Fake facts in report on RSS in today’s Kannada Prabha: A Reaction

by http://www.facebook.com/mukundachannakeshavapura

ಇಂದಿನ ಕನ್ನಡಪ್ರಭ ಪತ್ರಿಕೆಯಲ್ಲಿ ಸಂಘಪರಿವಾರದ ಸಂಘಟನೆಗಳಿಗೆ ಮತ್ತು ಪ್ರಮುಖರಿಗೆ ಭೂಮಿನೀಡಿದ್ದರಿಂದ ಶ್ರೀ ಯೆಡಿಯುರಪ್ಪಅವರನ್ನು ಅಧಿಕಾರದಲ್ಲಿ ಉಳಿಸಲು ಅವರು ಪ್ರಯತ್ನಿಸಿದರು ಎಂಬಂತೆ ಪ್ರಮುಖ ಸುದ್ದಿ ಪ್ರಕಟಿಸಿದ್ದಾರೆ. ಸುದ್ದಿಯ ಮೂಲ Mail Today ಪತ್ರಿಕೆ.

 

ನಿನ್ನೆಯ ವೆಬ್ ಸಂಚಿಕೆಯಲ್ಲಿ ಪ್ರಕಟವಾದ ಸುದ್ದಿ.ಕನ್ನಡಪ್ರಭದ ಸಂಪಾದಕರೆ ಪ್ರಮುಖರಾಗಿರುವ ಸುವರ್ಣ ಚಾನಲ್ನಲ್ಲಿ ಈ ಸುದ್ದಿ ನಿನ್ನೆ ಸಾಕಷ್ಟು ಬಾರಿ ಬಿತ್ತರವಾಗುತಿತ್ತು.ಸುದ್ದಿಯು ಅಪಪ್ರಚಾರದ ಉದ್ದೇಶದಿಂದಲೇ ಪ್ರಕಟ ಮಾಡಿರುವನ್ತಹುದು ಎಂದು ಯಾರಿಗಾದರೂ ತಿಳಿಯುತ್ತದೆ.

 
1. ಸುದ್ದಿಯಲ್ಲಿ ಹಲವಾರು ಸುಳ್ಳುಗಳಿವೆ.ಅದರಲ್ಲಿರುವ ಅನೇಕ ವ್ಯಕ್ತಿಗಳು ಸಂಘಕ್ಕೆ ಸಂಭಂದಿಸಿದವರೇ ಅಲ್ಲ.ಮತ್ತಿತರರು ರಾಜಕೀಯ ವಿಷಯಗಳ ಬಗ್ಗೆ ಚಿಂತಿಸುವವರೇ ಅಲ್ಲ. ಅದರಲ್ಲಿಹೆಸರಿಸಲಾಗಿರುವ ಕೆಲವು ಸಂಸ್ಥೆಗಳಿಗೆ ಒಂದಿಂಚು ಭೂಮಿಯನ್ನು ಯಾರೂ ಕೊಟ್ಟಿಲ್ಲ. ಈಬಗ್ಗೆ ನಿನ್ನೆಯೇ ವಿವರಣೆ ಕೊಟ್ಟ ನಂತರವೂ ಮತ್ತೆ ಇಂದು ಸುದ್ದಿ ಪ್ರಕಟಿಸಿರುವುದು ಕನ್ನ್ದಪ್ರಭಾದಂತಹ ಪತ್ರಿಕೆಗೆ ತಕ್ಕದಲ್ಲ.


