ಕಣಿಪುರ ದೇಗುಲ ಉಳಿಸಿ ಹೋರಾಟ: ಸಂಘರ್ಷದ ಮೋಡಗಳು ಸಂಭ್ರಮದ ಮಳೆ ಸುರಿಸೀತೆ?

Kanipur Gopalakrishna Temple on the verge of extinction fearing road widening of NH-17

ದಕ್ಷಿಣ ಕನ್ನಡ ಜಿಲ್ಲೆಯ ಜನಜೀವನವು ಬಹುಪಾಲು ದೇವಸ್ಥಾನ ಕೇಂದ್ರಿತ. ವೈದಿಕ ಅಥವಾ ಅವೈದಿಕ ಸಂಪ್ರದಾಯಗಳೇನೆ ಇರಲಿ, ದೇವರ ಮೇಲೆ ನಂಬಿಕೆಯಿತ್ತು ಬದುಕನ್ನು ಕಟ್ಟಿದ, ಕಟ್ಟುತ್ತಿರುವ ಜನ ಸಮೂಹವದು .

ಏಳು ಭಾಷೆಯ ಸಂಗಮ ಭೂಮಿ ಕಾಸರಗೋಡು, ಕನ್ನಡ ನೆಲದ  ಪ್ರದೇಶ. ವಿವಾದಾಸ್ಪದ ರಾಜಕೀಯ ನಿಲುವುಗಳಿಂದಾಗಿ ತನ್ನದೇ ಕಥೆ ಮತ್ತು ವ್ಯಥೆ ಹೊಂದಿರುವ ಕಾಸರಗೋಡು, ಸಾಮಾಜಿಕ ಸಮಸ್ಯೆಗಳಿಗೆ ಸದಾ ಸ್ಪಂದನಶೀಲ. ಕನ್ನಡ ಭಾಷೆಯಾ ಅಳಿವು ಉಳಿವಿನ ಪ್ರಶ್ನೆ ಬಂದಾಗ ಇಡೀ ಜಿಲ್ಲೆಯ ಜನತೆ ಕನ್ನಡ ಪರ ಚಳುವಳಿಯಲ್ಲಿ ಬ್ಹಾಗವಹಿಸಿತ್ತು. ಇಡೀ ದೇಶವನ್ನೇ ಪ್ರಭಾವಿಸುವ ಅನೇಕ ಯಶಸ್ವೀ  ಜನಾಂದೋಲನಗಳಿಗೆ ಕಾಸರಗೋಡು ತವರೂರು.
ಇದೀಗ ಮತ್ತೆ ಪ್ರಬಲ ಸಾರ್ವಜನಿಕ ಆಂದೋಲನವೊಂದು ಕುಡಿಯೊಡೆಯುತ್ತಿದೆ.
ಶತಮಾನಗಳಿಂದಲೂ ಕಾಸರಗೋಡಿನವರಿಗೆ ಪ್ರಾದೇಶಿಕ ‘ಸೀಮೆ’ ಆಧಾರಿತ ವ್ಯವಹಾರಗಳು ನಿತ್ಯಜೀವನದಲ್ಲಿ ಹಾಸು ಹೊಕ್ಕಾಗಿದೆ. ಸೀಮೆಗೆ ನಾಲ್ಕು ಪ್ರಮುಖ ದೇವಸ್ಥಾನಗಳು. ಅವೆಂದರೆ  ಅಡೂರು ಪಯಸ್ವನಿ ನದಿ ತಟದಲ್ಲಿನ ಮಹಾಲಿಂಗೇಶ್ವರ ದೇವಸ್ಥಾನ, ಮಧೂರಿನ ಮಧುವಾಹಿನಿ ದಡದ ಶ್ರೀಮದನಂತೇಶ್ವರ ಸಿದ್ಧಿ ವಿನಾಯಕ ಕ್ಷೇತ್ರ,  ಮುಜಂಗಾವು ಪಾರ್ಥಸಾರಥಿ ದೇಗುಲ ಹಾಗೂ ನಾಲ್ಕನೆಯದು ಕುಂಬಳೆಯ ಕಣಿಪುರ ಗೋಪಾಲಕೃಷ್ಣ ದೇವಸ್ಥಾನ. 
