ಈಚೆಗೆ ಅಸ್ಸಾಂನಲ್ಲಿ ನಿರ್ವಸಿತರಾದ ಜನರ ಪುನರ್ವಸತಿ ಮಾಡುವಾಗ ನುಸುಳುಕೋರರಿಗೆ ಅಲ್ಲಿ ಪುನರ್ವಸತಿ ಸೌಲಭ್ಯ ಸಿಗದಂತೆ ಎಚ್ಚರ ವಹಸಿಬೇಕು; ಯಾವನೇ ಒಬ್ಬ ಅಕ್ರಮ ಪ್ರವೇಶಿಗನಿಗೆ ಆಧಾರ್‌ಕಾರ್ಡ್ ಸಿಗಬಾರದು. ಬಾಂಗ್ಲಾದೇಶ ಗಡಿಯಲ್ಲಿ ಇನ್ನಾದರೂ ತಡಮಾಡದೆ ಬೇಲಿನಿರ್ಮಾಣವನ್ನು ಪೂರ್ಣಗೊಳಿಸಬೇಕು ಎಂದು ಎಬಿಕೆಎಂ ಆಗ್ರಹಿಸುತ್ತದೆ; ನಾಗರಿಕ ರಾಷ್ಟ್ರೀಯ ಪಟ್ಟಿ (ಓಚಿಣioಟಿಚಿಟ ಖegisಣeಡಿ oಜಿ ಛಿiಣizeಟಿs) ಯನ್ನು ವ್ಯವಸ್ಥಿತವಾಗಿ ಸಿದ್ಧಪಡಿಸಬೇಕು.

ದೇಶಪ್ರೇಮಿಗಳಾದ ನಾಗರಿಕರು ಈ ವಿಷಯವನ್ನೊಂದು ರಾಷ್ಟ್ರೀಯ ಸಮಸ್ಯೆ ಎಂದು ಪರಿಗಣಿಸಬೇಕು, ನುಸುಳುಕೋರರನ್ನು ಪತ್ತೆಮಾಡಿ ಮತದಾರರ ಪಟ್ಟಿಗಳಿಂದ ಅವರನ್ನು ಹೊರಹಾಕುವಲ್ಲಿ ಸಕ್ರಿಯ ಪಾತ್ರ ವಹಿಸಬೇಕು. ಅದಲ್ಲದೆ ಅಕ್ರಮ ಪ್ರವೇಶಿಗರನ್ನು ಯಾವುದೇ ಕೆಲಸಕ್ಕೆ ಸೇರಿಸಿಕೊಳ್ಳುವುದು ಕಾನೂನು ಬಾಹಿರವಷ್ಟೇ ಅಲ್ಲ; ದೇಶಕ್ಕೆ ಗಂಭೀರ ಅಪಾಯ ಕೂಡ ಎಂಬುದನ್ನು ನೆನಪಿಡಬೇಕು ಎಂದು ಎಬಿಕೆಎಂ ಮನವಿ ಮಾಡಿದೆ.

ನಿರ್ಣಯ – 2: ಚೀನಾದ ವಿರುದ್ಧ ಸಮಗ್ರ ರಾಷ್ಟ್ರೀಯ ಭದ್ರತಾ ನೀತಿ ಅಗತ್ಯ

1962ರ ಚೀನಾ-ಭಾರತ ಯುದ್ಧ ನಡೆದು ೫೦ ವರ್ಷಗಳಾಗುತ್ತಿರುವ ಈ ಹೊತ್ತಿನಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ(ಎಬಿಕೆಎಂ)ಯು ಆ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಸಾವಿರಾರು ಮಂದಿ ಧೀರ ಸೈನಿಕರಿಗೆ ತನ್ನ ಗೌರವವನ್ನು ಅರ್ಪಿಸುತ್ತದೆ ಎಂದು ಚೆನ್ನೈನಲ್ಲಿ ನವೆಂಬರ್ 2-4ರಂದು ಜರಗಿದ ಎಬಿಕೆಎಂನಲ್ಲಿ ಕೈಗೊಂಡ ನಿರ್ಣಯದಲ್ಲಿ ತಿಳಿಸಲಾಗಿದೆ.