2. ಮೇಲ್ ಟುಡೇ ಪತ್ರಿಕೆಪ್ರಕಟಿಸಿದ್ದನ್ನು ಯಾವ ರೀತಿಯ ಪರಿಶಿಲನೆಯನ್ನೂ ಮಾಡದೆ ಹಾಗೆ ಪ್ರಕಟಿಸಿರುವುದು ಎಷ್ಟು ಸರಿ? ಯೆಡಿಯುರಪ್ಪ ಅವರು ಎಷ್ಟುಕಾಲ ಅಧಿಕಾರದಲ್ಲಿ ಇರಬೇಕೆಂಬುದು ಒಂದು ರಾಜಕೀಯ ನಿರ್ಧಾರ. ಅದನ್ನು BJP ತೆಗೆದುಕೊಂಡಿದೆ. ಸಂಘದ ಪ್ರಮುಖರನ್ನು ಸಲಹೆ ಕೇಳಿದಾಗ ಸೂಕ್ತ ಸಲಹೆ ನೀಡಿದೆ. ಅ ಸಲಹೆಗಳನ್ನು ನೈತಿಕತೆಯ ಆಧಾರದಲ್ಲೇ ಕೊಡಲಾಗಿದೆ. ಸಂಘದ ಪದ್ದತಿಯಲ್ಲಿ ಎಲ್ಲವನ್ನು ಸಾರ್ವಜನಿಕವಾಗಿ ಚರ್ಚೆ ಮಾಡಲಾಗುವುದಿಲ್ಲ.ರಾಜಕೀಯ ಕ್ಷೇತ್ರದಲ್ಲಿ ಇರುವ ಸ್ವಯಂಸೇವಕರು ಸರಿಮಾರ್ಗ ದಲ್ಲಿ ಇರಬೇಕೆಂಬ ಪ್ರಯತ್ನ ಮಾಡುತ್ತಲೇ ಇರುತ್ತದೆ. ಕೆಲವು ಸಂಸ್ಥೆ ಗಳಿಗೆ ಭೂಮಿ ನೀಡುವದರಿಂದ ಸಂಘದ ಪ್ರಮುಖರು ಚಿಂತಿಸುವ ಮಾರ್ಗದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ .


3. ಸಾರ್ವಜನಿಕ ಉದ್ದೇಶಗಳಿಗೆ ಭೂಮಿಯನ್ನು ಕೊಡುವುದು ಈ ಸರಕಾರ ಬಂದ ನಂತರ ಪ್ರಾರಂಭವಾದ ಪದ್ದತಿಯಲ್ಲ. ಸುದ್ದಿಯಲ್ಲಿ ಹೆಸರಿಸಲಾಗಿರುವ ಅನೇಕ ಸಂಸ್ಥೆ ಗಳಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರಗಲಿದ್ದಾಗಲೂ ಭೂಮಿಯನ್ನು ನೀಡಲಾಗಿದೆ. ಹಿಂದುಳಿದ ಕ್ಷೇತ್ರಗಳಲ್ಲಿ ಶಿಕ್ಷಣ ,ಆರೋಗ್ಯ ದಂತಹ ಸೇವಾ ಕಾರ್ಯದಲ್ಲಿ ತೊಡಗಿರುವ ಈ ಸಂಸ್ಥೆಗಳಿಗೆ ಸರಕಾರ ಸಹಾಯ ಮಾಡುವುದು ಅದರ ಕರ್ತವ್ಯ. ಅನಾಥ ಮಕ್ಕಳಿಗೆ ಜೀವನ ಕೊಡುವ , ಹಿಂದುಳಿದ ಕಾಲೋನಿಯ ಜನರಿಗೆ ಸೇವೆ ಮಾಡುವ , ಗೋ ಸಂರಕ್ಷಣೆಯಲ್ಲಿ ತೊಡಗಿರುವ , ಶಿಕ್ಷಣದಲ್ಲಿ ಹೊಸ ಪ್ರಯೋಗ ಮಾಡುತ್ತಿರುವ ಸಂಸ್ಥೆಗಳಿಗೆ ಭೂಮಿಯನ್ನು ಕೊಟ್ಟಿರುವುದಕ್ಕೆ ಮೇಲ್ ಟುಡೇ ಪತ್ರಿಕೆ ಕ್ಷುಲ್ಲಕ ಉದ್ದೇಶದಿಂದ ರಾಜಕೀಯ ಬಣ್ಣ ನೀಡಿದೆ. ಕನ್ನಡ ಪ್ರಭ ಅದರಲ್ಲಿ ಬೀಳಬೇಕಿತ್ತೆ?

4. ಸಾರ್ವಜನಿಕ ಕಾರ್ಯದಲ್ಲಿ ತೊಡಗಿರುವ ಸಂಘದಂತಹ ಸಂಘಟನೆಗಳ ಕಾರ್ಯಕರ್ತರು ರಾಜಕೀಯ ಕಾರಣಗಳಿಗೆ ವಿರೋಧ ಎದಿರಿಸುವುದರೊಂದಿಗೆ ಕನ್ನಡಪ್ರಭಗಳನ್ನೂ ಎದುರಿಸಬೇಕಾಗಿ ಬಂದಿರುವುದು ವಾಸ್ತವ. ನಮ್ಮ ಗುರಿ , ದಾರಿ ಸರಿಯಾಗಿದ್ದಾಗ ಅದೇನು ದೊಡ್ಡದಲ್ಲ. ಪತ್ರಿಕೆ ಓದಿ ಸಾಮಾಜಿಕ ಸೇವೆಗೆ ತೊಡಗುವವರು ಎಷ್ಟು ಮಂದಿ? ನಮ್ಮ ಪರಿಚಿತರಿಗಾಗಿ ಈ ಬರಹದ ತುಣುಕು.