ಈ ದೇಗುಲಗಳು ಕಾಸರಗೋಡು ಜನತೆಯ ಬದುಕಿನ ಏಕತೆ ಮತ್ತು ಗತಿಶೀಲತೆಗಳ ಕೇಂದ್ರ ಬಿಂದುಗಳಾಗಿ ಜನಮಾನಸದಲ್ಲಿ ಸ್ಥಾಯಿಯಾಗಿದೆ. 
ಏನಿದು ಆಂದೋಲನ? 
ಮಂಗಳೂರು – ಕಾಸರಗೋಡು ನಡುವಣ, ಕುಂಬಳೆ ಪೇಟೆಯನ್ನು ಆಲಂಗಿಸಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಇದೀಗ ಅಭಿವೃದ್ಧಿ ಕಾಮಗಾರಿಯ ಸದ್ದು. ಈ ಕಾಮಗಾರಿ ನಿಮಿತ್ತ ಅಲ್ಲಿನ ಪ್ರಮುಖ ಶ್ರದ್ಧಾಕೆಂದ್ರವಾದ ಕಣಿಪುರ ಗೋಪಾಲಕೃಷ್ಣ ದೇವಸ್ಥಾನ ಇದೀಗ ನಿರ್ನಾಮಗೊಳ್ಳುವ ಭೀತಿಯಲ್ಲಿದೆ. ಒಂದು ಬದಿಗೆ ಅರಬೀ ಸಮುದ್ರ , ಇನ್ನೊಂದು ಬದಿಗೆ ಕಣಿಪುರ ದೇವಸ್ಥಾನ. ಇದರ ಮಧ್ಯೆ ರಾಷ್ಟ್ರೀಯ ಹೆದ್ದಾರಿ 17. 
ರಸ್ತೆ ಅಗಲೀಕರಣದ ನೆಪದಿಂದ  ಕನ್ನಡ ನೆಲದ ಈ ಪ್ರಧಾನ ದೇವಸ್ಥಾನದ ಅಸ್ತಿತ್ವಕ್ಕೆ ಕೊಡಲಿಯೇಟು ಬೀಳಲಿದೆ. 
ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ವಿದ್ಯಮಾನ  ಎನಿಸಿದರೂ ಇದರ ಹಿಂದೆ ಬಲು ದೊಡ್ಡ ಷಡ್ಯಂತ್ರ ಇರುವುದನ್ನು ಮನಗಂಡ ಊರ ಪ್ರಮುಖ ಸಾಮಾಜಿಕ ಮುಂದಾಳುಗಳು, ಹಿಂದೂ ಪರ ಸಂಘಟನೆಗಳ ನೇತಾರರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವ್ಯಾಪಕ ಜನಾಂದೋಲನಕ್ಕೆ ಕರೆಯಿತ್ತಿದಾರೆ.
ಜನವರಿ 24 ರಂದು ಕಾಸರಗೋಡಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಧರನಿಯೊಂದನ್ನು ಆಯೋಜಿಸಲಾಗಿದ್ದು 5೦,೦೦೦ ಕ್ಕೂ ಹೆಚ್ಚು ನಾಗರಿಕರು ಭಾಗವಹಿಸುವ ನಿರೀಕ್ಷೆಯಿದೆ. 