ಲಡಾಖ್ ಮತ್ತು ಅರುಣಾಚಲ ಪ್ರದೇಶಗಳ ಹಿಮಾಲಯದ ಹಿಮಾಚ್ಛಾದಿತ ರಣರಂಗದಲ್ಲಿ ಆ ಧೀರ ಸೈನಿಕರ ಶವಗಳ ಜತೆಯಲ್ಲೇ ಸ್ಫೂರ್ತಿದಾಯಕವಾದ ಅವರ ಪರಾಕ್ರಮದ ಅಪಾರ ಕಥೆಗಳು ಕೂಡ ಮುಚ್ಚಿಹೋಗಿವೆ. ೫೦ ವರ್ಷಗಳು ದಾಟಿದ್ದರೂ ಈಗಲೂ ಅಲ್ಲಿನ ಹಿಮದ ಕೆಳಗೆ ಕೆಲವು ಶವಗಳು ಕಂಡುಬರುತ್ತಿವೆ.

ಆ ಯುದ್ಧದ ವೇಳೆ ನಮ್ಮ ಸೈನಿಕರು ಬಳಿ ಸರಿಯಾದ ಶಸ್ತ್ರಾಸ್ತ್ರಗಳಿರಲಿಲ್ಲ; ಚೀನೀಯರಿಗೆ ಹೋಲಿಸಿದರೆ ನಮ್ಮ ಸಂಖ್ಯೆಯೂ ತುಂಬ ಕಡಿಮೆ ಇತ್ತು. ಅತ್ಯಂತ ದುರುದೃಷ್ಟಕರ ವಿಷಯವೆಂದರೆ, ದೇಶದ ರಾಜಕೀಯ ನಾಯಕತ್ವವು ತನ್ನ ವೈಫಲ್ಯಗಳನ್ನು ಮುಚ್ಚಿಡಲು ಕ್ಷುಲ್ಲಕ ರೀತಿಯಲ್ಲಿ ಯತ್ನಿಸಿತು; ಮತ್ತು ಧೀರ ಸೈನಿಕರ ಧೈರ್ಯ, ತ್ಯಾಗಗಳನ್ನು ಮುಚ್ಚಿಡುವ ಕಸರತ್ತು ಮಾಡಿತು. ಆ ಸೈನಿಕರ ತ್ಯಾಗ, ಪರಾಕ್ರಮಗಳನ್ನು ಮತ್ತೆ ಗೌರವಪೂರ್ಣವಾಗಿ ನೆನಪಿಸಿಕೊಳ್ಳಬೇಕೆಂದು ಎಬಿಕೆಎಂ ಮನವಿ ಮಾಡುತ್ತದೆ.

ದೇಶದ ಅಖಂಡತೆಯ ಬಗೆಗಿನ ತನ್ನ ಅಪೂರ್ವ ಮತ್ತು ದೃಢವಾದ ಬದ್ಧತೆಯನ್ನು ಎಬಿಕೆಎಂ ಪುನರುಚ್ಚರಿಸುತ್ತದೆ. ೧೯೬೨ರ ಯುದ್ಧದ ಫಲಿತಾಂಶದ ನೆನಪು ದೇಶಕ್ಕೊಂದು ನೋವು ತರುವ ವಿಷಯವಾಗಿದೆ. ಯುದ್ಧದಲ್ಲಿ ನಾವು ನಮ್ಮ ೩೮ ಸಾವಿರ ಚದರ ಕಿ.ಮೀ. ಪ್ರದೇಶವನ್ನು ಚೀನೀ ಆಕ್ರಮಣಕಾರರಿಗೆ ಬಿಟ್ಟುಕೊಟ್ಟೆವು. ಅಕ್ಸಾಯ್‌ಚಿನ್ ಪ್ರದೇಶ ಈಗ ಕೂಡ ಚೀನಾದ ನಿಯಂತ್ರಣದಲ್ಲಿದೆ. ಶತ್ರುವಿನ ವಶವಾದ ಇಂಚಿಂಚು ಸ್ಥಳವನ್ನು ಮರಳಿ ಪಡೆಯುವುದಾಗಿ ನಮ್ಮ ಸಂಸತ್ತು ನವೆಂಬರ್ ೧೪, ೧೯೬೨ರಂದು ಅವಿರೋಧವಾದ ಒಂದು ನಿರ್ಣಯವನ್ನು ಅಂಗೀಕರಿಸಿತು. ಆದರೆ ಆ ದಿಕ್ಕಿನಲ್ಲಿ ಸಾಗುವ ಬದಲು ಗಡಿ ಮಾತುಕತೆಯ ಹೆಸರಿನಲ್ಲಿ ನಡೆಯುವ ಉಪಕ್ರಮಗಳು ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯನ್ನು ಗಟ್ಟಿಗೊಳಿಸುವ ಕೆಲಸವನ್ನೇ ಮಾಡುತ್ತಿವೆ ಎಂಬುದನ್ನೂ ಎಬಿಕೆಎಂ ವಿಷಾದಪೂರ್ವಕವಾಗಿ ಗಮನಿಸಿದೆ. ಇನ್ನೊಂದೆಡೆ ಚೀನಾ ೧೯೬೨ರ ಬಳಿಕವೂ ತನ್ನ ದಾಳಿಗಳನ್ನು ನಿಲ್ಲಿಸಿಲ್ಲ. ಭಾರತ-ಟಿಬೆಟ್ ಗಡಿಯ ಎಲ್ಲ ಮೂರು ವಲಯಗಳಲ್ಲಿ ಅದು ನಿರಂತರ ಮುನ್ನುಗ್ಗುವಿಕಯ ಮೂಲಕ ಅಷ್ಟಷ್ಟೇ ಜಾಗವನ್ನು ಕಬಳಿಸುತ್ತಲೇ ಇದೆ.