http://www.facebook.com/mukundachannakeshavapura

Advertisements

7 Comments

Filed under Articles

7 responses to “Fake facts in report on RSS in today’s Kannada Prabha: A Reaction

 1. ಪ್ರವೀಣ್ ಆ ವಿ

  ನಾನ್ ಮೊದಲೇ ಅನ್ಕೊಂಡೆ ವಿಷಯ ಹೀಗೇ ಇರಬೇಕು ಅಂತ, ಇಂತಹವರ ವಿರುದ್ಧ ಮಾನನಸ್ತ ಮೊಕದ್ದಮೆ ಹೂದಲೀ ಬೇಕು!

 2. ravi hennagara

  sangh parivarvannu yaru indillu hitikallu saidavilla………….

 3. M K Kudva

  ಕನ್ನಡ ಪ್ರಭ ಪತ್ರಿಕೆಯು ಬರಬರುತ್ತ ಪೀತ ಪತ್ರಿಕೋದ್ಯಮದತ್ತ ಜಾರುತ್ತಿದೆಯೆ?
  ಕೇವಲ ಪತ್ರಿಕೆಯ ಪ್ರಸಾರ ಹೆಚ್ಚಿಸಿಕೊಳ್ಳುವ ಭರದಲ್ಲ್ಲಿ ಸುದ್ದಿಯನ್ನು ಬಿತ್ತರಿಸುವಾಗ ಅದು ಸತ್ಯವೋ ಅಥವಾ ಸುಳ್ಳೋ ಎ೦ದು ತಿಳಿದುಕೊಳ್ಳದೆ ಅಥವಾ ಸರಿಯಾಗಿ ವಿಮರ್ಶೆ ಮಾಡದೆ ಪ್ರಕಟಿಸಿದಲ್ಲಿ ಮು೦ದೆ ಆ ಪತ್ರಿಕೆಯೂ ಮೂಲೆಗೆ ಸೇರಬಹುದು. ಜನರನ್ನು ಯಾವಾಗಲೂ ಮೋಸಗೊಳಿಸಲು ಸಾಧ್ಯವಾಗುವುದಿಲ್ಲವೆ೦ಬ ವಿಚಾರ ಪತ್ರಿಕೆಯ ಸ೦ಪಾದಕರು ತಿಳಿದುಕೊ೦ಡಲ್ಲಿ ಆ ಪತ್ರಿಕೆಗೆ ಒಳ್ಳೆಯದು. ಇಲ್ಲವಾದಲ್ಲಿ ಮುರ್ಡೋಕ್ ಗೆ ಇ೦ಗ್ಲೆ೦ಡ್ ನಲ್ಲಿ ಆದ ಗತಿ ಆ ಪತ್ರಿಕೆಯ ಮಾಲಿಕರಿಗೂ ತಪ್ಪಿದ್ದಲ್ಲ.

  ಎಮ್.ಕೆ.ಕುಡ್ವ, ಸಿಡ್ನಿ

 4. santhosh

  bhatra badhuke astu.

 5. shri hari

  nimma abhiprayakke nanna sahamatavide.

 6. b e suresha

  vishweshwara bhattarige yake thale kedto gotthagalilla. sari idda evaru heege adhaara illade suddhi prakatisuthiddare. yako gotthilla.

 7. K.P.Pradyumna

  Kannadaprabha is now working to take revange against BSY because he stood in between Visweswara Bhat and MLC seat. kannadaprabha lost all its glory after this VB took charge and Suvarna channel has stooped to the lowest level. the viewrs are fed up and I personally stoped reading KP and stop viewing Suvarna news.
  Kannadaprabha with this attitude will in no time find its place.
  This is against the human right and many individuals have to approach court under Public Interest litigation or file a defamation case against KB and Suvarna news channel. It is high time to put a stop to the adocity of VB.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s