ಅಭಿವೃದ್ಧಿ ಹೆಸರಿನಲ್ಲಿ ಹಿಂದೂ ಧಾರ್ಮಿಕ ಶ್ರದ್ಧಾಕೆಂದ್ರಗಳನ್ನೇ ಗುರಿಯಾಗಿರಿಸುವುದು ಕಾಂಗ್ರೆಸ್ಸ್- ಎಡ ಪಕ್ಷಗಳಿಗೆ ಜಾಯಮಾನವಾಗಿದೆ. ನೂರಾರು ಮಠ-ಮಂದಿರಗಳು ಧ್ವಂಸವಾದಾಗ ಅಧಿಕಾರದ ಪೀಥದಲ್ಲಿದ್ದರೂ ದಿವ್ಯ ಮೌನ ವಹಿಸಿದ ಈ ಸರ್ಕಾರಗಳು ರಾಕ್ಷಸೀ ಯಂತ್ರಗಳ ಮೂಲಕ ಮತ್ತೆ ಹಿಂದೂಗಳ ಶ್ರದ್ಧಾ ಭಾವನೆಗಳ ಮೇಲೆ ಸವಾರಿ ಹೊರಟಿದೆ. 
ಅಧಿಕಾರಕ್ಕೆ ಬರುವ ಮುಂಚೆ ಕೇವಲ 56 ಪ್ರಧಾನ ರಾಷ್ಟ್ರೀಯ ಹೆದ್ದಾರಿಗಳು ಇದ್ದುದನ್ನು ಮನಗಂಡ ಆಟಲ ಬಿಹಾರಿ ವಾಜಪೇಯೀ, ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನಾ ಮೂಲಕ ದೇಶದಲ್ಲಿ ಸಂಪರ್ಕ ಕ್ರಾಂತಿ ಮಾಡಿದವರು. ಕೇವಲ 5ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಂಖೆಯಯನ್ನು 56 ರಿಂದ 216 ರ ತನಕ ಕೊಂಡೊಯ್ದ ಕೀರ್ತಿ ಅವರದ್ದು. ಆದರೆ ದೇಶವಾಸಿಗಳ ಮನ ನೋಯಿಸದೆ ಈ ಕಾಮಗಾರಿ ಸಾಧಿಸಿದ ದೂರದೃಷ್ಟಿ ಕಾಂಗ್ರೆಸ್ಸ್- ಎಡ ಪಕ್ಷಗಳ ನಾಯಕರಿಗೆ ಉದಿಸುವುದೆಂದು? ಗಡಿ ಕುರಿತ ಒಂದೇ ಒಂದು ತಂಟೆ- ತಕರಾರಿಲ್ಲದೆ ಆಟಲ ಬಿಹಾರಿ ವಾಜಪೇಯೀ ಪ್ರಧಾನಿಯಾಗಿದ್ದಾಗ ಝಾರ್ಖಂಡ್, ಉತ್ತರಾಂಚಲ ಮತ್ತು ಚತ್ತೀಸ್-ಘದ್ ರಾಜ್ಯಗಳ ರಚನೆಯಾಯಿತು, ಆದರೆ ತೆಲಂಗಾಣ ಕುರಿತು ಕಾಂಗ್ರೆಸ್ಸ್ ದುರ್ಬಲ ನೀತಿ ಬಯಲುಗೊಳಿಸಿದೆ.
ಮನಸ್ಸುಗಳನ್ನು ಗೆಲ್ಲದೆ ರಾಷ್ಟ್ರ ಕಟ್ಟುವುದು ಹೇಗೆ? ಆದರಿಂದ ಒಂದು ಪ್ರದೇಶದ ಜನರ ಮನಸನ್ನು ನೋಯಿಸಿ ಅಲ್ಲಿ ಮಾಡುವ ಅಭಿವೃದ್ಧಿ ಯಾವ ಪುರುಷಾರ್ಥಕ್ಕಾಗಿ?