೧೯೬೨ರ ಸೋಲಿಗೆ ಮುಖ್ಯವಾಗಿ ದೇಶದ ರಾಜಕೀಯ ಮತ್ತು ರಾಜತಾಂತ್ರಿಕ ನಾಯಕತ್ವದ ವೈಫಲ್ಯವೇ ಕಾರಣ ಎಂಬುದನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ. ಸರ್ದಾರ್ ಪಟೇಲ್ ಮತ್ತು ಶ್ರೀಗುರೂಜಿ ಸೇರಿದಂತೆ ಹಲವು ಜನ ಗಣ್ಯರು ನೀಡಿದ ಎಚ್ಚರಿಕೆಗಳಿಗೆ ಅಂದಿನ ನಾಯಕತ್ವ ಕಿವಿಗೊಡಲೇ ಇಲ್ಲ; ಜಾಗತಿಕ ವಿದ್ಯಮಾನಗಳ ಬಗೆಗೆ ರಮ್ಯ ಕಲ್ಪನೆಗಳನ್ನು ಹೊಂದಿದ್ದ ಅಂದಿನ ನಮ್ಮ ನಾಯಕರು ವಾಸ್ತವಸ್ಥಿತಿಯನ್ನು ಪೂರ್ತಿಯಾಗಿ ಅಲಕ್ಷಿಸಿದರು. ಟಿಬೆಟನ್ನು ಮೊದಲಿಗೆ ಕಬಳಿಸಿದ ಚೀನಾ ಮತ್ತೆ ನಮ್ಮ ಭೂಭಾಗದ ಮೇಲೆ ಆಕ್ರಮಣ ನಡೆಸಿತು. ದುರದೃಷ್ಟವೆಂದರೆ, ೧೯೬೨ರ ಭಾರತ-ಚೀನಾ ಯುದ್ಧದ ಕಟುಸತ್ಯಗಳು ಸೌತ್‌ಬ್ಲಾಕ್‌ನ ಕಪಾಟುಗಳಲ್ಲಿ ಈಗಲೂ ಅಡಗಿಕುಳಿತಿವೆ. ಹಂಡರ್ಸನ್ ಬ್ರೂಕ್ಸ್-ಪಿ.ಎಸ್. ಭಗತ್ ವರದಿಯಂತಹ ದಾಖಲೆಗಳನ್ನು ಜನತೆಗೆ ಮುಕ್ತಗೊಳಿಸುವ ಕೆಲಸವನ್ನು ಹಿಂದಿನ ಯಾವುದೇ ಸರ್ಕಾರ ಮಾಡದಿದ್ದುದು ಅತ್ಯಂತ ದುರದೃಷ್ಟಕರ. ಆ ವರದಿಯನ್ನು ಶೀಘ್ರವೇ ಜನತೆಗೆ ಮುಕ್ತಗೊಳಿಸಬೇಕು; ಅದರಿಂದ ನಾವು ಎಸಗಿದ ತಪ್ಪುಗಳು ಯಾವುವೆಂದು ಗೊತ್ತಾಗಿ ಇವತ್ತಿನ ರಾಜಕೀಯ, ರಾಜತಾಂತ್ರಿಕ ಮತ್ತು ಸೇನಾ ನಾಯಕತ್ವಕ್ಕೆ ಆ ತಪ್ಪುಗಳಿಂದ ಬಹಳಷ್ಟು ಪಾಠ ಕಲಿಯಲು ಸಾಧ್ಯವಾಗಬಹುದು.

