ಮತ್ತೊಂದು ಸಾಹಿತ್ಯ ಚಿಂತನಕ್ಕೆ ಕಿವಿಯಾಗುವ ಸಮಯ; 8ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ

ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಹಳೆ ವಿದ್ಯಾರ್ಥಿ ಸಂಘ ಆಯೋಜಿಸುತ್ತಿದೆ.

ವಿ.ವಿ ಮಟ್ಟದ 8ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ 

ಮಾರ್ಚ್ 24, 2012 ಶನಿವಾರ

ಸ್ಥಳ: ರವೀಂದ್ರ ಕಲಾ ಭವನ,  ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟಾ  ಮಂಗಳೂರು

ಅಂದಹಾಗೆ…

ಕಾಲಕ್ಕೆ ಎಂತಹ ವೇಗ!

ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವೆಂಬ ಕೂಸು ಹುಟ್ಟಿ, ಅಂಬೆಗಾಲಿಡುತ್ತಾ… ಹಾಗೆ ಮೆಲ್ಲಗೆ ಎದ್ದು ನಿಂತು ಪುಟ್ಟಪುಟ್ಟ ಹೆಜ್ಜೆಯಿಟ್ಟು ಇಷ್ಟು ದೂರ ಬಂದದ್ದೇ ಗೊತ್ತಾಗಲಿಲ್ಲ. ಹೌದು, ಯುವಮನಸ್ಸುಗಳ ಸಾಹಿತ್ಯ ಸಂಭ್ರಮಕ್ಕೆ ಈಗ ಎಂಟರ ಹರೆಯ.

ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಗೆ ಸೀಮಿತವಾಗಿ 2005ರಲ್ಲಿ ಆರಂಭವಾದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ನಾಡಿನ ಹಿರಿಯ ಸಾಹಿತಿಗಳ, ವಿದ್ವಾಂಸರ ಮಾರ್ಗದರ್ಶನದಲ್ಲಿ, ಸಮಾನ ಮನಸ್ಕ ಸಾಹಿತ್ಯಾಸಕ್ತರ ಬೆಂಬಲದೊಂದಿಗೆ ಹಂತಹಂತವಾಗಿ ಬೆಳೆದು ಬಂತು. ಈಗ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಬರುವ ಎಲ್ಲ ಪದವಿ ಕಾಲೇಜುಗಳ, ಸ್ನಾತಕೋತ್ತರ ಕೇಂದ್ರಗಳ, ಅಲ್ಲದೆ ಗಡಿನಾಡು ಕಾಸರಗೋಡಿನ ಸಾಹಿತ್ಯಪ್ರೀತಿಯ ಯುವಕರ ಕುತೂಹಲದ ಕೇಂದ್ರವಾಗಿ ಮಾರ್ಪಟ್ಟಿದೆ ಈ ಪರಿಕಲ್ಪನೆ.

’ಒಳ್ಳೆಯ ಸಾಹಿತ್ಯದಿಂದ ಒಳ್ಳೆಯ ಮನಸ್ಸು, ಒಳ್ಳೆಯ ಮನಸ್ಸಿನಿಂದ ಉತ್ತಮ ಸಮಾಜ, ಉತ್ತಮ ಸಮಾಜದಿಂದ ಶ್ರೇಷ್ಠ ಬದುಕು’ – ನಾವು ಮೊದಲಿನಿಂದಲೂ ಇದೇ ನಂಬಿಕೆಗೆ ಬದ್ಧರಾದವರು, ಮತ್ತು ಅದರ ಆಧಾರದಲ್ಲಿಯೇ ಸಾಹಿತ್ಯದ ಒಲವುಳ್ಳ ಯುವಹೃದಯಗಳ ಸಂವಾದಕ್ಕೊಂದು ವೇದಿಕೆ ಕಲ್ಪಿಸಿಕೊಂಡು ಬಂದವರು. ನಿಜ, ಎಂಟು ವರ್ಷಗಳ ಪಯಣದ ಬಳಿಕವೂ ನಮ್ಮ ವಿಶ್ವಾಸಕ್ಕೆ ಎಳ್ಳಷ್ಟೂ ಕುಂದುಂಟಾಗಿಲ್ಲ.

ಡಾ. ಅಮೃತ ಸೋಮೇಶ್ವರ, ಶ್ರೀ ಸುಬ್ರಾಯ ಚೊಕ್ಕಾಡಿ, ಡಾ. ಕಯ್ಯಾರ ಕಿಞ್ಞಣ್ಣ ರೈ, ಡಾ. ನಾ. ಡಿ’ಸೋಜ, ಶ್ರೀ ಕುಂ. ವೀರಭದ್ರಪ್ಪ, ಶ್ರೀ ಗೋಪಾಲಕೃಷ್ಣ ಪೈ, ಶ್ರೀ ವಸುಧೇಂದ್ರ… ಹೀಗೆ ನಾಡಿನ ಹೆಸರಾಂತ ಸಾಹಿತಿಗಳು ಈವರೆಗಿನ ಸಮ್ಮೇಳನಗಳನ್ನು ಉದ್ಘಾಟಿಸಿ ನಮ್ಮ ಉತ್ಸಾಹವನ್ನು ತುಂಬು ಮನಸ್ಸಿನಿಂದ ಬೆಂಬಲಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ ಗಣ್ಯಮಾನ್ಯರು ವಿಚಾರಗೋಷ್ಠಿ, ಕಥೆ, ಲಲಿತಪ್ರಬಂಧ, ಕವಿಗೋಷ್ಠಿಗಳ ಅಧ್ಯಕ್ಷತೆ ವಹಿಸಿ ಸಾಹಿತ್ಯ ಲೋಕಕ್ಕೆ ಮುಖಮಾಡಿರುವ ಯುವ ಸಮುದಾಯಕ್ಕೆ ದಾರಿದೀಪವಾಗಿದ್ದಾರೆ.