ಕಾಸರಗೋಡಿನ ಈ ಸಮಸ್ಯೆ ಕೇವಲ ಒಂದು ಪ್ರದೇಶಕ್ಕೆ ಮಾತ್ರ ಸೀಮಿತ ವಾಗಿಲ್ಲ. Constructive development ಅಥವಾ Sustainable development ಕುರಿತು ನಮ್ಮ ನಾಯಕರು ಅರಿಯುವುದೆಂಟು?
ಇರುವ ಸ್ಮಾರಕ, ಕಟ್ಟಡ, ನೈಸರ್ಗಿಕ ರಚನೆಗಳನ್ನು ಯಥಾವತ್ ಉಳಿಸಿ ಪರ್ಯಾಯ ಕಂಡುಕೊಳ್ಳದೆ ಎಲ್ಲವನ್ನೂ ಮೂಗಿನ ನೇರಕ್ಕೆ ತೂಗಿ ನೋಡುವುದು ಸೂಕ್ತವೆ? 
ದೇವಸ್ಥಾನ ಬೇರೆ ಕಡೆ ಕಟ್ಟಿ, ದೇವರು ಎಲ್ಲೆಲ್ಲೂ  ಇದ್ದಾನೆ ಅಲ್ಲವೇ? ಎಂಬಿತ್ಯಾದಿ ಮಾತುಗಳು ನಿರೀಕ್ಷೆಯಂತೆ ಕೇಳಿಬಂದರೂ, ಏಕಾ-ಏಕಿ  ದೇವಸ್ಥಾನ ನೆಲಸಮ ಮಾಡಹೊರಟರೆ ಪ್ರಜ್ಞಾವಂತ ನಾಗರಿಕರು ಸುಮ್ಮನಿರುತ್ತಾರೆಯೇ? ದೇವಸ್ಥಾನವನ್ನು ಹೊಸದಾಗಿ ಬೇರೆಡೆ ಕಟ್ಟುವ ಆ ಸಾಧ್ಯತೆ ಎರಡನೇ ಆಯ್ಕೆ. ಅದನ್ನು ಹೇಗೆ ಬೇಕಾದರೂ ಸ್ವೀಕರಿಸಬಹುದು. ಆ ಶಕ್ತಿ ಹಿಂದೂ ಸಮಾಜಕ್ಕೆ ಇದೆ. 
ಬೃಹತ್ ಪ್ರತಿಭಟನೆಗೆ ಕಾಸರಗೋಡು ಸಿದ್ಧವಾಗಿದೆ. 
ಜನರ ಶಕ್ತಿಯೇ ಜನಾರ್ಧನ ಸ್ವರೂಪಿಯಾಗಿ ಪ್ರಕಟಗೊಂಡರೆ ಅದನ್ನು ತಡೆಯುವವರಾರು? 
ಸಂಘರ್ಷದ ಮೋಡಗಳು ಕಾಸರಗೋಡಿನಲ್ಲಿ  ಸಂಭ್ರಮದ ಮಳೆ ಸುರಿಸುವ ಆಶಯ ಅಲ್ಲಿಯ ಜನತೆಯಲ್ಲಿ ಒಡಮೂಡಿದೆ.
ಏನಾಗುತ್ತದೋ ಕಾದು ನೋಡೋಣ .

Advertisements

1 Comment

Filed under Articles

One response to “ಕಣಿಪುರ ದೇಗುಲ ಉಳಿಸಿ ಹೋರಾಟ: ಸಂಘರ್ಷದ ಮೋಡಗಳು ಸಂಭ್ರಮದ ಮಳೆ ಸುರಿಸೀತೆ?

  1. KESHAVA PRASAD HALEMANE

    If (suppose) this Kanipura Sri Gopalakrishna Temple were to have been built on the national highway side (as are many many ‘worship-centers’ all around the country) AFTER the highway was built, that can certainly be one issue. If on the other hand the national highway was built so close to this age old temple (as the facts stand) it is entirely a different issue! The question now is – why the national highway authority decided to cut through that narrow stretch between the temple and the associated Shanti Kuteera(?) knowing full well that there is hardly any additional margin space for future expansion/broadening of the highway ? In spite of this historicity fact-of-detail, resolving this problem may require a well focused effort on the part of the Hindu community leaders – both as expression of people’s wishes as well as legality etc. May God Bless Everyone.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s