ಭಾರತ-ಟಿಬೆಟ್ ಗಡಿಯುದ್ಧಕ್ಕೂ ಚೀನಾ ಗಡಿಪ್ರದೇಶದ ಮೂಲಸವಲತ್ತುಗಳನ್ನು ವ್ಯೂಹಾತ್ಮಕವಾಗಿ ನಿರ್ಮಿಸಿದೆ; ಮತ್ತು ಉತ್ತಮಪಡಿಸಿದೆ; ವೈಮಾನಿಕ ನೆಲೆ, ಕ್ಷಿಪಣಿ ಉಡ್ಡಯನ ನೆಲೆ, ಸೇನಾಶಿಬಿರ ಮತ್ತಿತರ ಭೌತಿಕ ಮೂಲಸವಲತ್ತುಗಳು ಅದರಲ್ಲಿ ಸೇರಿವೆ. ಗಡಿಯುದ್ಧಕ್ಕೂ ‘ಚೀನಾ ತನ್ನ ಆಕ್ರಮಣಕಾರಿ ತಂತ್ರಗಳನ್ನು ಅನುಸರಿಸುತ್ತಿರುವುದರಿಂದ ಬೆದರಿಕೆ ಹೆಚ್ಚಿರುವ ಕಾರಣ ಸರ್ಕಾರ ಗಡಿನಿರ್ವಹಣೆ ಮತ್ತು ಭದ್ರತಾ ಸಿದ್ಧತೆ ಬಗ್ಗೆ ಸಾಕಷ್ಟು ಹಣವನ್ನು ವ್ಯಯಿಸಬೇಕೆಂದು ಎಬಿಕೆಎಂ ಸರ್ಕಾರವನ್ನು ಒತ್ತಾಯಿಸುತ್ತದೆ.

ಪರ್ವತ ಸಮರದ ವಿಶೇಷ ಪಡೆಗಳನ್ನು ರೂಪಿಸಬೇಕೆನ್ನುವ ನಮ್ಮ ಸೇನಾಪಡೆಗಳ ಬೇಡಿಕೆ ಸರ್ಕಾರದ ಜಡತೆ ಮತ್ತು ವಿಳಂಬನೀತಿಯಿಂದಾಗಿ ಇನ್ನೂ ಕೈಗೂಡಿಲ್ಲ. ಆಧುನಿಕ ಯುದ್ಧಗಳು ಕೇವಲ ಗಡಿಭಾಗದಲ್ಲಿ ನಡೆಯುತ್ತವೆ ಎಂಬುದಕ್ಕೆ ಯಾವ ಆಧಾರವೂ ಇಲ್ಲ. ಈ ಕ್ಷೇತ್ರದಲ್ಲಿ ಚೀನಾ ದಾಪುಗಾಲಿಡುತ್ತಿರುವುದನ್ನು ಗಮನಿಸಿ ಸಮಗ್ರ ಸೇನಾ ತಾಂತ್ರಿಕ ಔನ್ನತ್ಯವನ್ನು ಸಾಧಿಸಲು ನಾವು ಶ್ರಮಿಸಬೇಕು. ಕ್ಷಿಪಣಿ ತಂತ್ರಜ್ಞಾನದಲ್ಲಿ ನಮ್ಮ ಯಶಸ್ಸು ಮತ್ತು ಮುನ್ನಡೆಯ ಬಗ್ಗೆ ನಾವು ಹೆಮ್ಮೆಪಟ್ಟುಕೊಳ್ಳಬಹುದು; ಆದರೆ ಪ್ರಮುಖ ಸೇನಾ ಸಲಕರಣೆ (ಹಾರ್ಡ್‌ವೇರ್)ಗಳನ್ನು ನಾವು ಈಗ ಕೂಡ ದೊಡ್ಡ ಪ್ರಮಾಣದಲ್ಲಿ ಆಮದು ಮಾಡುತ್ತಿದ್ದೇವೆ.

ಇಂಧನ, ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ, ಕೈಗಾರಿಕೆ ಹಾಗೂ ವಾಣಿಜ್ಯದಂತಹ ಭಾರತದ ಪ್ರಮುಖ ರಂಗಗಳಲ್ಲಿ ಚೀನಾ ಆಳಕ್ಕೆ ಇಳಿದೆ; ಇನ್ನೊಂದೆಡೆ ಅದು ನಮ್ಮ ನದಿನೀರನ್ನು ಬೇರೆಡೆಗೆ ತಿರುಗಿಸುವ ಕುತಂತ್ರ ನಡೆಸುತ್ತಿದ್ದು ಇವು ಕಳವಳಕಾರಿ ಸಂಗತಿಗಳಾಗಿವೆ.

