Lessons from Results: ಫಲಿತಾಂಶ ಕಲಿಸಿದ ಪಾಠಗಳು: ಸರಸ್ವತಿ ಒಲಿಯಲು ಲಕ್ಷ್ಮಿ ಬೇಕಿಲ್ಲ!

SSLC and PUC results proved that commitment is the ultimate factor which guides a student to the height of success. Students from rural places, govt schools, students who never went for coaching performed far greatly, giving a message for teachers, parents that DO NOT NEGLECT RURAL TALENTS AT ANY COST. ಸರಸ್ವತಿಯ ಒಲುಮೆಗೆ ಲಕ್ಷಿಯ ಅಗತ್ಯವಿಲ್ಲ .ಸಾಧನೆ ಶ್ರೀಮಂತರ ಸ್ವತ್ತಲ್ಲ, ಅದು ಪರಿಶ್ರಮಗಳ ಒಡನಾಡಿ. ಸಾಧನೆಗೆ ಆರ್ಥಿಕ ಸಂಕಷ್ಟ, ಅಂಗವೈಕಲ್ಯ, ಕಾಯಿಲೆ ಇತ್ಯಾದಿ ಸಮಸ್ಯೆಗಳು ಯಾವುದೂ ಅಡ್ಡಿಯಾಗದು; ಆತ್ಮವಿಶ್ವಾಸ, ಛಲದ ಮುಂದೆ ಈ ಸಮಸ್ಯೆಗಳು ನಗಣ್ಯ. ಇದಕ್ಕೆ ಈ ಬಾರಿಯ ಎಸ್ಸೆಸ್ಸೆಲ್ಲಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವ ಸಾಧಕರ ಯಶೋಗಾಥೆಯೇ ಸಾಕ್ಷಿ. (ವಿವಿಧ ಪತ್ರಿಕೆಗಳ ವರದಿಗಳನ್ನು ಆಧರಿಸಿ)

CRUCIAL TEST: Students writing the SSLC examination sitting on the floor at Jeevanprakash High School in Gulbarga (The Hindu Photo)

ಪ್ರತಿಭೆ ಅರಳಲು ಇಂಗ್ಲಿಷ್ ಮಾಧ್ಯಮವೇ ಬೇಕೆಂದಿಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದ ಮೂಡಬಿದರೆಯ ಆಳ್ವಾಸ್ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಜ್ವಲ್ 613(ಶೇ.98.08) ಅಂಕ ಪಡೆಯುವ ಮೂಲಕ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದಾನೆ. ಪ್ರಜ್ವಲ್‌ನ ತಾಯಿ ಬೀಡಿ ಕಟ್ಟುವ ಕಾಯಕ ಮಾಡುತ್ತಿದ್ದರೆ, ತಂದೆ ಗೂಡಂಗಡಿ ನಡೆಸುತ್ತಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ದ್ವೀತಿಯ ಸ್ಥಾನ ಗಳಿಸಿರುವ ಉ.ಕನ್ನಡದ ಹೊನ್ನಾವರದ ಹೊಸಾಕುಳಿಯ ಎಚ್.ಎಸ್. ಲಕ್ಷ್ಮೀನಾರಾಯಣ, ಸರ್ಕಾರ ನೀಡಿದ ಸೈಕಲ್‌ನಲ್ಲಿ ಗುಡ್ಡಬೆಟ್ಟದ ರಸ್ತೆಯಲ್ಲಿ ಮೂರು ಕಿ.ಮಿ. ಸಂಚರಿಸಿ ಶಾಲೆಗೆ ಹೋಗುಬೇಕಾದ ಸಂದಿಗ್ಧತೆ. 9 ಜನರಿರುವ ಅವಿಭಕ್ತ ಕುಟುಂಬದ ಬಡತನ ಅರಿತ ಲಕ್ಷ್ಮೀನಾರಾಯಣ ಅಡಿಕೆಕಾಯಿ ಸಂಗ್ರಹಿಸುವ ಅಟ್ಟದ ಮೂಲೆಯಲ್ಲಿ ಅಮ್ಮನ ಹಳೆಯ ಸೀರೆಯನ್ನೇ ಇಳಿಬಿಟ್ಟು ವಿಭಜಕ  ಮಾಡಿಕೊಂಡು ಓದಿ ಪರಿಕ್ಷೆ ಬರೆದು 612 ಅಂಕ ಗಳಿಸಿದ ಪರಿಶ್ರಮಿ.