ಈ ಎಲ್ಲ ಮಧುರ ನೆನಪುಗಳ ಬುತ್ತಿಯೊಂದಿಗೆ ಈಗ ಮತ್ತೊಂದು ಸಾಹಿತ್ಯ ಚಿಂತನಕ್ಕೆ ಕಿವಿಯಾಗುವ ಸಮಯ ಬಂದಿದೆ; ಬನ್ನಿ, ಎಲ್ಲರೂ ಜತೆಯಾಗಿ ಕೇಳೋಣ…

ಉದ್ಘಾಟನಾ ಸಮಾರಂಭ          ಬೆಳಿಗ್ಗೆ 10ಗಂಟೆಗೆ

ಉದ್ಘಾಟನೆ : ಶ್ರೀ ಜೋಗಿ ,  ಸಾಹಿತಿ-ಪುರವಣಿ ಸಂಪಾದಕರು, ಉದಯವಾಣಿ, ಬೆಂಗಳೂರು,

ಅಧ್ಯಕ್ಷತೆ: ಡಾ. ಕೆ ಚಿನ್ನಪ್ಪ ಗೌಡ, ಜಾನಪದ ವಿದ್ವಾಂಸರು ಹಾಗೂ ಕುಲಸಚಿವರು, ಮಂಗಳೂರು ವಿಶ್ವವಿದ್ಯಾನಿಲಯ

ಶುಭಾಶಂಸನೆ : ಡಾ ಲಕ್ಷ್ಮೀ ನಾರಾಯಣ ಭಟ್ಟ, ಪ್ರಾಂಶುಪಾಲರು , ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

ಪ್ರಬಂಧ ಗೋಷ್ಠಿ: ಪ್ರಬಂಧ ಮಂಡನೆ: 11.00am-12.45pm

1. ’ಡಾ. ಚಂದ್ರಶೇಖರ ಕಂಬಾರರ ಕೃತಿಗಳ ಸಾಮಾಜಿಕ ಪ್ರಸ್ತುತತೆ’

2. ’ಸಾಮಾಜಿಕ ಜಾಲತಾಣಗಳ ಸುಳಿಯಲ್ಲಿ ಮರೆಯಾಗುತ್ತಿರುವ ಮಾನವೀಯ ಸಂಬಂಧಗಳು’.

ಪ್ರತಿಕ್ರಿಯೆ: ಶ್ರೀಮತಿ ಉಷಾ ಕಟ್ಟೆಮನೆ , ಅಂಕಣಕಾರ್ತಿ-ಲೇಖಕಿ,  ಮಂಗಳೂರು

ಕಥಾಗೋಷ್ಠಿ: ಅಪರಾಹ್ನ 1.30ರಿಂದ 2.30ರವರೆಗೆ

(ಆಯ್ದ ಮೂರು ಕಥಾಲೇಖನಗಳ ಮಂಡನೆ)

ಪ್ರತಿಕ್ರಿಯೆ: ಶ್ರೀ ದೇವು ಹನೇಹಳ್ಳಿ ಕಾರ್ಯಕ್ರಮ ನಿರ್ವಾಹಕರು, ಆಕಾಶವಾಣಿ, ಕಾರವಾರ

ಕವಿಗೋಷ್ಠಿ:     ಅಪರಾಹ್ನ 2.30ರಿಂದ 3.45ರವರೆಗೆ

(ಆಯ್ದ 10 ಯುವ ಕವಿಗಳಿಂದ ಕವನ ವಾಚನ)

ಪ್ರತಿಕ್ರಿಯೆ: ಡಾ ಆನಂದ ಋಗ್ವೇದಿ, ಕವಿಗಳು, ದಾವಣಗೆರೆ

ಸಮರೋಪ ಸಮಾರಂಭ   ಸಂಜೆ 4.00ಗಂಟೆಗೆ

ಸಮಾರೋಪ ಭಾಷಣ: ಡಾ.ಹೆಚ್ ಆರ್ ವಿಶ್ವಾಸ್,

ಕೇಂದ್ರ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ ಪುರಸ್ಕೃತರು, ಭಾಷಾತಜ್ಞರು, ಮಂಗಳೂರು

Advertisements

Leave a comment

Filed under Articles

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s