ಸೈಬರ್ ತಂತ್ರಜ್ಞಾನ ಮತ್ತು ದೂರಸಂಪರ್ಕದಲ್ಲಿ ಚೀನಾದಿಂದ ಭಾರತಕ್ಕೆ ಬೆದರಿಕೆ ಎದುರಾಗಬಹುದೆಂಬ ಆತಂಕಕ್ಕೆ ಎಬಿಕೆಎಂ ಅಷ್ಟಾಗಿ ಬೆಲೆಕೊಡುವುದಿಲ್ಲ. ಬಲವಾದ ಸೈಬರ್ ಸಮರ ಸಾಮರ್ಥ್ಯವನ್ನು ಕಟ್ಟುವುದಕ್ಕೆ ಚೀನಾ ಭಾರೀ ಹಣ ಹೂಡಿದ್ದು, ಅದರ ಮೂಲಕ ಅದು ಅಮೆರಿಕದಂತಹ ಮುಂದುವರಿದ ದೇಶಗಳ ತಾಂತ್ರಿಕ ಸಾಮರ್ಥ್ಯವನ್ನು ಕೂಡ ಅಸ್ತವ್ಯಸ್ಥಗೊಳಿಸಬಹುದು. ಚೀನಾದ ಈ ಬೆದರಿಕಯು ಆ ರಾಷ್ಟ್ರಗಳನ್ನು ಕೂಡ ಕಳವಳಕ್ಕೀಡು ಮಾಡಿದ್ದು, ಅದಕ್ಕೆ ಪ್ರತಿಯಾದ ಕ್ರಮಗಳನ್ನು ಕೈಗೊಳ್ಳುತ್ತಿವೆ. ಹೈಟೆಕ್ ಕ್ಷೇತ್ರಗಳಲ್ಲಿನ ನಮ್ಮ ಮುಂದುವರಿಕೆ ಗಮನಾರ್ಹವಾದದ್ದು ಎನ್ನುವ ಎಬಿಕೆಎಂ ನಮ್ಮ ಸೈಬರ್ ಭದ್ರತಾ ಸಾಮರ್ಥ್ಯವನ್ನು ಹೆಚ್ಚಿಸುವ ಬಗ್ಗೆ ಸರ್ಕಾರ ಅಗತ್ಯವಾದ ಮಹತ್ವವನ್ನು ನೀಡಬೇಕೆಂದು ಆಗ್ರಹಿಸುತ್ತದೆ.

ವಿವಿಧ ದೇಶಗಳೊಂದಿಗೆ ಉತ್ತಮ ಸಂಬಂಧ ಇರಿಸಿಕೊಳ್ಳುವುದಕ್ಕೆ ಭಾರತ ಯಾವಾಗಲೂ ಪ್ರಯತ್ನಿಸುತ್ತಾ ಬಂದಿದೆ. ಸುಮಾರು ಎರಡು ದಶಕಗಳ ಕಾಲ ನಾವು ‘ಪೂರ್ವಕ್ಕೆ ನೋಡುವ ನೀತಿ’ (ಐooಞ ಇಚಿsಣ Poಟiಛಿಥಿ)ಯನ್ನು ಅನುಸರಿಸುವ ಮೂಲಕ ನಮ್ಮ ಪೂರ್ವ ಹಾಗೂ ಆಗ್ನೇಯ ಭಾಗದ ದೇಶಗಳೊಂದಿಗೆ ನಿಕಟ ಸಂಬಂಧವನ್ನು ಬೆಳೆಸಲು ಪ್ರಯತ್ನಿಸಿದೆವು. ಜಗತ್ತಿನಲ್ಲಿ ಎಲ್ಲ ಕಾಲದಲ್ಲೂ ನಾವು ಶಾಂತಿದೂತರೆನಿಸಿದ್ದೇವೆ. ಈ ಪ್ರತಿಷ್ಠೆಯ ಆದರ್ಶಗಳನ್ನು ಸಾಧಿಸುವ ಸಲುವಾಗಿ ಸರ್ಕಾರ ೧೯೬೨ರ ಅನುಭವದಿಂದ ಪಾಠ ಕಲಿಯಬೇಕು; ಮತ್ತು ಚೀನಾದ ವಿರುದ್ಧ ಸಮಗ್ರ ರಾಷ್ಟ್ರೀಯ ಭದ್ರತಾ ನೀತಿಯೊಂದನ್ನು ರೂಪಿಸುವುದಕ್ಕೆ ಅತ್ಯುನ್ನತವಾದ ಆದ್ಯತೆಯನ್ನು ನೀಡಬೇಕು.

Advertisements

Leave a comment

Filed under Articles

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s