ಕೋಲಾರದ ಕೆಜಿಎಫ್‌ನಗರದ ಉರಿಗಾಂ ಪೇಟೆಯ ಬೆಮೆಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಸ್.ಕೆ. ಸುಗಂಧಿ ಪರೀಕ್ಷೆಯಲ್ಲಿ 614 ಅಂಕಗಳಿಸಿ ರಾಜ್ಯಕ್ಕೆ 9 ನೇಯವಳಾಗಿ ಜಿಲ್ಲೆಗೆ ಮೊದಲಿಗಳಾಗಿ ಉತ್ತೀರ್ಣಳಾಗಿದ್ದಾಳೆ. ಈಕೆಯ ತಂದೆ ಕುಮಾರಗುರು ಬುದ್ಧಿಮಾಂದ್ಯರು, ತಾಯಿ ಲಕ್ಷ್ಮಿ ಅನಕ್ಷರಸ್ಥೆ. ಶಾಲೆಗೆ ಹೋಗಬೇಕೆಂಬ ಬಯಕೆಯಿಂದ ಮನೆಯಲ್ಲಿ ತಾನೇ ಮಕ್ಕಳಿಗೆ ಟ್ಯೂಷನ್‌ಮಾಡಿ, ಅದರಿಂದ ಶಾಲೆಯ ಅಗತ್ಯತೆಗಳನ್ನು ನಿರ್ವಹಿಸಿದವಳು ಸುಗಂಧಿ. ಈ ಕಡುಬಡತನದಲ್ಳೂ ಹಗಲಿರುಳು ದುಡಿದು ರಾತ್ರಿ ನಿದ್ದೆಗೆಟ್ಟು ಓದಿ ಛಲದೊಂದಿಗೆ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೇ ಮೊದಲಿಗಳಾಗಿ ಪಾಸಾಗಿದ್ದಾಳೆ.

ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಆರತಿ ತೇಲಿ ಬೀದಿ ದೀಪಗಳಲ್ಲಿ ಓದಿ ಪರೀಕ್ಷೆಯಲ್ಲಿ ಶೇ 95.52 ಅಂಕ ಗಳಿಸಿದ್ದಾಳೆ. ಈಕೆಯ ತಂದೆ  ಚಂದ್ರಶೇಖರ್ ತೇಲಿ (ಎಣ್ಣೆಯನ್ನು ತೆಗೆದು ಮಾರುವವರು) ವ್ಯಾಪಾರಿಯಾಗಿದ್ದು, ಊರೂರು ತಿರುಗಿ ಚಿಲ್ಲರೆ ಕಾಳುಕಡ್ಡಿಗಳನ್ನು ಮಾರಿ ಬಂದ ಆದಾಯವೇ ಐದು ಜನರಿರುವ ಈ ಕಡುಬಡತನದ ಕುಟುಂಬದ ಆದಾಯ. ಮನೆಯಲ್ಲಿ ಕಡುಬಡತನ ಒಂದೆಡೆಯಾದರೆ ಆ ಊರಿನಲ್ಲಿ ಪ್ರೌಢಶಾಲೆಯಿರಲಿಲ್ಲ ಶಾಲೆಗಾಗಿ 4 ಕಿ.ಮೀ. ದೂರದ ಟಕ್ಕಳಕಿಗೇ ಹೋಗಬೇಕು. ಹೀಗಾಗಿ ಪ್ರತಿದಿನ 4 ಕಿ.ಮೀ. ಸೈಕಲ್ ತುಳಿದು ಟಕ್ಕಳಕಿ ಪುರ್ನವಸತಿ ಕೇಂದ್ರದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಹೋಗುತ್ತಿದ್ದಳು. ಜತೆಗೆ ಮನೆಗೆಲಸವನ್ನ ಮಾಡಿಕೊಂಡು ಸಮಯ ಸಿಕ್ಕಾಗಲೆಲ್ಲ ಓದಿದ ಆರತಿ ಈಗ ಡಿಸ್ಟ್ರಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾಳೆ.

ಮನೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲ, ಇನ್‌ವರ್ಟರ್ ಬೆಳಕಿನಲ್ಲಿ ಓದಿದ ರಬಕವಿ ಬನಹಟ್ಟಿಯ ಜ್ಯೋತಿ ಎಸ್ಸೆಸ್ಸೆಲ್ಲಿಯಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದಾಳೆ. ಜ್ಯೋತಿ, ಜೀವನೋಪಾಯಕ್ಕಾಗಿ ನೇಕಾರಿಕೆಯನ್ನೇ ಅವಲಂಬಿಸಿರುವ ತಂದೆ ರಾಜಶೇಖರ, ಸವಿತಾರ ಪುತ್ರಿ. ಮಗಳನ್ನು ಓದಿಸಬೇಕೆಂಬ ಆಸೆ. ಆದರೆ ಮನೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲ. ಓದಲೇಬೇಕೆಂಬ ಹಠದಿಂದ ಹತ್ತಿರದ ಬೀದಿದೀಪದ ಕಂಬಗಳ ಕೆಳಗೆ ಅಧ್ಯಯನ ನಡೆಸುತ್ತಿದ್ದಳು. ಈಕೆಯ ಓದುವ ಆಸಕ್ತಿ ಗಮನಿಸಿದ ಸ್ಥಳಿಯರು ಈಕೆಗೆ ವಿದ್ಯುತ್ ರೀಚಾರ್ಜ್ ಮಾಡಬಲ್ಲ ಇನ್‌ವರ್ಟ್‌ರ್‌ನ್ನು ಕೊಡುಗೆಯಾಗಿ ನೀಡಿದರು. ಆದರೆ ಈ ಇನವರ್ಟರ್ ರೀಚಾರ್ಜ್ ಮಾಡಲು ವಿದ್ಯುತ್ ಇರುವವರ ಮನೆಗಳಿಗೆ ಹೋಗಬೇಕು. ಇಂತಹ ಸ್ಥಿತಿಯಲ್ಲಿಯೂ ಪ್ರತೀ ದಿನ 6 ಗಂಟೆಗಳ ಕಾಲ ಸತತ ಅಭ್ಯಾಸ ಮಾಡಿ 92.16ಅಂಕ ಪಡೆದು ಕತ್ತಲ ಮನೆಗೆ ಬೆಳಕಾಗಿದ್ದಾಳೆ. ಹಾವೇರಿಯ ನೆಗಳೂರು ಮೂರಾರ್ಜಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪೂರ್ಣಿಮಾಳ ತಾಯಿ ಮೆಣಸಿನಕಾಯಿ ಮಾರುವ ಕೂಲಿ ಕಾರ್ಮಿಕಳು. ಮನೆಯಲ್ಲಿ ಕಿತ್ತು ತಿನ್ನುವ ಬಡತನ, ತಾಯಿ ತನ್ನನ್ನು ಓದಿಸಲು ಪಡುತ್ತಿರುವ ಕಷ್ಟ ನೋಡಿ ತನ್ನ ಶೈಕ್ಷಣಿಕ ಜೀವನದ ಪ್ರತಿ ಹಂತದಲ್ಲೂ ಉತ್ತಮ ಅಂಕಗಳನ್ನು ಪಡೆದಿದ್ದಾಳೆ. ಈ ವರ್ಷದ ಎಸ್ಸೆಸ್ಸೆಲ್ಲಿಯಲ್ಲಿ ಶೇ.96 ಅಂಕ  ಪಡೆದು ಅಮ್ಮನ ಬದುಕನ್ನು ಸಿಹಿ ಮಾಡಿಸುವ ಭರವಸೆಯ ಆಶಾಕಿರಣವಾಗಿ ಹೊಮ್ಮಿದ್ದಾಳೆ.

ಕಾರವಾರ ಬಳಿಯ ಜೋಯಿಡಾ ಅರಣ್ಯ ಪ್ರದೇಶದ ಹುಡುಗಿ ಕ್ಷಮಾ ಶೇ. 87 ಅಂಕಗಳಿಸುವ ಮೂಲಕ ಆ ಪ್ರದೇಶದ ಉಳಿದ ವಿದ್ಯಾರ್ಥಿಗಳಿಗೆ ಭರವಸೆಯ ನಾಳೆಗಳ ಕನಸನ್ನು ಬಿತ್ತಿದ್ದಾಳೆ. ಪಿಯುಸಿಯಲ್ಲಿ ಕಾಲೇಜಿನಲ್ಲಿ  ಸರಿಯಾಗಿ ಪಾಠ ನಡೆಯದಿದ್ದರೂ ಸ್ವ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾಳೆ .

ರಾಮನಗರದ ಬಿಂದುರಾಜ್ (ಶೇ.88) ಮತ್ತು ಬಾಗಲಕೋಟೆಯ ನವನೀತ (ಶೇ.81.76) ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿದವರು. ಮನೆಯಲ್ಲಿ ಕಿತ್ತುತಿನ್ನುವ ಬಡತನಕ್ಕೆ ಪರಿಹಾರವಾಗಿ ಪತ್ರಿಕೆ ಹಂಚಿ ಅದರಿಂದ ಬಂದ ಹಣದಲ್ಲಿ ಶಾಲಾ ಅಗತ್ಯತೆಗಳನ್ನು ಪೂರೈಸಿ, ಮನೆಗೆಲಸವನ್ನೂ ಮಾಡಿಕೊಂಡು ಜೊತೆಗೆ ಆಸಕ್ತಿಯಿಂದ ಓದಿದ ಸಾಧಕರು.

ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳಿಲ್ಲ, ಗುಣಮಟ್ಟದ ಶಿಕ್ಷಣವಿಲ್ಲ ಇಂತಹ ಹತ್ತಾರು ಆರೋಪಗಳು ದಿನಬೆಳಗಾದರೆ ಕೇಳಿಬರುತ್ತಿವೆ. ಇವೆಲ್ಲ ಇದ್ದರೂ ಸರ್ಕಾರಿ ಶಾಲೆಗಳ ಫಲಿತಾಂಶಗಳಿಗೇನೂ ಕೊರತೆ ಇಲ್ಲ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಪರೀಕ್ಷೆಗೆ ಕೂತಿದ್ದ 2,99,500,ವಿದ್ಯಾರ್ಥಿಗಳಲ್ಲಿ

2,29,392 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ. ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಟಾಪ್‌ನಲ್ಲಿ

ಸ್ಥಾನ ಪಡೆದವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಗ್ರಾಮೀಣರು ಮತ್ತು ಕಡುಬಡತನದಲ್ಲಿ ಓದಿದವರು.

ಸರಸ್ವತಿಯ ಒಲುಮೆಗೆ ಲಕ್ಷಿಯ ಅಗತ್ಯವಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಗರಗಳಿಗಿಂತ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳ ಫಲಿತಾಂಶ ಶೇ. 3.53 ರಷ್ಟು ಅಧಿಕವಾಗಿದೆ. ಇನ್ನು ಸರ್ಕಾರಿ ಶಾಲೆಗಳಿಗೆ ಮೂದಲಿಸುವವರಿಗೆ ಪಾಠವೆಂಬಂತೆ ರಾಜ್ಯದ ಯಾವುದೇ ಸರ್ಕಾರಿ ಶಾಲೆ ಶೂನ್ಯ ಫಲಿತಾಂಶ ಪಡೆದಿಲ್ಲ. ಬದಲಾಗಿ ಗುಣಮಟ್ಟದ ಶಿಕ್ಷಣ ಕೊಡುತ್ತೇವೆ ಎನ್ನುವ 47 ಖಾಸಗಿ ಶಾಲೆಗಳು ಶೂನ್ಯ ಸಂಪಾದಿಸಿವೆ.

ಇನ್ನು ಸಾಧನೆಗೆ ಅಂಗವಿಕಲತೆ ಅಡ್ಡಿಯಲ್ಲ ಎಂಬುದನ್ನು ಸಾಕ್ಷೀಕರಿಸುವಂತೆ ಪರೀಕ್ಷೆ ಬರೆದ ಶೇ. 85. 71 ರಷ್ಟು ಅಂಧರು, ಶೇ. 61.82 ರಷ್ಷ್ಟು ಶ್ರವಣ ದೋಷವಿರುವವರು, ಶೇ.67 ರಷ್ಟು ಅಂಗವಿಕಲರು, ಶೇ.57.76 ರಷ್ಟು ಕಿವುಡು ಮತ್ತು ಮೂಗರು ಉತ್ತೀರ್ಣರಾಗಿದ್ದಾರೆ.

ಉತ್ತಮ ವಿದ್ಯಾರ್ಥಿಯು ಬೆಳಕಿಗೆ ಬರಲು ಪರಿಶ್ರಮವೇ ಕಾರಣ ಹೊರತು ಯಾವ ಶಾಲೆಯಲ್ಲಿ ಕಲಿತ ಎನ್ನುವುದಲ್ಲ ನಗರದ/ಊರಿನ ಶ್ರೀಮಂತ ಶಾಲೆಗೆ ಸೇರಿಸಿ ಭರ್ಜರಿ ಇಂಗ್ಲಿಷ್ ಕಲಿತುಬಿಟ್ಟರೆ ಎಲ್ಲವೂ ಆದಂತೆಯೇ ಎಂಬ ಮಾನಸಿಕತೆಯ ಪೋಷಕರು ಈ ಬಾರಿಯ ಎಸ್ಸೆಸ್ಸೆಲ್ಸಿಯ ಟಾಪ್ ವಿದ್ಯಾರ್ಥಿಗಳ ಪಟ್ಟಿಯನ್ನೊಮ್ಮೆ ನೋಡಬೇಕಿದೆ.

1 Comment

Filed under Articles

One response to “Lessons from Results: ಫಲಿತಾಂಶ ಕಲಿಸಿದ ಪಾಠಗಳು: ಸರಸ್ವತಿ ಒಲಿಯಲು ಲಕ್ಷ್ಮಿ ಬೇಕಿಲ್ಲ!

  1. ನಗರದ ಅನುಕೂಲವಂತರ ಮಕ್ಕಳು ಗಮನಿಸಿ!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s